RIP Shane Warne ಸಚಿನ್,ಧೋನಿ, ಕೊಹ್ಲಿ ಸೇರಿ ಭಾರತದ ಕ್ರಿಕೆಟಿಗರ ಕುರಿತು ಶೇನ್ ವಾರ್ನ್ ಮಾತುಗಳೇ ರೋಮಾಂಚನ!

Published : Mar 04, 2022, 09:27 PM IST
RIP Shane Warne ಸಚಿನ್,ಧೋನಿ, ಕೊಹ್ಲಿ ಸೇರಿ ಭಾರತದ ಕ್ರಿಕೆಟಿಗರ ಕುರಿತು ಶೇನ್ ವಾರ್ನ್ ಮಾತುಗಳೇ ರೋಮಾಂಚನ!

ಸಾರಾಂಶ

ಶೇನ್ ವಾರ್ನ್ ನಿಧನದಿಂದ ಕ್ರೀಡಾ ಜಗತ್ತಿಗೆ ಶಾಕ್ ಹೃದಯಾಘಾತದಿಂದ ದಿಗ್ಗಜ ಸ್ಪಿನ್ನರ್ ನಿಧನ ಟೀಂ ಇಂಡಿಯಾ ಕ್ರಿಕೆಟಿಗರ ಕುರಿತು ವಾರ್ನ್ ಮಾತು ಅದ್ಭುತ

ಥಾಯ್ಲೆಂಡ್(ಮಾ.04): ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ನಿಧನ ಕ್ರಿಕೆಟ್ ಲೋಕಕ್ಕೆ ತೀವ್ರ ಆಘಾತ ತಂದಿದೆ. ಎಂದಿನಂತೆ ಲವಲವಿಕೆಯಿಂದ ಇದ್ದ ಶೇನ್ ವಾರ್ನ್ ಸಂಜೆ ವೇಳೆ ಹೃದಯಾಘಾತದಿಂದ ನಿಧರಾಗಿದ್ದಾರೆ. 52ರ ಹರೆಯದ ಸ್ಪಿನ್ನರ್ ಅಗಲಿಕೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿ ವಿಶ್ವ ಕ್ರಿಕೆಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.ಭಾರತ ಹಾಗೂ ಭಾರತೀಯ ಕ್ರಿಕೆಟಿಗರ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ ಶೇನ್ ವಾರ್ನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚಾಗಿದ್ದರು. ಇನ್ನು ಭಾರತೀಯ ಕ್ರಿಕೆಟಿಗರ ಕುರಿತು ಆಡಿದ ಮಾತುಗಳು ಅಭಿಮಾನಿಗಳ ಮನದಲ್ಲಿ ಹಚ್ಚ ಹಸುರಾಗಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಶೇನ್ ವಾರ್ನ್ ಆತ್ಮೀಯ ಕ್ರಿಕೆಟಿಗರು. ಮೈದಾನದಲ್ಲಿ ಬದ್ಧವೈರಿಗಳಾಗಿದ್ದರೂ, ಆಫ್ ದಿ ಫೀಲ್ಡ್‌ನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅತ್ಯಂತ ಗೌರವದಿಂದ ಕಂಡಿದ್ದಾರೆ. ಮಾಂತ್ರಿಕ ಸ್ಪಿನ್ನರ್ ಆಗಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸುತ್ತಿದ್ದ ಶೇನ್ ವಾರ್ನ್‌ಗೆ ಸಚಿನ್ ತೆಂಡುಲ್ಕರ್ ಬೌಂಡರಿ ಸಿಕ್ಸರ್ ಮೂಲಕ ತಿರುಗೇಟು ನೀಡಿದ್ದರು. ಈ ಪಂದ್ಯದ ಬಳಿಕ ಸಚಿನ್ ತನ್ನ ಕನಸಿನಲ್ಲೂ ಬರುತ್ತಿದ್ದರೂ ಎಂದಿದ್ದರು. ವಿದಾಯದ ಬಳಿಕವೂ ವಾರ್ನ್ ಹಾಗೂ ಸಚಿನ್ ಐಪಿಎಲ್, ದುಬೈನಲ್ಲಿ ನಡೆದ ಚಾರಿಟಿ ಪಂದ್ಯ, ಸ್ಟಾರ್ಸ ಟೂರ್ನಿ ಸೇರಿದಂತೆ ಹಲವು  ಪಂದ್ಯಗಳಲ್ಲಿ ಎದುರಾಗಿದ್ದಾರೆ. 

RIP Shane warne ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ವಾರ್ನ್ ಕೊನೆಯ ಟ್ವೀಟ್, ದಿಗ್ಗಜನ ಅಗಲಿಕೆ ತಂದ ಆಘಾತ!

ಕ್ರಿಕೆಟ್ ಕಂಡ  ಶ್ರೇಷ್ಠ ಕ್ರಿಕೆಟಿಗ, ಯುವ ಕ್ರಿಕೆಟಿಗರಿಗೆ ಮಾದರಿ, ಮುಂದಿನ ಜನಾಂಗಕ್ಕೆ ಕ್ರಿಕೆಟ್ ಕೊಂಡೊಯ್ದ ರಾಯಭಾರಿ ಎಂದು ಸಚಿನ್ ಕುರಿತು ವಾರ್ನ್ ಹೇಳಿದ್ದರು. ಸಚಿನ್ ಮಾತ್ರವಲ್ಲ, ಟೀಂ ಇಂಡಿಯಾ ಬಹುತೇಕ ದಿಗ್ಗಜ ಕ್ರಿಕೆಟಿಗರಿಂದ ಹಿಡಿದು ಯುವ ಪ್ರತಿಭಾನ್ವಿತ ಕ್ರಿಕೆಟಿಗರ ಕುರಿತು ವಾರ್ನ್ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ವಿರಾಟ್ ಕೊಹ್ಲಿ ಕುರಿತು ವಾರ್ನ್ ಹಲವು ಬಾರಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಅದ್ಭುತ ಕ್ರಿಕೆಟಿಗ,ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ ಎಂದಿದ್ದಾರೆ.ಕೊಹ್ಲಿ ಕುರಿತು ನನಗೆ ಅತ್ಯಂತ ಗೌರವ ಹೊರತು ಪಡಿಸಿ ಬೇರೇನು ಇಲ್ಲ. ಟೆಸ್ಟ್ ಕ್ರಿಕೆಟನ್ನು ನಂ. 1 ಮಾದರಿಯನ್ನಾಗಿ ಮತ್ತಷ್ಟು ಕ್ಲಾಸ್ ಆಟವನ್ನಾಗಿ ಮಾಡಿದ ಕೊಹ್ಲಿಗೆ ಧನ್ಯವಾದ ಎಂದು ಶೇನ್ ವಾರ್ನ್ ಹೇಳಿದ್ದಾರೆ.

Shane Warne Dies ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನ

ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ ದಾಖಲೆ ಇನ್ನಿಂಗ್ಸ್ ಕುರಿತು ವಾರ್ನ್ ಸದಾ ಹೇಳುತ್ತಲೇ ಬಂದಿದ್ದಾರೆ. ನನ್ನ ಕಾಲದಲ್ಲಿನ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ. ಇದು ಕೇವಲ ಅಂದಿನ ಕಾಲಕ್ಕೆ ಮಾತ್ರವಲ್ಲ ಎಲ್ಲಾ ಕಾಲಕ್ಕೂ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ ಆಗಿ ಉಳಿದುಕೊಳ್ಳಲಿದೆ. ರಾಹುಲ್ ದ್ರಾವಿಡ್ ಅಸಾಧಾರಣ ಇನ್ನಿಂಗ್ಸ್ , ಲಕ್ಷಣ್ ಅವರ ಸುಂದರ ಇನ್ನಿಂಗ್ಸ್ ಕಣ್ಣಿಗೆ ಕಟ್ಟಿದಂತಿದೆ ಎಂದಿದ್ದರು. 

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಕುರಿತು ಶೇನ್ ವಾರ್ನ್ ಹಲವು ಬಾರಿ ಪ್ರಶಂಸೆ, ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.ಧೋನಿ ಕುರಿತು, ಧೋನಿ ಬ್ಯಾಟಿಂಗ್ ಕುರಿತು ಟೀಕೆಗಳು ಕೇಳಿಬಂದಾಗ ವಾರ್ನ್ ಖಡಕ್ ಮಾತಿನಲ್ಲಿ ಉತ್ತರ ನೀಡಿದ್ದರು. ಧೋನಿ ಯಾರಿಗೂ ಏನನ್ನು ಸಾಬೀತುಪಡಿಸಬೇಕಿಲ್ಲ. ಧೋನಿ ಕ್ಲಾಸ್ ಹಾಗೂ ಅದ್ಭುತ ಆಟಗಾರ. ಎಲ್ಲಾ ಮಾದರಿಯಲ್ಲಿ ಧೋನಿ ಮೀರಿಸುವ ಆಟಗಾರನಿಲ್ಲ. ಇಷ್ಟೇ ಅಲ್ಲ ಅತ್ಯಂತ ಶ್ರೇಷ್ಠ ನಾಯಕ, ಕೋಟಿ ಕೋಟಿ ಮಂದಿಗೆ ಸ್ಪೂರ್ತಿ ಎಂದು ವಾರ್ನ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?