ಸ್ಪಿನ್‌ ಪಿಚ್‌ನಲ್ಲಿ ಸ್ಪೈಕ್‌ ಶೂ ಬೇಡ: ಅಜರುದ್ದೀನ್‌ ಸಲಹೆ

Suvarna News   | Asianet News
Published : Feb 27, 2021, 12:03 PM IST
ಸ್ಪಿನ್‌ ಪಿಚ್‌ನಲ್ಲಿ ಸ್ಪೈಕ್‌ ಶೂ ಬೇಡ: ಅಜರುದ್ದೀನ್‌ ಸಲಹೆ

ಸಾರಾಂಶ

ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಯಾವ ರೀತಿಯ ಶೂಗಳನ್ನು ಬಳಸಬೇಕು ಎನ್ನುವುದರ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್‌ ಸಲಹೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಫೆ.27): ಮೊಟೇರಾದಂತಹ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಆಡುವಾಗ ಬ್ಯಾಟ್ಸ್‌ಮನ್‌ಗಳು ಸ್ಪೈಕ್‌ (ಸಣ್ಣ ಗಾತ್ರದ ಮೊಳೆ) ಶೂಗಳನ್ನು ಧರಿಸಿ ಆಡಿದರೆ ಫುಟ್‌ವರ್ಕ್‌ಗೆ ಸಮಸ್ಯೆಯಾಗಲಿದೆ, ಹೀಗಾಗಿ ರಬ್ಬರ್‌ ತಳವಿರುವ ಶೂಗಳನ್ನು ಧರಿಸಿ ಆಡಬೇಕು ಭಾರತದ ಮಾಜಿ ನಾಯಕ ಮೊಹಮದ್‌ ಅಜರುದ್ದೀನ್‌ ಸಲಹೆ ನೀಡಿದ್ದಾರೆ. 

‘ಸುನಿಲ್‌ ಗವಾಸ್ಕರ್‌, ಮೋಹಿಂದರ್‌ ಅಮರ್‌ನಾಥ್‌, ದಿಲೀಪ್‌ ವೆಂಗ್‌ಸರ್ಕಾರ್‌, ಆಲನ್‌ ಬಾರ್ಡರ್‌, ಕ್ಲೈವ್‌ ಲಾಯ್ಡ್‌ರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳು ರಬ್ಬರ್‌ ತಳದ ಶೂಗಳನ್ನೇ ಧರಿಸಿ ಆಡುತ್ತಿದ್ದರು. ಸ್ಪೈಕ್ಸ್‌ ಇಲ್ಲದೆ ಆಡಿದರೆ ವಿಕೆಟ್‌ ಮಧ್ಯೆ ಓಡುವಾಗ ಜಾರಬಹುದು ಎನ್ನುವುದು ಹಲವರ ವಾದ. ಆದರೆ ವಿಂಬಲ್ಡನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂನಲ್ಲಿ ಎಲ್ಲರೂ ರಬ್ಬರ್‌ ತಳ ಹೊಂದಿರುವ ಶೂಗಳನ್ನೇ ಧರಿಸಿ ಆಡುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅಜರ್‌ ಟ್ವೀಟ್‌ ಮಾಡಿದ್ದಾರೆ.

ಬ್ರಿಟನ್‌ನ ಮಾಧ್ಯಮಗಳಿಂದ ರೂಟ್‌ ಪಡೆಗೆ ಹಿಗ್ಗಾಮುಗ್ಗಾ ಟೀಕೆ..!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೇವಲ ಎರಡೇ ದಿನದಲ್ಲಿ ಇಂಗ್ಲೆಂಡ್‌ ವಿರುದ್ದ 10 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಇನ್ನು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್‌ 04ರಿಂದ ಇದೇ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ