ಮತ್ತೆ ಮದುವೆ ಆಗ್ತಾರಾ ಸ್ಮೃತಿ ಮಂಧನಾ - ಪಲಾಶ್ ಮುಚ್ಚಲ್? ಸ್ಮೃತಿ ತಂದೆಯ ಆಶೀರ್ವಾದ ಪಡೆದ ಪಲಕ್ ಮುಚ್ಚಲ್! ವಿಡಿಯೋ ವೈರಲ್

Published : Apr 09, 2026, 05:48 PM IST
Palash Muchhal Smriti Mandhana

ಸಾರಾಂಶ

ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ನಿಂತುಹೋಗಿದೆ ಎಂಬ ಸುದ್ದಿಯ ನಡುವೆ, ಪಲಾಶ್ ಸಹೋದರಿ ಸ್ಮೃತಿ ತಂದೆಯ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೆಳವಣಿಗೆಯು ಜೋಡಿಯ ಸಂಬಂಧದ ಕುರಿತು ಹೊಸ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗಿನ ಅವರ ಮದುವೆ ನಿಂತುಹೋಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಇದೀಗ ಈ ಜೋಡಿ ಮತ್ತೆ ಒಂದಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪಲಾಶ್ ಮುಚ್ಚಲ್ ಅವರ ಸಹೋದರಿ, ಗಾಯಕಿ ಪಲಕ್ ಮುಚ್ಚಲ್ ಅವರು ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ್ ಮಂಧನಾ ಜೊತೆ ಕಾಣಿಸಿಕೊಂಡಿದ್ದಾರೆ. ಪಲಕ್ ಮುಚ್ಚಲ್ ಗೌರವದಿಂದ ಮಂಧನಾ ಅವರ ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ದೃಶ್ಯಗಳು ಅದರಲ್ಲಿವೆ. ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು, ಎರಡೂ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಸುಧಾರಿಸಿದೆ ಎಂದು ಭಾವಿಸಿ ಕಮೆಂಟ್ ಮಾಡಲಾರಂಭಿಸಿದ್ದಾರೆ. ಹೀಗಾಗಿ ಮಂಧನಾ-ಪಲಾಶ್ ಮದುವೆ ವಿಚಾರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
 

 

ದಿಢೀರ್ ಆಗಿ ಸ್ಮೃತಿ-ಪಲಾಶ್ ಮದುವೆ ರದ್ದು!

ಭಾರತ ಮಹಿಳಾ ತಂಡದ ಸ್ಟಾರ್ ಓಪನ್ನರ್ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಲ್ ಸಾಕಷ್ಟು ಸಮಯದಿಂದಲೂ ಡೇಟಿಂಗ್ ನಡೆಸುತ್ತಾ ಬಂದಿದ್ದರಾದರೂ ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ಪಲಾಶ್ ಮುಚ್ಚಲ್ ಸ್ಮೃತಿ ಮಂಧನಾ ಅವರನ್ನು ಮುಂಬೈನ ಡಿವೈ ಪಾಟೀಲ್ ಮೈದಾನದ ಪಿಚ್‌ ಬಳಿ ಕರೆ ತಂದು ಬಹಿರಂಗವಾಗಿಯೇ ಲವ್ ಪ್ರಪೋಸ್ ಮಾಡಿದ್ದರು. ಇದಕ್ಕೆ ಸ್ಮೃತಿ ಕೂಡಾ ಸಮ್ಮತಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಮದುವೆ ಕೂಡಾ ನಿಗದಿಯಾಗಿತ್ತು. ಆದರೆ ಮದುವೆ ಹಿಂದಿನ ದಿನ ಸ್ಮೃತಿ ಮಂಧನಾ ಅವರ ತಂದೆಯ ಆರೋಗ್ಯ ಬಿಗಡಾಯಿಸಿದ್ದರಿಂದ ದಿಢೀರ್ ಎನ್ನುವಂತೆ ಮದುವೆಯನ್ನು ಮುಂದೂಡಲಾಗಿತ್ತು.

ಇನ್ನು ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಲ್ ನಡುವಿನ ಮದುವೆ ಮುಂದೂಡಿದ ಬೆನ್ನಲ್ಲೇ ಈ ಮದುವೆ ಪೋಸ್ಟ್‌ಪೋನ್ ಆಗಲು ಬೇರೆಯದ್ದೇ ಕಾರಣವಿದೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಮದುವೆಯ ಹಿಂದಿನ ದಿನ ಪಲಾಶ್ ಮುಚ್ಚಲ್, ಬೇರೆ ಯುವತಿಯ ಜತೆ ಪಲ್ಲಂಗದಾಟ ಆಡುವಾಗ ಸಹ ಆಟಗಾರ್ತಿಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪಲಾಶ್ ಮುಚ್ಚಲ್ ಓರ್ವ ಯುವತಿಯ ಜತೆ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್‌ಗಳು ಲೀಕ್ ಆಗಿದ್ದವು. ಇನ್ನು ಮದುವೆ ಮುಂದೂಡಿದ್ದರ ನಿಜವಾದ ಕಾರಣವನ್ನು ಎರಡೂ ಕುಟುಂಬಗಳು ಬಹಿರಂಗ ಪಡಿಸಿರಲಿಲ್ಲ. ಇದೆಲ್ಲದರ ನಡುವೆ ಇದೀಗ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವೈರಲ್ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕು

ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನಿಜವಾಗಿಯೂ ಇತ್ತೀಚೆಗೆ ತೆಗೆದಿದ್ದಾ ಅಥವಾ ಹಳೆಯದಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವರು ಇದು ಹಿಂದೆ ನಡೆದ ಕಾರ್ಯಕ್ರಮದ ವಿಡಿಯೋ ಇರಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವರು, ಇತ್ತೀಚೆಗೆ ಎರಡೂ ಕುಟುಂಬಗಳು ಭೇಟಿಯಾಗಿದ್ದು, ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಸ್ಮೃತಿ ಮಂಧನಾ ಅಥವಾ ಪಲಾಶ್ ಮುಚ್ಚಲ್ ಕುಟುಂಬದಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಮೈದಾನದಲ್ಲಿ ಸ್ಮೃತಿ ಮಂಧನಾ ಅವರ ಆಟ ಎಷ್ಟು ಜನಪ್ರಿಯವೋ, ಅವರ ವೈಯಕ್ತಿಕ ಜೀವನವೂ ಅಭಿಮಾನಿಗಳಲ್ಲಿ ಅಷ್ಟೇ ಕುತೂಹಲ ಮೂಡಿಸಿದೆ. ಈಗ ವೈರಲ್ ಆಗುತ್ತಿರುವ ವಿಡಿಯೋದಿಂದ ಮಂಧನಾ-ಪಲಾಶ್ ಸಂಬಂಧದ ಬಗ್ಗೆ ಮತ್ತೆ ಊಹಾಪೋಹಗಳು ಶುರುವಾಗಿವೆ. ನಿಜವಾಗಿಯೂ ಈ ಜೋಡಿ ಮತ್ತೆ ಒಂದಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ Vaibhav Suryavanshi; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!
'ನಾನು ಕೂಲಿ ಕಾರ್ಮಿಕ, ಬೌಲಿಂಗ್ ಮಾಡೋದಷ್ಟೇ ನನ್ನ ಕೆಲಸ'; ಆಯ್ಕೆ ವಿವಾದದ ಬಗ್ಗೆ ಮೊಹಮ್ಮದ್ ಶಮಿ ಖಡಕ್ ಮಾತು