ICC Women's T20 World Cup: ಆಂಗ್ಲರನ್ನು ಬಗ್ಗುಬಡಿದು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಹರಿಣಗಳು

Published : Feb 25, 2023, 09:32 AM IST
ICC Women's T20 World Cup: ಆಂಗ್ಲರನ್ನು ಬಗ್ಗುಬಡಿದು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಹರಿಣಗಳು

ಸಾರಾಂಶ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಜಯಭೇರಿ ಬಲಿಷ್ಠ ಇಂಗ್ಲೆಂಡ್ ಎದುರು 6 ರನ್ ರೋಚಕ ಜಯ ಸಾಧಿಸಿದ ಹರಿಣಗಳ ಪಡೆ ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಫೈಟ್

ಕೇಪ್‌​ಟೌನ್‌(ಫೆ.25): ಐಸಿಸಿ ಟೂರ್ನಿ​ಯ ಇತಿ​ಹಾ​ಸ​ದಲ್ಲೇ ಮೊತ್ತ ಮೊದಲ ಬಾರಿ ದಕ್ಷಿಣ ಆ​ಫ್ರಿಕಾ ತಂಡ ಫೈನ​ಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರ​ವಾರ ದಕ್ಷಿಣ ಆ​ಫ್ರಿಕಾ ಮಹಿಳಾ ತಂಡ ಟಿ20 ವಿಶ್ವ​ಕ​ಪ್‌​ನ ಸೆಮಿ​ಫೈ​ನ​ಲ್‌​ನಲ್ಲಿ ಇಂಗ್ಲೆಂಡ್‌ ವಿರುದ್ಧ 6 ರನ್‌ ರೋಚಕ ಗೆಲುವು ಸಾಧಿ​ಸಿತು. 5ನೇ ಬಾರಿ ಫೈನಲ್‌ ಪ್ರವೇ​ಶಿ​ಸುವ ಚೊಚ್ಚಲ ಆವೃತ್ತಿಯ ಚಾಂಪಿ​ಯನ್‌ ಇಂಗ್ಲೆಂಡ್‌ ಕನಸು ಭಗ್ನ​ಗೊಂಡಿತು. ಭಾನು​ವಾರ ಫೈನ​ಲ್‌​ನಲ್ಲಿ ದಕ್ಷಿಣ ಆ​ಫ್ರಿ​ಕಾ, ಆಸ್ಪ್ರೇ​ಲಿಯಾ ವಿರುದ್ಧ ಪ್ರಶ​ಸ್ತಿ​ಗಾಗಿ ಸೆಣ​ಸ​ಲಿ​ದೆ.

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆ​ಫ್ರಿಕಾ ಲಾರಾ ವೊಲ್ವಾರ್ಚ್‌(44 ಎಸೆ​ತ​ಗ​ಳಲ್ಲಿ 53) ಹಾಗೂ ತಾಜ್ಮಿನ್‌ ಬ್ರಿಟ್ಸ್‌(55 ಎಸೆ​ತ​ಗ​ಳಲ್ಲಿ 68)ರ ಅರ್ಧ​ಶ​ತಕಗಳ ನೆರ​ವಿ​ನಿಂದ 20 ಓವ​ರಲ್ಲಿ 4 ವಿಕೆ​ಟ್‌ಗೆ 164 ರನ್‌ ಕಲೆ​ಹಾ​ಕಿತು. ಮಾರಿಯಾನೆ ಕಾಪ್‌ 13 ಎಸೆ​ತ​ಗ​ಳಲ್ಲಿ 27 ರನ್‌ ಸಿಡಿ​ಸಿ​ದರು. ಇಂಗ್ಲೆಂಡ್‌ ಪರ ಸ್ಪಿನ್ನರ್ ಎಕ್ಲೆಸ್ಟೋನ್ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಸ್ಪರ್ಧಾ​ತ್ಮಕ ಗುರಿ ಬೆನ್ನ​ತ್ತಿದ ಇಂಗ್ಲೆಂಡ್‌ ಉತ್ತಮ ಆರಂಭ ಪಡೆ​ದರೂ ಕೊನೆ​ಯಲ್ಲಿ ಎಡ​ವಿತು. 8 ವಿಕೆ​ಟ್‌ಗೆ 158 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು. ಕೊನೆ 18 ಎಸೆ​ತ​ಗ​ಳಲ್ಲಿ 28 ರನ್‌ ಬೇಕಿ​ದ್ದಾಗ ಅಯ​ಬೊಂಗಾ ಖಾಕ ಒಂದೇ ಓವರಲ್ಲಿ ಕೇವಲ 3 ರನ್‌ಗೆ 3 ವಿಕೆಟ್‌ ಕಿತ್ತು ಪಂದ್ಯದ ಗತಿ ಬದ​ಲಿ​ಸಿ​ದರು. ಕೊನೆ ಓವ​ರಲ್ಲಿ 13 ರನ್‌ ಬೇಕಿ​ದ್ದರೂ ಇಂಗ್ಲೆಂಡ್‌ ಕೇವಲ 6 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು. ನ್ಯಾಥಲಿ ಸ್ಕೀವ​ರ್‌​(40), ಡ್ಯಾನಿಲ್‌ ವ್ಯಾಟ್‌​(34) ನಾಯಕಿ ಹೀಥರ್‌ ನೈಟ್‌​(31) ಹೋರಾಟ ವ್ಯರ್ಥ​ಗೊಂಡಿತು.

T20 Women's World Cup: ಭಾರತಕ್ಕೆ ಪದೇ ಪದೇ ನಾಕೌಟ್‌ ಪಂಚ್‌...!

ಸ್ಕೋರ್‌: 

ದಕ್ಷಿಣ ಆ​ಫ್ರಿಕಾ 164/4 (ಬ್ರಿಟ್ಸ್‌ 68, ಲಾರಾ 53, ಎಕ್ಲೆ​ಸ್ಟೋನ್‌ 3-22), 

ಇಂಗ್ಲೆಂಡ್‌ 158/8 (ಶ್ಕೀ​ವರ್‌ 40, ವ್ಯಾಟ್‌ 34, ಖಾಕ 4-29)

ಟೆಸ್ಟ್‌: ಬ್ರೂಕ್‌, ರೂಟ್‌ ಶತ​ಕ, ಇಂಗ್ಲೆಂಡ್‌ 315/3

ವೆಲ್ಲಿಂಗ್ಟ​ನ್‌: ಹ್ಯಾರಿ ಬ್ರೂಕ್‌, ಜೋ ರೂಟ್‌ ಭರ್ಜರಿ ಶತ​ಕದ ನೆರ​ವಿ​ನಿಂದ ನ್ಯೂಜಿ​ಲೆಂಡ್‌ ವಿರು​ದ್ಧದ 2ನೇ ಟೆಸ್ಟ್‌​ನಲ್ಲಿ ಮೊದಲ ದಿನವೇ ಇಂಗ್ಲೆಂಡ್‌ ಕೇವಲ 65 ಓವ​ರಲ್ಲಿ 3 ವಿಕೆ​ಟ್‌ಗೆ 315 ರನ್‌ ಕಲೆ​ಹಾ​ಕಿದೆ. 21ಕ್ಕೆ 3 ವಿಕೆಟ್‌ ಕಳೆ​ದು​ಕೊಂಡ ಬಳಿ​ಕ ಇಂಗ್ಲೆಂಡ್‌ ಆಕ್ರ​ಮ​ಣ​ಕಾರಿ ಆಟ​ಕ್ಕೆ ಒತ್ತು​ಕೊ​ಟ್ಟಿತು. ಬ್ರೂಕ್‌-ರೂಟ್‌ ಮುರಿ​ಯದ 4ನೇ ವಿಕೆ​ಟ್‌ಗೆ 294 ರನ್‌ ಜೊತೆ​ಯಾ​ಟ​ವಾ​ಡಿ​ದರು. ಕೇವಲ 6ನೇ ಟೆಸ್ಟ್‌ ಆಡು​ತ್ತಿ​ರುವ ಬ್ರೂಕ್‌​(169 ಎಸೆ​ತ​ದಲ್ಲಿ 184*) 4ನೇ ಶತಕ ಪೂರ್ತಿ​ಗೊ​ಳಿ​ಸಿ​ದರು. 101 ರನ್‌ ಗಳಿಸಿರುವ ರೂಟ್‌, ಟೆಸ್ಟ್‌ನಲ್ಲಿ 29ನೇ ಶತಕ ಪೂರೈಸಿದರು.

3ನೇ ಟೆಸ್ಟ್‌​ಗಿಲ್ಲ ಕಮಿ​ನ್ಸ್‌: ಸ್ಟೀವ್ ಸ್ಮಿತ್‌ ಆಸೀಸ್‌ ನಾಯಕ

ಸಿಡ್ನಿ: ಭಾರತ ವಿರು​ದ್ಧದ ಮೊದ​ಲೆ​ರಡು ಟೆಸ್ಟ್‌ನ ಹೀನಾಯ ಸೋಲಿನ ನಡುವೆ ಆಸ್ಪ್ರೇ​ಲಿ​ಯಾಕ್ಕೆ ಮತ್ತೆ ಭಾರೀ ಹಿನ್ನ​ಡೆ​ಯಾ​ಗಿ​ದ್ದು, ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ತಾಯಿಗೆ ತೀವ್ರ ಅನಾ​ರೋಗ್ಯ ಹಿನ್ನೆ​ಲೆ​ಯಲ್ಲಿ ಆಸ್ಪ್ರೇ​ಲಿ​ಯಾಕ್ಕೆ ಮರ​ಳಿ​ದ್ದಾರೆ. ಹೀಗಾಗಿ ಮಾರ್ಚ್‌ 1ರಿಂದ ಇಂದೋ​ರ್‌​ನಲ್ಲಿ ಆರಂಭ​ವಾ​ಗ​ಲಿ​ರುವ 3ನೇ ಟೆಸ್ಟ್‌ ಪಂದ್ಯ​ಕ್ಕೆ ಗೈರಾ​ಗ​ಲಿ​ದ್ದಾರೆ. 

ಅವರ ಬದಲು ಸ್ಟೀವ್‌ ಸ್ಮಿತ್‌ ತಂಡ​ವನ್ನು ಮುನ್ನ​ಡೆ​ಸ​ಲಿ​ದ್ದಾರೆ. ಆರಂಭ​ದಲ್ಲಿ ಕಮಿನ್ಸ್‌ 3ನೇ ಟೆಸ್ಟ್‌ಗೂ ಮುನ್ನ ತಂಡ ಕೂಡಿ​ಕೊ​ಳ್ಳಲಿ​ದ್ದಾರೆ ಎಂದು ವರ​ದಿ​ಯಾ​ಗಿತ್ತು. ಆದರೆ ತಾಯಿಯ ಆರೋಗ್ಯ ಹದ​ಗೆ​ಟ್ಟಿ​ದ್ದ​ರಿಂದ ಕಮಿನ್ಸ್‌ ತವ​ರಿ​ನಲ್ಲೇ ಬಾಕಿ​ಯಾ​ಗ​ಲಿ​ದ್ದಾರೆ. 4ನೇ ಟೆಸ್ಟ್‌ನಲ್ಲಿ ಆಡುತ್ತಾರೊ ಇಲ್ಲವೋ ಎಂಬುದು ಖಚಿ​ತ​ವಾ​ಗಿಲ್ಲ. ಕಮಿನ್ಸ್‌ ಅನುಪಸ್ಥಿತಿಯಲ್ಲಿ ಮಿಚೆಲ್‌ ಸ್ಟಾರ್ಕ್ ತಂಡದ ವೇಗದ ಬೌಲಿಂಗ್‌ ಪಡೆ ಮುನ್ನಡೆಸುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ