ಡೇಲ್ ಸ್ಟೇನ್‌ ನೆಚ್ಚಿನ ಐಪಿಎಲ್‌ ತಂಡ ಯಾವುದು? ಅಚ್ಚರಿ ಮೂಡಿಸಿದ ಸ್ಟೇನ್‌ ಮಾತು..!

By Suvarna NewsFirst Published Mar 20, 2021, 6:17 PM IST
Highlights

ದಕ್ಷಿಣ ಆಫ್ರಿಕಾ ವೇಗದ ಬೌಲರ್‌ ಡೇಲ್‌ ಸ್ಟೇನ್‌ ತಮ್ಮ ನೆಚ್ಚಿನ ತಂಡ ಯಾವುದು? ಹಾಗೂ ತಮ್ಮ ನೆಚ್ಚಿನ ಆಟಗಾರ ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜೊಹಾನ್ಸ್‌ಬರ್ಗ್(ಮಾ.20): ಈ ಹಿಂದೆ ಐಪಿಎಲ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಆ ಬಳಿಕ ಸ್ಪಷ್ಟನೆ ನೀಡಿದ್ದ ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್‌ ಇದೀಗ ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಪ್ರಶ್ನೋತ್ತರದ ವೇಳೆಯಲ್ಲಿ ತಮ್ಮ ನೆಚ್ಚಿನ ಐಪಿಎಲ್ ತಂಡ ಹಾಗೂ ನೆಚ್ಚಿನ ಆಟಗಾರ ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಒಂದು ಕಾಲದಲ್ಲಿ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಡೇಲ್‌ ಸ್ಟೇನ್‌ ಮಿಲಿಯನ್‌ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕನ್ ಚಾರ್ಜರ್ಸ್‌, ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ತಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವ ಪ್ರಶ್ನೆಗೆ ಚತುರತೆಯಿಂದ ಉತ್ತರ ನೀಡಿರುವ ಸ್ಟೇನ್‌ ಅದಕ್ಕೆ ಬೇಕಾದ ಸಮಜಾಯಿಷಿಯನ್ನು ನೀಡಿದ್ದಾರೆ.

ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವ ಪ್ರಶ್ನೆಗೆ ಸ್ಟೇನ್‌, ನನಗೆ ಎಲ್ಲಾ ತಂಡಗಳು ಇಷ್ಟವೇ. ಆದರೆ ಒಂದು ತಂಡವನ್ನು ಹೆಸರಿಸುವುದಾದರೆ ಅದು ಮುಂಬೈ ಇಂಡಿಯನ್ಸ್‌. ಯಾಕೆಂದರೆ ಮುಂಬೈ ಇಂಡಿಯನ್ಸ್‌ ಸಾಕಷ್ಟು ಸದೃಢವಾಗಿದೆ, ಇದರ ಜತೆಗೆ ಕ್ವಿಂಟನ್ ಡಿ ಕಾಕ್‌ ಮುಂಬೈ ತಂಡದಲ್ಲಿದ್ದು, ಆತ ನನ್ನ ನೆಚ್ಚಿನ ಆಟಗಾರ, ಆತನನ್ನು ನಾವು ಯಾವಾಗಲೂ ಬೆಂಬಲಿಸುತ್ತೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

Favorite IPL team?

— Disregard haters acquire success (@parvsharma54)

ಐಪಿಎಲ್‌ನಲ್ಲಿ ತಾನು ಪ್ರತಿನಿಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್‌ ಹೈದರಾಬಾದ್ ತಂಡ ಬಿಟ್ಟು ಮುಂಬೈ ಇಂಡಿಯನ್ಸ್‌ ತಂಡವನ್ನು ಆಯ್ಕೆ ಮಾಡಿಕೊಂಡಿದ್ದರು ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.

ರಾಗ ಬದಲಿಸಿದ ಸ್ಟೇನ್‌, ತಪ್ಪಾಯ್ತು ಕ್ಷಮಿಸಿ ಎಂದ ಆರ್‌ಸಿಬಿ ಮಾಜಿ ವೇಗಿ..!

ಈ ಹಿಂದೆ ಡೇಲ್ ಸ್ಟೇನ್‌ ಪಾಕಿಸ್ತಾನ ಸೂಪರ್ ಲೀಗ್‌ ಪ್ರತಿನಿಧಿಸುವಾಗ, ಐಪಿಎಲ್‌ನಲ್ಲಿ ಪ್ರತಿಭೆಗಿಂತ ಹಣಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತದೆ ಎಂಬರ್ಥದ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದಾದ ಬಳಿಕ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗಿದ್ದೂ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ದಕ್ಷಿಣ ಆಫ್ರಿಕಾ ವೇಗಿ ಸ್ಟೇನ್‌ ಟ್ವೀಟ್‌ ಮಾಡಿದ್ದರು. 

IPL has been nothing short of amazing in my career, as well as other players too.

My words were never intended to be degrading, insulting, or comparing of any leagues.
Social media and words out of context can often do that.

My apologies if this has upset anyone.
Much love

— Dale Steyn (@DaleSteyn62)

 

 

click me!