'ಕಾಶ್ಮೀರ್ ಬನೇಗಾ ಪಾಕಿಸ್ತಾನ್' ಇಂಡೋ-ಪಾಕ್ ಪಂದ್ಯದ ವೇಳೆ ಏನಾಯ್ತು?

By Suvarna NewsFirst Published Feb 4, 2020, 11:53 PM IST
Highlights

ಪಾಕಿಸ್ತಾನವನ್ನು ಬಗ್ಗು ಬಡಿದ ಹುಡುಗರ ತಂಡ / ಅಂಡರ್-19 ವಿಶ್ವಕಪ್ ಫೈನಲ್ ಗೆ ಭಾರತ/ ಪಂದ್ಯದ ವೇಳೆ ಕೇಳಿ ಕಾಶ್ಮೀರ ಬನೇಗಾ ಪಾಕಿಸ್ತಾನ ಘೋಷಣೆ

ಪೋಚೆಫ್‌ಸ್ಟ್ರೋಮ್‌(ಫೆ.04) ಪಾಕಿಸ್ತಾನವನ್ನು ಬಗ್ಗು ಬಡಿದ ಹುಡುಗರ ತಂಡ 19 ವರ್ಷದ ಒಳಗಿನ ಐಸಿಸಿ ವಿಶ್ವಕಪ್ ಫೈನಲ್ ತಲುಪಿದೆ. ಆದರೆ ಪಂದ್ಯದ ವೇಳೆ ಕೇಳಿ ಬಂದ ಘೋಷಣೆಯೊಂದು ದೊಡ್ಡ ಸುದ್ದಿ ಮಾಡುತ್ತಿದೆ.

ಪಂದ್ಯದ ವೇಳೆ  ದಕ್ಷಿಣ ಆಫ್ರಿಕಾದ ಅಭಿಮಾನಿಗಳು 'ಕಾಶ್ಮೀರ ಬನೇಗಾ ಪಾಕಿಸ್ತಾನ' ಎಂಬ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಹರಿದಾಡಲು  ಆರಂಭಿಸಿದೆ.

ಸೆನ್ವೆಸ್ ಪಾರ್ಕ್ ಸ್ಯಾಂಡ್ ನಿಂದ ಕೇಳಿಬಂದ ಈ ಘೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚು ಕುದುರೆಯಂತೆ ಓಡಾಡುತ್ತಿದೆ. ಈ ಹೇಳಿಕೆ ಎಲ್ಲಿಂದ ಬಂತು? ಇದಕ್ಕೆ ಕಾರಣ ಏನು? ಯಾವುದು ಗೊತ್ತಿಲ್ಲ.

ಪಾಕ್ ಗೆ ಮಿಸುಕಾಡಲು ಬಿಡದ ಹುಡುಗರು; ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿಹೋಗಿತ್ತು. 43.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು172 ರನ್ ಗಳಿಸಲು ಮಾತ್ರ ಶಕ್ತವಾಗಿತ್ತು. ಅಲ್ಪ ಮೊತ್ತವ ಬೆನ್ನಟ್ಟಿದ ಭಾರತದ ಆರಂಭಿಕರು ಒಂದು ಕ್ಷಣವೂ ಹಿಡಿತ ತಪ್ಪಿಕೊಳ್ಳಲಿಲ್ಲ. ಮೊದಲು ನಿಧಾನವಾಗಿ ಆಡಿದವರು ನಂತರ ಆಟಕ್ಕೆ ವೇಗ ತುಂಬಿದರು. ಕೊನೆಯದಾಗಿ ಭಾರತ 35.2 ಓವರ್ ಗಳಲ್ಲಿ ಗುರಿ ಸಾಧನೆ ಮಾಡಿತು.

South African guy chants "Kashmir banega Pakistan" from the stands pic.twitter.com/cVwmu1MJC6

— Mir Muhammad 🇵🇰 (@MirPAK5)
click me!