ಇವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ್ರೆ ಸುಧಾರಿಸಬಹುದು; ಧವನ್‌ಗೆ ಜಡ್ಡು ಹೀಗಂದಿದ್ದೇಕೆ..? ವಿಡಿಯೋ ವೈರಲ್

By Naveen Kodase  |  First Published Sep 24, 2022, 5:24 PM IST

ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ ಧವನ್-ಜಡೇಜಾ ರೀಲ್ಸ್‌
ಇವನಿಗೊಂದು ಮದುವೆಯಾದರೆ ಸರಿ ಹೋಗುತ್ತೆ ಎಂದ ಜಡೇಜಾ
ಸದ್ಯಕ್ಕಿಲ್ಲ, ಕೆಲ ಕಾಲ ಕಾಯಿರಿ ಎಂದ ಗಬ್ಬರ್ ಸಿಂಗ್ ಖ್ಯಾತಿಯ ಧವನ್


ಮುಂಬೈ(ಸೆ.24): ಒಂದು ಕಡೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಭರದಿಂದ ಸಾಗುತ್ತಿದೆ. ಮತ್ತೊಂದೆಡೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ರೀಲ್ಸ್‌ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಮತ್ತೋರ್ವ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಜತೆಗೂಡಿ ಮಾಡಿರುವ ರೀಲ್ಸ್‌ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಏಷ್ಯಾಕಪ್ ಟೂರ್ನಿಯ ಸಂದರ್ಭದಲ್ಲಿ ರವೀಂದ್ರ ಜಡೇಜಾ ಟೀಂ ಬಾಂಡಿಂಗ್‌ ಚಟುವಟಿಕೆ ವೇಳೆ ಸ್ಕೀ ಬೋರ್ಡ್‌ ಮೇಲೆ ಸಾಹಸ ಮಾಡಲು ಹೋದಾಗ ಗಾಯಗೊಂಡು ಮಂಡಿ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಜಡ್ಡು ಹೊರಬಿದ್ದಿದ್ದಾರೆ. ಇನ್ನು ಭಾರತದ ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಶಿಖರ್ ಧವನ್ ಕೂಡಾ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಧವನ್, ಇದೀಗ ಜಡೇಜಾ ಜತೆಗೂಡಿ ಬಾಲಿವುಡ್‌ನ ಖ್ಯಾತ ಡೈಲಾಗ್‌ವೊಂದರ ವಿಡಿಯೋ ರೀಲ್ಸ್‌ ಪೋಸ್ಟ್‌ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Asianet Suvarna News (@asianetsuvarnanews)

ವಿಡಿಯೋದಲ್ಲಿ ಶಿಖರ್ ಧವನ್‌, ಜಡ್ಡು ಅವರ ಸುತ್ತ ಮನಬಂದಂತೆ ಕುಣಿಯುತ್ತಿರುವಾಗ ಬಾಲಿವುಡ್‌ನ ಖ್ಯಾತ ಡೈಲಾಗ್‌,Iski shaadi karwa dijiye, zimmedari ayegi to sudhar jayeja (ಇವನಿಗೊಂದು ಮದುವೆ ಮಾಡಿಬಿಡಿ, ಆಮೇಲೆ ಜವಾಬ್ದಾರಿ ಬರುತ್ತೆ, ಸುಧಾರಿಸಿಕೊಳ್ಳುತ್ತಾನೆ) ಎನ್ನುವಂತೆ ಜಡೇಜಾ ಲಿಪ್‌ಸಿಂಕ್ ಮಾಡಿದ್ದಾರೆ. ಈ ವಿಡಿಯೋವನ್ನು ಶಿಖರ್ ಧವನ್ ಪೋಸ್ಟ್‌ ಮಾಡಿದ್ದು, ಇಲ್ಲ ಇಲ್ಲ, ಈಗಲೇ ಇಲ್ಲ, ಸ್ವಲ್ಪ ಸಮಯ ಕಾಯಿರಿ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಸದ್ಯ ರವೀಂದ್ರ ಜಡೇಜಾ, ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಧವನ್ ಕೂಡಾ ಎನ್‌ಸಿಎನಲ್ಲಿಯೇ ಇದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

DK ಅಂದ್ರೆ ಡೆತ್ ಓವರ್ ಕಿಲ್ಲರ್; ದಿನೇಶ್ ಕಾರ್ತಿಕ್ ಆಟಕ್ಕೆ ಫ್ಯಾನ್ಸ್ ಫಿದಾ..!

ಕಳೆದ ಒಂದು ವರ್ಷದ ಹಿಂದಷ್ಟೇ ಶಿಖರ್ ಧವನ್ ಹಾಗೂ ಪತ್ನಿ ಆಯೆಶಾ ಮುಖರ್ಜಿ ಡೈವರ್ಸ್‌ಗೆ ಮುಂದಾಗಿದ್ದರು. ಇದಾದ ಬಳಿಕ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿಲ್ಲ. ರವೀಂದ್ರ ಜಡೇಜಾ ಹಾಗೂ ಶಿಖರ್ ಧವನ್ ಮಾಡಿರುವ ರೀಲ್ಸ್‌ಗೂ ಶಿಖರ್ ಧವನ್‌ ಮದುವೆಗೂ ಏನಾದರೂ ಲಿಂಕ್ ಇದೆಯಾ ಎನ್ನುವ ಪ್ರಶ್ನೆ ಇದೀಗ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

click me!