ಟೀಮ್ ಇಂಡಿಯಾ ಮತ್ತೊಂದು ಐಸಿಸಿ ಟೂರ್ನಿ ಆಡಲು ಅಮೆರಿಕಕ್ಕೆ ತೆರಳಿದೆ. ವೆಸ್ಟ್ ಇಂಡೀಸ್-ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ನವದೆಹಲಿ (ಜೂನ್ 1): ಟಿ20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಜೂನ್ 5 ರಿಂದ ಆರಂಭವಾಗಲಿದ್ದರೂ, ಇಂದು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಐಸಿಸಿ ವಿಶ್ವಕಪ್ ಎಂದಾಗ ಟೀಮ್ ಇಂಡಿಯಾ ಆಟಗಾರರ ಮೇಲೆ ಅತಿಯಾದ ಒತ್ತಡ ಇರುತ್ತದೆ ಅನ್ನೋದು ಗೊತ್ತಿಲ್ಲದ ವಿಚಾರವೇನಲ್ಲ. ಈ ಬಾರಿಯೂ ಭಾರತದ ಆಟಗಾರರು ಅದೇ ಸ್ಥಿತಿಯಲ್ಲಿದ್ದಾರೆ. ಹಲವು ವರ್ಷಗಳಿಂದ ಭಾರತದ ಪಾಲಿಗೆ ಐಸಿಸಿ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.ಹಾಗಿದ್ದರೂ, ಭಾರತದ ಪಾಲಿಗೆ ಕ್ರಿಕೆಟ್ ಎನ್ನುವುದು ಮೋಸ್ಟ್ ಪ್ಯಾಷನೇಟಿಕ್ ಗೇಮ್. ಅದರಲ್ಲೂ ವಿಶ್ವಕಪ್‌ನಂಥ ಟೂರ್ನಿಯಲ್ಲಿ ಭಾರತ ತಂಡ ಆಡುತ್ತದೆ ಎನ್ನುವಾಗ ದೇಶದ ಅಭಿಮಾನಿಗಳ ನಿರೀಕ್ಷೆ ಮುಗಿಲುಮುಟ್ಟಿರುತ್ತದೆ. ಈ ಹಂತದಲ್ಲಿ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಯಶಸ್ವಿಯಾಗಬೇಕಾದರೆ, ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿರುವ ಟೀಮ್ ತುಂಬಾ ರಿಲಾಕ್ಸ್ ಆಗಿ ಆಡಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
ರೇವ್ಸ್‌ಸ್ಪೋರ್ಟ್ಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಯಾವುದೇ ವಿಚಾರದಲ್ಲಿ ತೀರಾ ಒತ್ತಡದಲ್ಲಿ ಆಡುವ ತಪ್ಪನ್ನು ಎಂದಿಗೂ ಮಾಡಬಾರದು. ಆಟಗಾರರ ಮೇಲೆ ಒತ್ತಡ ಎಷ್ಟಿರುತ್ತೆ ಅನ್ನೋದನ್ನ ಅವರ ಬದಲು ಅವರ ಪತ್ನಿಯರ ಮುಖ ನೋಡಿದರೆ ಅರ್ಥವಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಟೀಮ್‌ಗೆ ಒಂದು ವಿಚಾರ ಹೇಳುತ್ತೇನೆ ಏನೆಂದರೆ, ಯಾವುದೇ ತಪ್ಪುಗಳನ್ನ ಮಾಡಬೇಡಿ. ನನಗೆ ಗೊತ್ತು ದ್ರಾವಿಡ್ ಚಾಂಪಿಯನ್ ಕ್ರಿಕೆಟರ್. ಅವರ ಕ್ರಿಕೆಟ್ ಬ್ರೇನ್‌ಗೆ ಯಾವುದೇ ಸಾಟಿಯಿಲ್ಲ. ಆದರೆ, ಇಡೀ ತಂಡ ಸಾಕಷ್ಟು ರಿಲಾಕ್ಸ್ ಆಗಿರಬೇಕು. ನಾನು ರೋಹಿತ್ ಶರ್ಮ ಅವರ ಪತ್ನಿ ಸ್ಟ್ಯಾಂಡ್ಸ್‌ನಲ್ಲಿರೋದನ್ನು ನೋಡಿದಾಗ, ಆಕೆಯೇ ಎಷ್ಟು ಒತ್ತಡದಲ್ಲಿದ್ದಾರೆ ಅನ್ನೋದು ಅರ್ಥವಾಗುತ್ತದೆ. ಅದೇ ರೀತಿಯಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರನ್ನು ಸ್ಟ್ಯಾಂಡ್ಸ್‌ನಲ್ಲಿ ನೋಡಿದಾಗ, ಆಕೆಯ ಮುಖದ ಮೇಲೆ ಒತ್ತಡ ಇರೋದನ್ನ ನಾನು ಗಮನಿಸುತ್ತೇನೆ. ನಾವು ಭಾರತದ ಆಟಗಾರರು ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಇನ್ನಷ್ಟು ಹೆಚ್ಚಿನ ಒತ್ತಡ ತಂದುಕೊಳ್ಳುವ ತಪ್ಪು ಮಾಡುತ್ತೇವೆ. 2003ರ ವಿಶ್ವಕಪ್ ಫೈನಲ್‌ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ದೊಡ್ಡ ಪಂದ್ಯಗಳನ್ನು ಆಡುವಾಗ ನಾವು ಬಹಳ ರಿಲಾಕ್ಸ್ ಆಗಿರಬೇಕು. ಆದಷ್ಟು ಫ್ರೀಡಮ್ ಆಗಿ ಆಡಬೇಕು ಎಂದು ಹೇಳಿದ್ದಾರೆ.
undefined
ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್, ವಿರೋಧಿಸಿ ಟ್ವೀಟ್ ಮಾಡಿದ್ರಾ ಸೌರವ್ ಗಂಗೂಲಿ?
2003ರ ಏಕದಿನ ವಿಶ್ವಕಪ್‌ನ ಫೈನಲ್ ಮ್ಯಾಚ್ ಆಡಿದ್ದ ಟೀಮ್ ಇಂಡಿಯಾ, ಪ್ರಶಸ್ತಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಫೈನಲ್ ಪಂದ್ಯದಲ್ಲಿ ತಂಡ ಇನ್ನಷ್ಟಯ ರಿಲಾಕ್ಸ್ ಆಗಿ ಆಡಿದ್ದರೆ, ಪ್ರಶಸ್ತಿ ಗೆಲ್ಲುವ ಅವಕಾಶವಿತ್ತು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. 2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡರೂ, ಆ ಟೂರ್ನಿಯಲ್ಲಿ ನಮ್ಮದೇ ಅತ್ಯುತ್ತಮ ತಂಡವಾಗಿತ್ತು. ಇಡೀ ಟೂರ್ನಿಯಲ್ಲಿ ಬಹಳ ಅದ್ಭುತವಾದ ಕ್ರಿಕೆಟ್ ಆಡಿದೆವು. ಫೈನಲ್‌ನಲ್ಲಿ ನಾವೇನಾದರೂ ರಿಲಾಕ್ಸ್ ಆಗಿ ಆಟವಾಡಿದರೆ, ಗೆಲ್ಲಬಹುದಿತ್ತು. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಹಾಗಾಗಬಾರದು. ಇದನ್ನೇ ನಾನು ನೋಡಲು ಬಯಸುತ್ತೇನೆ. ನಾನು ಬಹಳ ಮುಕ್ತವಾಗಿ ಆಡಬೇಕು. ಅದೇ ರೀತಿ, ನಮ್ಮ ಮೇಲೆಯೇ ಅತಿಯಾದ ಒತ್ತಡ ಹೇರಿಕೊಳ್ಳಬಾರದು ಎಂದರು.
ಲಂಡನ್ ಕಾಲೇಜಿನಿಂದ ಅರ್ಥಶಾಸ್ತ್ರದ ಪದವಿ ಪಡೆದ ಪುತ್ರಿ, ಹೆಮ್ಮೆಯಿಂದ ಬೀಗಿದ ಟೀಮ್ ಇಂಡಿಯಾ ಮಾಜಿ ನಾಯಕ!