ಸೈಲೆಂಟಾಗಿ ಚಾಂಪಿಯನ್‌ RCB ಟೀಮ್‌ ಬಿಟ್ಟು ಲಕ್ನೋ ಟೀಮ್‌ ಸೇರಿಕೊಂಡ್ರಾ ಸ್ಮೃತಿ ಮಂಧನಾ?

Published : Jul 21, 2026, 10:54 PM IST
Smriti Mandhana  Manchester Super Giants

ಸಾರಾಂಶ

RCB ಆಟಗಾರ್ತಿ ಸ್ಮೃತಿ ಮಂದನಾ ಲಕ್ನೋ ತಂಡದ ಜೆರ್ಸಿ ಧರಿಸಿರುವ ಫೋಟೋ ವೈರಲ್ ಆಗಿ ಅಚ್ಚರಿ ಮೂಡಿಸಿತ್ತು. ವಾಸ್ತವವಾಗಿ, ಅವರು ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಲಕ್ನೋ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಜೆರ್ಸಿ ಗೊಂದಲಕ್ಕೆ ಇದೇ ಕಾರಣವಾಗಿದೆ.

ಬೆಂಗಳೂರು (ಜು.21): ಆರ್‌ಸಿಬಿಯ ಸ್ಟಾರ್‌ ಪ್ಲೇಯರ್‌ ಹಾಗೂ ಭಾರತ ಮಹಿಳಾ ತಂಡದ ಪ್ರಮುಖ ಬ್ಯಾಟರ್‌ ಆಗಿರುವ ಸ್ಮೃತಿ ಮಂದನಾ ಅವರ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಲಕ್ನೋ ತಂಡ ಜೆರ್ಸಿ ಧರಿಸಿ ಅವರು ಪೋಸ್‌ ನೀಡಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾಗುತ್ತಿದ್ದಂತೆ ಕ್ರಿಕೆಟ್‌ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್‌ ಆದಂತಾಗಿತ್ತು. ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ಲೇಯರ್‌ ಆಗಿರುವ ಸ್ಮೃತಿ ಮಂಧನಾ, ಟೀಮ್‌ಅನ್ನು ತೊರೆದಿದ್ದು ಯಾವಾಗ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿತ್ತು.

ವಿಚಾರ ಏನೆಂದರೆ, ಸ್ಮೃತಿ ಮಂಧನಾ ಲಕ್ನೋ ಟೀಮ್‌ ಸೇರಿಲ್ಲ. ಅದರಲ್ಲೂ ಡಬ್ಲ್ಯುಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಮಾಲೀಕತ್ವದ ಟೀಮ್‌ ಕೂಡ ಯಾವುದೂ ಇಲ್ಲ. ಯುಪಿ ವಾರಿಯರ್ಜ್‌ ಅನ್ನೋ ಟೀಮ್‌ ಇದ್ದರೂ ಅದರ ಮಾಲೀಕತ್ವ ಬೇರೆಯವರ ಹೆಸರಲ್ಲಿದೆ. ಹೀಗಿರುವಾಗ ಸ್ಮೃತಿ ಮಂಧನಾ ಲಕ್ನೋ ಟೀಮ್‌ನ ಜೆರ್ಸಿ ಧರಿಸಿವುದರ ಹಿಂದಿನ ಕಾರಣವೇನು ಅನ್ನೋದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಹೌದು, ಅದು ಲಕ್ನೋ ಟೀಮ್‌ನ ಜೆರ್ಸಿ ಅಲ್ಲ. ಬದಲಿದೆ ಇಂಗ್ಲೆಂಡ್‌ ದಿ ಹಂಡ್ರೆಡ್‌ ವುಮೆನ್ಸ್‌ ಟೂರ್ನಿಯಲ್ಲಿ ಮ್ಯಾಂಚೆಸ್ಟರ್‌ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಇನ್ನು ಈ ಟೀಮ್‌ನ ಮಾಲೀಕತ್ವ ಹೊಂದಿರುವುದು ಆರ್‌ಪಿಎಸ್‌ಜಿ ಗ್ರೂಪ್‌. ಇದೇ ಗ್ರೂಪ್‌ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮಾಲೀಕತ್ವವನ್ನು ಹೊಂದಿದೆ. ಈ ಆರ್‌ಪಿಎಸ್‌ಜಿ ಗ್ರೂಪ್‌ನ ಮಾಲೀಕರಾಗಿರುವ ಸಂಜೀವ್‌ ಗೋಯೆಂಕಾ, ಮ್ಯಾಂಚೆಸ್ಟರ್‌ ಸೂಪರ್‌ ಜೈಂಟ್ಸ್‌ ಟೀಮ್‌ನಲ್ಲಿ ಶೇ. 70ರಷ್ಟು ಪಾಲು ಹೊಂದಿದ್ದಾರೆ. ಇದಕ್ಕೂ ಮುನ್ನ ಮ್ಯಾಂಚೆಸ್ಟರ್‌ ಫ್ರಾಂಚೈಸಿಯ ಪೂರ್ಣ ಮಾಲೀಕತ್ವ ಲಂಕಾಷೈರ್‌ ಕ್ರಿಕೆಟ್‌ ಕ್ಲಬ್‌ ಜೊತೆ ಇತ್ತು. ಆಗ ಈ ತಂಡದ ಹೆಸರು ಮ್ಯಾಂಚೆಸ್ಟರ್‌ ಒರಿಜಿನಲ್ಸ್ ಎಂದಾಗಿತ್ತು.

ಶೇ. 70ರಷ್ಟು ಪಾಲು ಖರೀದಿ ಮಾಡಿರುವ ಲಕ್ನೋ ಫ್ರಾಂಚೈಸಿ

2025ರ ಸೀಸನ್‌ ಬಳಿಕ ಸಹ ಮಾಲೀಕತ್ವಕ್ಕೆ ಇಳಿದಿದ್ದರಿಂದ ತಂಡದ ಶೇ. 70ರಷ್ಟು ಪಾಲನ್ನು ಆರ್‌ಪಿಎಸ್‌ಜಿ ಗ್ರೂಪ್‌ ಖರೀದಿ ಮಾಡಿದೆ. ಸೌತ್‌ ಆಫ್ರಿಕಾದಲ್ಲಿ ನಡೆಯುವ ಎಸ್‌ಎ20 ಟೂರ್ನಿಯಲ್ಲಿ ಡರ್ಬನ್‌ ಸೂಪರ್‌ ಜೈಂಟ್ಸ್‌ ತಂಡದ ಮಾಲೀಕತ್ವವೂ ಈ ಕಂಪನಿಯ ಹೆಸರಲ್ಲಿದೆ.

ದಿ ಹಂಡ್ರೆಡ್‌ನಲ್ಲಿ ಆಡಿರುವ ಮ್ಯಾಂಚೆಸ್ಟರ್‌ ಸೂಪರ್‌ಜೈಂಟ್ಸ್‌ ತಂಡಕ್ಕೆ ಆಸೀಸ್‌ನ ಮೆಗ್‌ ಲ್ಯಾನಿಂಗ್‌ ನಾಯಕಿಯಾಗಿದ್ದರೆ, ಸ್ಮೃತಿ ಮಂಧನಾ, ರಿಚಾ ಘೋಷ್‌ ಭಾರತೀಯ ಪ್ಲೇಯರ್‌ ಆಗಿದ್ದಾರೆ. ಅದರೊಂದಿಗೆ ಸೋಫಿ ಎಕ್ಲೆಸ್ಟೋನ್‌, ಕ್ಯಾಥರಿನ್‌ ಬ್ರೇಸ್‌, ಪೇಜ್‌ ಸ್ಕೂಲ್‌ಫೀಲ್ಡ್‌ನಂಥ ಪ್ಲೇಯರ್‌ಗಳೂ ಕೂಡ ಟೀಮ್‌ನಲ್ಲಿದ್ದಾರೆ.

ಇನ್ನು ದಿ ಹಂಡ್ರೆಡ್‌ ಟೂರ್ನಿಯಲ್ಲಿ ಪಾಲು ಪಡೆದಿರುವ ಐಪಿಎಲ್‌ ಫ್ರಾಂಚೈಸಿ ಲಕ್ನೋ ಮಾತ್ರವೇ ಅಲ್ಲ. ಮುಂಬೈ ಇಂಡಿಯನ್ಸ್‌ ತಂಡ ಎಂಐ ಲಂಡನ್‌ ಟೀಮ್‌ನ ಮಾಲೀಕತ್ವ ಹೊಂದಿದ್ದರೆ, ಸನ್‌ರೈಸರ್ಸ್‌ ಟೀಮ್‌, ಸನ್‌ರೈಸರ್ಸ್‌ ಲೀಡ್ಸ್‌ ತಂಡದ ಮಾಲೀಕತ್ವ ಹೊಂದಿದೆ. ಈ ಸನ್‌ರೈಸರ್ಸ್‌ ಲೀಡ್ಸ್‌ ಪರವಾಗಿ ಭಾರತದ ಅನುಭವಿ ಆಲ್ರೌಂಡರ್‌ ದೀಪ್ತಿ ಶರ್ಮ ಆಡುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್‌; ಇಂಗ್ಲೆಂಡ್ ಮೂಲದ ಗೇಮ್‌ ಚೇಂಜರ್‌ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್
ಏಕದಿನ ವಿಶ್ವಕಪ್‌ನಲ್ಲಿ ಮಹಾ ಟ್ವಿಸ್ಟ್: 8 ತಂಡಗಳಿಗೆ ನೇರ ಎಂಟ್ರಿ; ಆದ್ರೆ 2 ಬಾರಿಯ ಚಾಂಪಿಯನ್ ಆದ ಟೀಂ ಔಟ್?