ಶ್ರೇಯಸ್ ಅಯ್ಯರ್‌ಗೆ ಸಿಕ್ಕಿದ್ದು ವಿಶ್ರಾಂತಿಯಲ್ಲ, ಟೀಂ ಇಂಡಿಯಾದಿಂದ ಕಿಕೌಟ್..?

Published : Feb 11, 2024, 03:37 PM IST
ಶ್ರೇಯಸ್ ಅಯ್ಯರ್‌ಗೆ ಸಿಕ್ಕಿದ್ದು ವಿಶ್ರಾಂತಿಯಲ್ಲ, ಟೀಂ ಇಂಡಿಯಾದಿಂದ  ಕಿಕೌಟ್..?

ಸಾರಾಂಶ

ಶ್ರೇಯಸ್, ಒನ್ಡೇಯಲ್ಲಿ ಸಕ್ಸಸ್ ಕಂಡಂತೆ ಟಿ20ಯಲ್ಲಿ ಕಾಣಲಿಲ್ಲ. ಹಾಗಾಗಿಯೇ ಅವರು ಯಾವತ್ತೂ ಟಿ20 ತಂಡದಲ್ಲಿ ಖಾಯಂ ಸ್ಥಾನ ಪಡೆದಿಲ್ಲ. ಆದ್ರೂ 51 ಟಿ20 ಮ್ಯಾಚ್‌ಗಳನ್ನಾಡಿದ್ದಾರೆ. ಸಾವಿರ ರನ್ ಹೊಡೆದಿದ್ದಾರೆ. ಆದ್ರೂ ಅವರಿಗೆ ಸದ್ಯ ಟಿ20 ಟೀಮ್ನಲ್ಲಿ ಸ್ಥಾನವಿಲ್ಲ.

ಬೆಂಗಳೂರು(ಫೆ.011): ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಕಾಡ್ತಿದೆ ಅನ್ನೋ ಸ್ಟೋರಿ ನೋಡಿದ್ರಿ ಅಲ್ವಾ..? ಆದ್ರೆ ಅದರಲ್ಲೊಬ್ಬ ಆಟಗಾರ ಗಾಯಾಳುವಾಗಿ ಟೆಸ್ಟ್ ತಂಡದಿಂದ ಹೊರಬಿದ್ದಿದಾನೆ ಅನ್ನೋದನ್ನೂ ನೋಡಿದ್ರಿ. ಆದ್ರೆ ಆತ ಇಂಜುರಿ ಅನ್ನೋದು ಸುದ್ದ ಸುಳ್ಳು. ಕಳಪೆ ಫಾರ್ಮ್ನಿಂದಾಗಿ ಟೆಸ್ಟ್ ತಂಡದಿಂದ ಕಿಕೌಟ್ ಆಗಿದ್ದಾನೆ. ಆದ್ರೂ ಇಂಜುರಿ ಅಂತ ಸುಳ್ಳು ಹೇಳಿದ್ದಾನೆ.

ಶ್ರೇಯಸ್ ಅಯ್ಯರ್‌ಗೆ ಇಂಜುರಿಯಾಗಿಲ್ವಾ..?

ಶ್ರೇಯಸ್ ಅಯ್ಯರ್, ವೈಟ್ ಬಾಲ್ ಕ್ರಿಕೆಟ್ನಲ್ಲಿ, ಅಲ್ಲ ಅಲ್ಲ ಒನ್ಡೇ ಕ್ರಿಕೆಟ್ನಲ್ಲಿ ಬೆಸ್ಟ್ ಬ್ಯಾಟರ್. ಟೀಂ ಇಂಡಿಯಾದ 4ನೇ ಕ್ರಮಾಂಕದ ಕೊರತೆ ನೀಗಿಸಿದ ಆಟಗಾರ. ಒನ್ಡೇ ವರ್ಲ್ಡ್ಕಪ್ನಲ್ಲಿ ಎರೆಡೆರಡು ಸೆಂಚುರಿ ಬಾರಿಸಿ, ಭಾರತಕ್ಕೆ ಆಸರೆಯಾಗಿದ್ದರು. ಹೊಡಿಬಡಿ ಆಟಕ್ಕೂ ಸೈ, ತಾಳ್ಮೆಯ ಆಟಕ್ಕೂ ಜೈ ಅನ್ನುವಂತಿದೆ ಅವರ ಬ್ಯಾಟಿಂಗ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಅವರ ಪ್ರದರ್ಶನ.

ಆದ್ರೆ ಶ್ರೇಯಸ್, ಒನ್ಡೇಯಲ್ಲಿ ಸಕ್ಸಸ್ ಕಂಡಂತೆ ಟಿ20ಯಲ್ಲಿ ಕಾಣಲಿಲ್ಲ. ಹಾಗಾಗಿಯೇ ಅವರು ಯಾವತ್ತೂ ಟಿ20 ತಂಡದಲ್ಲಿ ಖಾಯಂ ಸ್ಥಾನ ಪಡೆದಿಲ್ಲ. ಆದ್ರೂ 51 ಟಿ20 ಮ್ಯಾಚ್‌ಗಳನ್ನಾಡಿದ್ದಾರೆ. ಸಾವಿರ ರನ್ ಹೊಡೆದಿದ್ದಾರೆ. ಆದ್ರೂ ಅವರಿಗೆ ಸದ್ಯ ಟಿ20 ಟೀಮ್ನಲ್ಲಿ ಸ್ಥಾನವಿಲ್ಲ.

RCB ಬೆಂಕಿ ವೇಗಿ ಲಾಕಿ ಫರ್ಗ್ಯೂಸನ್‌ಗೆ ಕಂಕಣ ಭಾಗ್ಯ; ಮುದ್ದಾದ ಗೆಳತಿಯ ಕೈಹಿಡಿದ ಕಿವೀಸ್ ಕ್ರಿಕೆಟಿಗ

13 ಇನ್ನಿಂಗ್ಸ್‌ನಿಂದ ಬಂದಿಲ್ಲ ಒಂದೂ ಅರ್ಧಶತಕ

14 ಟೆಸ್ಟ್ಗಳನ್ನಾಡಿರುವ ಶ್ರೇಯಸ್, 24 ಇನ್ನಿಂಗ್ಸ್ನಲ್ಲಿ 1 ಶತಕ, 5 ಅರ್ಧಶತಕ ಬಾರಿಸಿದ್ದಾರೆ. ಸಾರಿ... ಶ್ರೇಯಸ್ ಆಡಿರುವ 24ರಲ್ಲಿ ಅವರು ಉತ್ತಮ ಪ್ರದರ್ಶನ ನೀಡಿರೋದು ಮೊದಲ 11 ಇನ್ನಿಂಗ್ಸ್ನಲ್ಲಿ ಮಾತ್ರ. ಉಳಿದ 13 ಇನ್ನಿಂಗ್ಸ್ಗಳಲ್ಲಿ ಅಯ್ಯರ್ ಬ್ಯಾಟಿಂಗ್ನಿಂದ ಒಂದೂ ಅರ್ಧಶತಕ ಬಂದಿಲ್ಲ. ಇನ್ನು ಶತಕ ದೂರದ ಮಾತು. ಹೌದು, ಈ ವರ್ಷ ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ಒಟ್ಟು 8 ಇನ್ನಿಂಗ್ಸ್ನಲ್ಲಿ ಅವರು ಫೇಲ್ ಆಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಸಿರೀಸ್ನಲ್ಲಿ ಐದು ಇನ್ನಿಂಗ್ಸ್ನಲ್ಲೂ ರನ್ ಹೊಡೆದಿಲ್ಲ. ಅಲ್ಲಿಗೆ ಕಳೆದ 13 ಇನ್ನಿಂಗ್ಸ್ನಲ್ಲಿ ಅವರು ವಿಫಲವಾಗಿದ್ದಾರೆ.

ಇಂಜುರಿ ಅಲ್ಲ, ಕಿಕೌಟ್ ಮಾಡಿರೋದು..!

ಇಂಗ್ಲೆಂಡ್ ವಿರುದ್ಧದ ಕೊನೆ ಮೂರು ಟೆಸ್ಟ್ಗಳಿಗೆ ಶ್ರೇಯಸ್ ಅಯ್ಯರ್ ಆಯ್ಕೆಯಾಗಿಲ್ಲ. ಇಂಜುರಿಯಿಂದ ಅವರು ಸೆಲೆಕ್ಟ್ ಆಗಿಲ್ಲ ಅನ್ನೋ ಸುದ್ದಿ ಬಂದಿತು. ಆದ್ರೆ ಶ್ರೇಯಸ್ ಆಯ್ಕೆಯಾಗದಿರುವುದಕ್ಕೆ ಗಾಯ ಕಾರಣವಲ್ಲ.. ಬದಲಿಗೆ ಅವರ ಕಳಪೆ ಫಾರ್ಮ್ ಕಾರಣ. ಹೌದು, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಮುಂಬೈಕರ್ನನ್ನ ಟೆಸ್ಟ್ ಟೀಮ್ನಿಂದ ಕಿಕೌಟ್ ಮಾಡಲಾಗಿದೆ. ತವರಿನಲ್ಲಿ ಸರಣಿ ನಡೆಯುತ್ತಿದ್ದರೂ ಶ್ರೇಯಸ್ ಕಳೆದ ಎರಡು ಟೆಸ್ಟ್ನಲ್ಲಿ ಹೊಡೆದಿರುವುದು ಜಸ್ಟ್ 94 ರನ್ಗಳನ್ನ ಮಾತ್ರ. ಹಾಗಾಗಿಯೇ ಡ್ರಾಪ್ ಮಾಡಲಾಗಿದ್ದು, ಅವರು ಮತ್ತೆ ತಂಡ ಸೇರಿಕೊಳ್ಳೋದು ದುಸ್ತರ.

ರಜತ್ ಪಾಟಿದರ್, ಸರ್ಫರಾಜ್ ಖಾನ್ ಟೀಮ್ನಲ್ಲಿದ್ದಾರೆ. ಸದ್ಯ ರಣಜಿಯಲ್ಲಿ ಸಾಕಷ್ಟು ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಶ್ರೇಯಸ್ ಮತ್ತೆ ಟೆಸ್ಟ್ ತಂಡ ಸೇರಿಕೊಳ್ಳಬೇಕು ಅಂದ್ರೆ ಡೊಮೆಸ್ಟಿಕ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಸದ್ಯ ಇರುವ ಕಾಂಪಿಟೇಶನ್ ನೋಡಿದ್ರೆ, ಶ್ರೇಯಸ್ ಕಮ್ಬ್ಯಾಕ್ ಮಾಡೋದು ಕಷ್ಟ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?