SA20 League: ಸತತ ಎರಡನೇ ಬಾರಿಗೆ ಕಪ್‌ ಗೆದ್ದ ಸನ್‌ರೈಸರ್ಸ್‌..! ಖುಷಿಯಲ್ಲಿ ಸಂಭ್ರಮಿಸಿದ ಕಾವ್ಯ ಮಾರನ್

By Naveen Kodase  |  First Published Feb 11, 2024, 12:25 PM IST

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು, ಫೈನಲ್‌ನಲ್ಲೂ ಅಮೋಘ ಪ್ರದರ್ಶನ ತೋರಿತು. ಬ್ಯಾಟಿಂಗ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಆ ಬಳಿಕ ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿತು.


ಜೋಹಾನ್ಸ್‌ಬರ್ಗ್‌(ಫೆ.11): ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಸತತ ಎರಡನೇ ಬಾರಿಗೆ SA20 ಲೀಗ್ ಟೂರ್ನಿಯಲ್ಲಿ  ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಸಂಜೆ ನಡೆದ ಎರಡನೇ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ತಂಡದ ಒಡತಿ ಕಾವ್ಯ ಮಾರನ್ ಮೈದಾನದಲ್ಲೇ ಕುಣಿದುಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ.

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು, ಫೈನಲ್‌ನಲ್ಲೂ ಅಮೋಘ ಪ್ರದರ್ಶನ ತೋರಿತು. ಬ್ಯಾಟಿಂಗ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಆ ಬಳಿಕ ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿತು. ಮಾರ್ಕೊ ಯಾನ್ಸೆನ್‌ 30 ರನ್ ನೀಡಿ 5 ವಿಕೆಟ್ ಪಡೆದರೆ, ಡ್ಯಾನ್ ವಾರೆಲ್ ಹಾಗೂ ಓಟ್‌ನೀಲ್ ಬಾರ್ತ್‌ಮನ್ ತಲಾ ಎರಡು ವಿಕೆಟ್ ಕಬಳಿಸಿದರು.

Kavya Maran is over the moon after SEC won their second consecutive SA20 Title last night. pic.twitter.com/nuWIwJw88U

— Vibhor (@dhotedhulwate)

Latest Videos

undefined

ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡದ ಪರ ಟಾಮ್ ಅಬೆಲ್(55), ಟ್ರಿಸ್ಟನ್ ಸ್ಟಬ್ಸ್(56*) ಹಾಗೂ ನಾಯಕ ಏಯ್ಡನ್ ಮಾರ್ಕ್‌ರಮ್ ಹಾಗೂ ಜೋರ್ಡನ್ ಹೆರ್ಮನ್‌(42) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿತು. 

ರೋಹಿತ್ ಪಡೆಗೆ ಇಂಜುರಿಯದ್ದೇ ದೊಡ್ಡ ಸಮಸ್ಯೆ.! ಟೆಸ್ಟ್ ಸರಣಿ ಗೆಲ್ಲೋದೇ ಬಿಗ್ ಚಾಲೆಂಜ್

ಹೀಗಿತ್ತು ನೋಡಿ ಸಂಭ್ರಮದ ಕ್ಷಣ:

Madam Kavya Maran on 's 2nd title win pic.twitter.com/pdIrVr3729

— Sunrisers Army (@srhorangearmy)

A moment for the boys and generations to remember, Kavya Maran lifting the 🏆 pic.twitter.com/5L6njHylQ2

— Arpita Singhal (@arpita_singhal1)

ಇನ್ನು ಗುರಿ ಬೆನ್ನತ್ತಿದ ಕೇಶವ್ ಮಹಾರಾಜ್ ನೇತೃತ್ವದ ಡರ್ಬನ್ ಸೂಪರ್ ಜೈಂಟ್ಸ್‌  ತಂಡವು 63 ರನ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಅಂತಿಮವಾಗಿ ಡರ್ಬನ್ ಸೂಪರ್ ಜೈಂಟ್ಸ್ ತಂಡವು 17 ಓವರ್‌ಗಳಲ್ಲಿ 115 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು 89 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

click me!