RIP Shane Warne ವಿಶ್ವ ಕ್ರಿಕೆಟ್ ಗೆ ಅಚ್ಚರಿ ನೀಡಿದ್ದ ಸ್ಪಿನ್ ದಿಗ್ಗಜನ "ಶತಮಾನದ ಎಸೆತ"!

Suvarna News   | Asianet News
Published : Mar 04, 2022, 11:21 PM ISTUpdated : Mar 04, 2022, 11:22 PM IST
RIP Shane Warne  ವಿಶ್ವ ಕ್ರಿಕೆಟ್ ಗೆ ಅಚ್ಚರಿ ನೀಡಿದ್ದ ಸ್ಪಿನ್ ದಿಗ್ಗಜನ "ಶತಮಾನದ ಎಸೆತ"!

ಸಾರಾಂಶ

30 ವರ್ಷಗಳ ಹಿಂಚೆ ಮ್ಯಾಂಚೆಸ್ಟರ್ ನಲ್ಲಿ ನಡೆದಿತ್ತು ಅಚ್ಚರಿ ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಎಸೆತದಿದ್ದರು Ball Of The Century ಆಶಷ್ ಟೆಸ್ಟ್ ನಲ್ಲಿ ಶತಮಾನದ ಎಸೆತಕ್ಕೆ ಉರುಳಿತ್ತು ಮೈಕ್ ಗ್ಯಾಟಿಂಗ್ ವಿಕೆಟ್ 

ನವದೆಹಲಿ (ಮಾ.4): ಆಸ್ಟ್ರೇಲಿಯಾದ (Australia) ದಿಗ್ಗಜ ಕ್ರಿಕೆಟಿಗ (Cricket Legend), ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಸ್ಪಿನ್ನರ್ (King Of Spin) ಶೇನ್ ವಾರ್ನ್ (Shane Warne) ಶುಕ್ರವಾರ ವಿಧಿವಶರಾಗಿದ್ದಾರೆ. ಥಾಯ್ಲೆಂಡ್ ನ (Thailand) ಕೋಹ್ ಸಮುಯ್ ನಲ್ಲಿ (Koh Samui)ರಜಾ ದಿನಗಳನ್ನು ಕಳೆಯುವ ಸಲುವಾಗಿ ತೆರಳಿದ್ದ ಶೇನ್ ವಾರ್ನ್ ಗೆ ಸಂಜೆಯ ವೇಳೆ ಗಂಭೀರ ಪ್ರಮಾಣದ ಹೃದಯಾಘಾತವಾಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅವರ ಟೀಮ್ ಪ್ರಕಟಣೆಯಲ್ಲಿ ತಿಳಿಸಿದೆ. ಫಾಕ್ಸ್ ಸ್ಪೋರ್ಟ್ಸ್ ಈ ಸುದ್ದಿಯನ್ನು ಬಿತ್ತರಿಸುತ್ತಿದ್ದಂತೆ, ವಾರ್ನ್ ಅವರ ಗೂಗ್ಲಿಗೆ ಅಚ್ಚರಿ ಪಡುವ ರೀತಿಯಲ್ಲೇ ವಿಶ್ವ ಕ್ರಿಕೆಟ್ ಅಚ್ಚರಿ ವ್ಯಕ್ತಪಡಿಸಿದೆ. 145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಉರುಳಿಸಿದ್ದ ಶೇನ್ ವಾರ್ನ್, 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಉರುಳಿಸಿದ್ದರು. ತಮ್ಮ ಎಸೆತಗಳಿಗೆ ಬ್ಯಾಟ್ಸ್ ಮನ್ ಕ್ರೀಸ್ ನಲ್ಲಿ ಡಾನ್ಸ್ ಮಾಡುವಂತೆ ಮಾಡುತ್ತಿದ್ದ ಶೇನ್ ವಾರ್ನ್, 1992ರಲ್ಲಿ ಮೊಟ್ಟಮೊದಲ ಬಾರಿಗೆ ಗಮನಕ್ಕೆ ಬಂದಿದ್ದರು.

ಶೇನ್ ವಾರ್ನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 15 ವರ್ಷಗಳ ಹಿಂದೆ ಆಡಿದ್ದರೂ, ಅವರ ಐಕಾನಿಕ್ ಬಾಲ್ ಆಫ್ ದ ಸೆಂಚುರಿ ಅಥವಾ ಶತಮಾನದ ಎಸೆತ ಇಂದಿಗೂ ಕಿಂಗ್ ಅಫ್ ಸ್ಪಿನ್ ಎಂದಾಗ ನೆನಪಾಗುತ್ತದೆ. ವಿಶ್ವ ಕ್ರಿಕೆಟ್ ನಲ್ಲಿ 700ಕ್ಕೂ ಅಧಿಕ ಟೆಸ್ಟ್ ವಿಕೆಟ್ ಉರುಳಿಸಿದ ಏಕೈಕ ಲೆಗ್ ಸ್ಪಿನ್ನರ್ ಎನಿಸಿಕೊಂಡಿರುವ ವಾರ್ನ್, ಅಂದಾಜು 30 ವರ್ಷಗಳ ಹಿಂದೆ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ (England Batsman) ಮೈಕ್ ಗ್ಯಾಟಿಂಗ್ (Mike Gatting) ಅವರನ್ನು ಔಟ್ ಮಾಡಲು ಎಸೆದ ಎಸೆತ ಇಂದಿಗೂ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ (Manchester) ನಡೆದ ಟೆಸ್ಟ್ ಪಂದ್ಯದಲ್ಲಿ ಶೇನ್ ವಾರ್ನ್ ಮೈಕ್ ಗ್ಯಾಟಿಂಗ್ ಅವರನ್ನು ಬೌಲ್ಡ್ ಮಾಡಿದ್ದರು. ಈ ಚೆಂಡು ತಿರುವು ಪಡೆದ ರೀತಿಯನ್ನು ಕಂಡು ವಿಶ್ವ ಕ್ರಿಕೆಟ್ ಈ ಎಸೆತವನ್ನು "ಶತಮಾನದ ಎಸೆತ" ಅಥವಾ ಬಾಲ್ ಆಫ್ ದ ಸೆಂಚುರಿ (Ball Of The Century) ಎಂದು ಘೋಷಣೆ ಮಾಡಿತ್ತು. ವಾರ್ನ್ ಎಸೆದ ಮ್ಯಾಜಿಕ್ ಬಾಲ್ ಗ್ಯಾಟಿಂಗ್ ಅವರ ಆಫ್ ಸ್ಟಂಪ್ ಗೆ ಅಪ್ಪಳಿಸಲು 90 ಡಿಗ್ರಿ ತಿರುಗಿತ್ತು!

1992ರಲ್ಲಿ ಭಾರತ ವಿರುದ್ಧ ಸಿಡ್ನಿ ಟೆಸ್ಟ್ ನಲ್ಲಿ ಆಡುವ ಮೂಲಕ ಶೇನ್ ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಮೊದಲ ಟೆಸ್ಟ್ ನಲ್ಲಿ ಕೇವಲ 1 ವಿಕೆಟ್ ಉರುಳಿಸುವ ಮೂಲಕ ಶೇನ್ ವಾರ್ನ್ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 1993ರ ಆಶಸ್ ಸರಣಿಗೂ (1993 Ashes series) ಮುನ್ನ ಆಡಿದ 11 ಟೆಸ್ಟ್ ಪಂದ್ಯಗಳಿಂದ 32 ವಿಕೆಟ್ ಉರುಳಿಸಿದ್ದ ವಾರ್ನ್ ಅವರನ್ನು ಸಾಮಾನ್ಯ ಲೆಗ್ ಸ್ಪಿನ್ನರ್ ಎಂದು ವಿಶ್ವ ಗುರುತಿಸಿತ್ತು. ಆದರೆ, 1992ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 52 ರನ್ ಗೆ 7 ವಿಕೆಟ್ ಉರುಳಿಸಿ ಮೊದಲ ಬಾರಿಗೆ ಗಮನಸೆಳೆದಿದ್ದರು.

RIP Shane Warne ಸಚಿನ್,ಧೋನಿ, ಕೊಹ್ಲಿ ಸೇರಿ ಭಾರತದ ಕ್ರಿಕೆಟಿಗರ ಕುರಿತು ಶೇನ್ ವಾರ್ನ್ ಮಾತುಗಳೇ ರೋಮಾಂಚನ!
ಆದರೆ, ಅವರ ನಿಜವಾದ ಸ್ಪಿನ್ ಸಾಮರ್ಥ್ಯ ಬಯಲಾಗಿದ್ದು 1993ರ ಆಶಸ್ ಸರಣಿಯಲ್ಲಿ ತಮ್ಮ ಮೊಟ್ಟಮೊದಲ ಆಶಸ್ ಟೆಸ್ಟ್ ಸರಣಿಯ 5 ಪಂದ್ಯಗಳಿಂದ ವಾರ್ನ್ 29 ವಿಕೆಟ್ ಉರುಳಿಸಿದ್ದರು. 1993ರ ಆಶಸ್ ಟೆಸ್ಟ್ ಸರಣಿಯ ಮೊದಲ ಓವರ್ ನಲ್ಲಿಯೇ ಪಿಚ್ ನ ಲಾಭವನ್ನು ಪಡೆದುಕೊಂಡ ವಾರ್ನ್ ಅದ್ಭುತ ಲೆಗ್ ಸ್ಪಿನ್ ಎಸೆದಿದ್ದರು. ಮೈಕ್ ಗ್ಯಾಟಿಂಗ್ ಅವರ ಲೆಗ್ ಸ್ಟಂಪ್ ನ ಔಟ್ ಸೈಡ್ ನಲ್ಲಿ ಪಿಚ್ ಆಗಿದ್ದ ಚೆಂಡು, ಸಂಪೂರ್ಣ 90 ಡಿಗ್ರಿ ತಿರುಗಿ ಗ್ಯಾಟಿಂಗ್ ಅವರ ಆಫ್ ಸ್ಟಂಪ್ ಅನ್ನು ಎಗರಿಸಿತ್ತು.

ಆಸೀಸ್ ಸುವರ್ಣ ದಿನಗಳ ಸೂತ್ರಧಾರ Shane Warne ನಿಧನಕ್ಕೆ, ವಿಶ್ವ ಕ್ರಿಕೆಟ್ ಅಚ್ಚರಿ!
ಆ ಬಳಿಕ ಸಾಕಷ್ಟು ಬಾರಿ ಸಂದರ್ಶನದಲ್ಲಿ ಈ ಎಸೆತದ ಬಗ್ಗೆ ಶೇನ್ ವಾರ್ನ್ ಮಾತನಾಡಿದ್ದರು. ಇಂಥದ್ದೊಂದು ಎಸೆತವನ್ನು ನಾನು ಎಸೆಯಬಲ್ಲೆ ಎನ್ನುವ ಅಂದಾಜು ನನಗಿರಲಿಲ್ಲ. ಅತ್ಯುತ್ತಮ ಲೆಗ್ ಬ್ರೇಕ್ ಎಸೆಯಬಲ್ಲೆ ಎಂದು ನನಗೆ ತಿಳಿದಿತ್ತು. ಅಷ್ಟೇ ಪ್ರಯತ್ನ ಪಟ್ಟಿದ್ದೆ. ಅಚ್ಚರಿ ಎನ್ನುವಂತೆ ಚೆಂಡು 90 ಡಿಗ್ರಿ ತಿರುವುದು ಪಡೆದುಕೊಂಡಿತ್ತು. ಚೆಂಡು ಹೋದ ರೀತಿ ನನಗೆ ನಂಬಲು ಅಸಾಧ್ಯವಾಗಿತ್ತು. "ಬಾಲ್ ಆಫ್ ದ ಸೆಂಚುರಿ" ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎಂದೂ ವಾರ್ನ್ ಹೇಳಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?