ಜೋಸ್ ಬಟ್ಲರ್ ಕ್ರಿಕೆಟಿಗನಾಗಲು ದ್ರಾವಿಡ್, ಗಂಗೂಲಿ ಮತ್ತು ನೀವೂ ಕಾರಣ!

Published : May 17, 2021, 10:01 PM ISTUpdated : May 17, 2021, 10:04 PM IST
ಜೋಸ್ ಬಟ್ಲರ್ ಕ್ರಿಕೆಟಿಗನಾಗಲು ದ್ರಾವಿಡ್, ಗಂಗೂಲಿ ಮತ್ತು ನೀವೂ ಕಾರಣ!

ಸಾರಾಂಶ

ಕ್ರಿಕೆಟಿಗನಾದ ಬಗೆ ವಿವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್  ಬಟ್ಲರ್ ಸಕ್ಸಸ್ ಹಿಂದೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ  ಇವರಿಬ್ಬರ ಜೊತೆ ಮತ್ತೊಂದು ಕಾರಣ ಬಹಿರಂಗ

ಲಂಡನ್(ಮೇ.17): ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಟ್ಲರ್ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಉಪನಾಯಕರಾಗಿರುವ ಜೋಸ್ ಬಟ್ಲರ್, ನಿಗದಿತ ಓವರ್ ಕ್ರಿಕೆಟ್‌ನ ಬೆಸ್ಟ್ ಬ್ಯಾಟ್ಸ್‌ಮನ್.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಜೋಸ್ ಬಟ್ಲರ್ ಕ್ರಿಕೆಟಿನಾಗಲು ಭಾರತದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಕಾರಣರಾಗಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗರು ಬುಧವಾರ ಮುಂಬೈಗೆ ಎಂಟ್ರಿ..!

ದ್ರಾವಿಡ್ ಹಾಗೂ ಗಂಗೂಲಿ ಜೊತೆಗೆ ಮತ್ತೊಂದು ಕಾರಣ ಕೂಡ ಬಟ್ಲರ್‌ಗೆ ಕ್ರಿಕೆಟಿನಾಗಲೇಬೇಕು ಎಂದು ನಿರ್ಧರಿಸಿದ್ದರು. ವಿಶ್ವಕಪ್ ಕ್ರಿಕೆಟ್ ಪಂದ್ಯ ಅಷ್ಟರ ಮಟ್ಟಿಗೆ ಬಟ್ಲರ್ ಮನಸ್ಸು ಬದಲಾಯಿಸಿತು. ಈ ಕಾರಣ ಭಾರತದ ಕ್ರಿಕೆಟ್ ಫ್ಯಾನ್ಸ್. ಈ ಕುರಿತು ಸ್ವತಃ ಜೋಸ್ ಬಟ್ಲರ್ ವಿವರಿಸಿದ್ದಾರೆ. 1999ರ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿತ್ತು. ಈ ಟೂರ್ನಿಯಲ್ಲಿನ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಬಟ್ಲರ್ ಕರಿಯರ್ ರೂಪಿಸಿತು.

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 20 ತಂಡಗಳು ಭಾಗಿ?

ಶ್ರೀಲಂಕಾ ವಿರುದ್ಧ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅತ್ಯುತ್ತಮ ಜೊತೆಯಾಟ ಬಟ್ಲರ್ ಮನಸ್ಸು ಬದಲಿಸಿತು. 2ನೇ ವಿಕೆಟ್‌ಗೆ ಗಂಗೂಲಿ ಹಾಗೂ ದ್ರಾವಿಡ್ 318 ರನ್ ಸಿಡಿಸಿದ್ದರು. ಈ ಮೂಲಕ ಲಂಕಾಗೆ ಶಾಕ್ ನೀಡಿದ್ದರು. ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಯನ್ನು ನೋಡಿದ ಬಟ್ಲರ್ ನಾನು ಕೂಡ ಕ್ರಿಕೆಟಿನಾಗಬೇಕು. ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂದು ನಿರ್ಧರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ