ಕೊಹ್ಲಿ ಸಾರ್ವಕಾಲಿಕ ದಾಖಲೆ ಸೇಫ್‌; ಶುಭ್‌ಮನ್‌ ಗಿಲ್‌ಗೆ ಸುವರ್ಣಾವಕಾಶ ಮಿಸ್‌..!

By Naveen Kodase  |  First Published May 30, 2023, 12:19 PM IST

2023ನೇ ಸಾಲಿನ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯ
ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಗಿಲ್‌ಗೆ ಎರಡನೇ ಸ್ಥಾನ
ವಿರಾಟ್ ಕೊಹ್ಲಿ ಸಾರ್ವಕಾಲಿಕ ದಾಖಲೆ ಮುರಿಯಲು ಗಿಲ್ ವಿಫಲ


ಅಹ​ಮ​ದಾ​ಬಾ​ದ್‌(ಮೇ.30): ಉತ್ಕೃಷ್ಠ ಲಯ​ದ​ಲ್ಲಿ​ರುವ ಗುಜ​ರಾತ್‌ನ ಶುಭ್‌​ಮನ್‌ ಗಿಲ್‌ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ರನ್‌ ಗಳಿ​ಕೆ​ಯಲ್ಲಿ ಮತ್ತೊಂದು ದಾಖಲೆ ಬರೆ​ದಿ​ದ್ದಾ​ರೆ. ಸೋಮ​ವಾರ ಚೆನ್ನೈ ವಿರುದ್ಧ ಫೈನ​ಲ್‌​ನಲ್ಲಿ 20 ಎಸೆ​ತ​ಗ​ಳಲ್ಲಿ 39 ರನ್‌ ಸಿಡಿ​ಸಿದ ಗಿಲ್‌, ಐಪಿ​ಎಲ್‌ ಆವೃ​ತ್ತಿ​ಯೊಂದ​ರಲ್ಲಿ ಗರಿಷ್ಠ ರನ್‌ ಸಿಡಿ​ಸಿ​ದ​ವರ ಪಟ್ಟಿ​ಯಲ್ಲಿ 2ನೇ ಸ್ಥಾನ​ಕ್ಕೇ​ರಿ​ದರು.

ಗಿಲ್‌ ಈ ಬಾರಿ 17 ಪಂದ್ಯ​ಗ​ಳಲ್ಲಿ 63.57ರ ಸರಾ​ಸ​ರಿ​ಯಲ್ಲಿ 3 ಶತಕ, 4 ಅರ್ಧ​ಶ​ತ​ಕ​ಗ​ಳ​ನ್ನೊ​ಳ​ಗೊಂಡ 890 ರನ್‌ ಸಿಡಿ​ಸಿದ್ದು, ರಾಜ​ಸ್ಥಾ​ನದ ಜೋಸ್‌ ಬಟ್ಲರ್‌ ಅವರ ದಾಖ​ಲೆ​ಯನ್ನು ಮುರಿ​ದರು. ಕಳೆದ ವರ್ಷ ಬಟ್ಲರ್‌ 863 ರನ್‌ ಕಲೆ​ ಹಾ​ಕಿ​ದ್ದರು. ಆದರೆ ಗಿಲ್‌ಗೆ ವಿರಾಟ್‌ ಕೊಹ್ಲಿ ದಾಖಲೆ ಮುರಿ​ಯಲು ಸಾಧ್ಯ​ವಾ​ಗ​ಲಿಲ್ಲ. ಕೊಹ್ಲಿ 2016ರಲ್ಲಿ 4 ಶತ​ಕ​ಗಳು ಸೇರಿ​ದಂತೆ ಬರೋ​ಬ್ಬರಿ 973 ರನ್‌ ಸಿಡಿ​ಸಿ​ದ್ದರು. ಅದೇ ಆವೃ​ತ್ತಿ​ಯಲ್ಲಿ ಡೇವಿಡ್‌ ವಾರ್ನರ್‌ ಹೈದ​ರಾ​ಬಾದ್‌ ಪರ 848 ರನ್‌ ಗಳಿ​ಸಿ​ದ್ದರು. ಈ ನಾಲ್ವ​ರ​ನ್ನು ಹೊರ​ತು​ಪ​ಡಿಸಿ ಬೇರೆ ಯಾರೂ ಒಂದು ಆವೃ​ತ್ತಿ​ಯಲ್ಲಿ 800ಕ್ಕಿಂತ ಹೆಚ್ಚು ರನ್‌ ಕಲೆ​ಹಾ​ಕಿ​ಲ್ಲ.

Latest Videos

undefined

250 ಐಪಿಎಲ್‌ ಪಂದ್ಯ ಆ​ಡಿ​ದ ಮೊದ​ಲಿಗ ಧೋನಿ!

ಗುಜ​ರಾತ್‌ ವಿರುದ್ಧ ಫೈನ​ಲ್‌​ನಲ್ಲಿ ಕಣ​ಕ್ಕಿ​ಳಿ​ಯು​ವು​ದ​ರೊಂದಿಗೆ ಚೆನ್ನೈ ನಾಯಕ ಎಂ.ಎ​ಸ್‌.​ಧೋನಿ ಐಪಿ​ಎ​ಲ್‌​ನಲ್ಲಿ 250 ಪಂದ್ಯ​ವಾ​ಡಿದ ಮೊದಲ ಆಟಗಾರ ಎನಿ​ಸಿ​ಕೊಂಡರು. 2008ರ ಚೊಚ್ಚಲ ಆವೃ​ತ್ತಿ​ (2016, 2017ರಲ್ಲಿ ಪುಣೆ ಪರ​)ಯಿಂದಲೂ ಧೋನಿ ಚೆನ್ನೈ ಪರ ಆಡು​ತ್ತಿ​ದ್ದು, 5000ಕ್ಕೂ ಹೆಚ್ಚು ರನ್‌ ಕಲೆ​ಹಾ​ಕಿ​ದ್ದಾ​ರೆ. ಇನ್ನು, 243 ಪಂದ್ಯ​ಗ​ಳ​ನ್ನಾ​ಡಿ​ರುವ ರೋಹಿತ್‌ ಶರ್ಮಾ ಪಟ್ಟಿ​ಯಲ್ಲಿ 2ನೇ ಸ್ಥಾನ​ದ​ಲ್ಲಿದ್ದು, ದಿನೇಶ್‌ ಕಾರ್ತಿಕ್‌ 242, ವಿರಾಟ್‌ ಕೊಹ್ಲಿ 237, ಜಡೇಜಾ 226 ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ.

ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಧೋನಿಯಂತೆ ಬದುಕೋಣ!

ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ 300 ಬಲಿ ಪಡೆದ ಮೊದಲ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನೂ ಧೋನಿ ಬರೆದರು.

ಈ ಐಪಿಎಲ್‌ನಲ್ಲಿ 564 ರನ್‌ ನೀಡಿದ ತುಷಾರ್‌!

ಅಹಮದಾಬಾದ್‌: ಐಪಿಎಲ್‌ ಅವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ ಚಚ್ಚಿಸಿಕೊಂಡ ಬೌಲರ್‌ ಎನ್ನುವ ಅಪಖ್ಯಾತಿಗೆ ಚೆನ್ನೈ ಸೂಪರ್‌ ಕಿಂಗ್‌್ಸನ ವೇಗಿ ತುಷಾರ್‌ ದೇಶಪಾಂಡೆ ಗುರಿಯಾಗಿದ್ದಾರೆ. ಸೋಮವಾರ ಗುಜರಾತ್‌ ವಿರುದ್ಧ ನಡೆದ ಫೈನಲ್‌ನಲ್ಲಿ ತುಷಾರ್‌ 4 ಓವರಲ್ಲಿ 56 ರನ್‌ ಬಿಟ್ಟುಕೊಟ್ಟರು. ಇದರೊಂದಿಗೆ ಈ ಆವೃತ್ತಿಯಲ್ಲಿ ಅವರು 16 ಪಂದ್ಯಗಳಲ್ಲಿ ಒಟ್ಟು 564 ರನ್‌ ನೀಡಿ, ಪ್ರಸಿದ್ಧ್  ಕೃಷ್ಣ ಅವರನ್ನು ಹಿಂದಿಕ್ಕಿದರು. 2022ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದದ ಪ್ರಸಿದ್‌್ಧ 551 ರನ್‌ ನೀಡಿದ್ದರು. 2020ರಲ್ಲಿ ಕಗಿಸೋ ರಬಾಡ 548, 2018ರಲ್ಲಿ ಸಿದ್ಧಾರ್ಥ್‌ ಕೌಲ್‌ 547 ರನ್‌ ಚಚ್ಚಿಸಿಕೊಂಡಿದ್ದರು.

click me!