ನಿಷೇಧದ ಬೆನ್ನಲ್ಲೇ MCC ಕ್ರಿಕೆಟ್ ಸಮಿತಿಗೆ ಶಕೀಬ್ ರಾಜೀನಾಮೆ!

By Web DeskFirst Published Oct 30, 2019, 4:10 PM IST
Highlights

ಐಸಿಸಿ 2 ವರ್ಷದ ನಿಷೇಧದ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಶಕೀಬ್ ಅಲ್ ಹಸನ್, ಪ್ರತಿಷ್ಠಿತ  MCC ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. 

ಢಾಕ(ಅ.30): ಬಾಂಗ್ಲಾದೇಶ ಹಿರಿಯ ಆಲ್ರೌಂಡರ್ ಶಕೀಬ್ ಅಲ್ ಹಸನ್‌ಗೆ ಐಸಿಸಿ 2 ವರ್ಷ ನಿಷೇಧದ ಶಿಕ್ಷೆ ಹೇರಿದೆ. ಶಕೀಬ್ ಬ್ಯಾನ್‌ಗೆ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬುಕ್ಕಿಗಳು ಸಂಪರ್ಕಿಸಲು ಯತ್ನಿಸಿದ ಮಾಹಿತಿಯನ್ನು, ICC ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡದ ಕಾರಣ ಶಕೀಬ್‌ಗೆ ನಿಷೇಧ ಹೇರಲಾಗಿದೆ. ಶಿಕ್ಷೆಯ ಬೆನ್ನಲ್ಲೇ ಶಕೀಬ್ ಪ್ರತಿಷ್ಠಿತ MCC ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

ಹಾಲಿ ಹಾಗೂ ಮಾಜಿ ಕ್ರಿಕೆಟಿಗರನ್ನೊಳಗೊಂಡ MCC(Marylebone Cricket Club) ವರ್ಷಕ್ಕೆ 2 ಬಾರಿ ಸಭೆ ಸೇರಿ, ಕ್ರಿಕೆಟ್ ಆಗುಹೋಗುಗಳು, ಅಭಿವೃದ್ಧಿ, ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳ ಸಭೆ ನಡೆಸುತ್ತೆ. ಆಟಗಾರರಿಗೆ ಮಾರ್ಗದರ್ಶನ, ನಿಯಮಗಳ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆ. ಆದರೆ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಶಕೀಬ್, MCC ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಶಕೀಬ್‌ಗೆ 2 ವರ್ಷ ನಿಷೇಧದ ಶಿಕ್ಷೆ; ಗಳ ಗಳನೆ ಅತ್ತ ಮುಷ್ಫಿಕರ್ ರಹೀಮ್

ಶಕೀಬ್ ಅತ್ಯುತ್ತಮ ಕ್ರಿಕೆಟಿಗ, ಯುವ ಕ್ರಿಕೆಟಿಗರಿಗೆ ಮಾದರಿ. ಕ್ರೀಡಾಸ್ಪೂರ್ತಿಯಿಂದ ಆಡೋ ಶಕೀಬ್, ಸಮಿತಿಯ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿರುತ್ತಾರೆ. ಜೊತೆಗೆ ಉಪಯುಕ್ತ ಸಲಹೆ ನೀಡುತ್ತಿದ್ದರು. ಇದೀಗ ಶಕೀಬ್ ರಾಜೀನಾಮೆಯಿಂದ ಸಮಿತಿಯ ಪ್ರಮುಖ ಸದಸ್ಯರ ಅನುಪಸ್ಥಿತಿ ಕಾಡಲಿದೆ. ಶಕೀಬ್ ರಾಜೀನಾಮೆಯನ್ನು ಸ್ವೀಕರಿಸುತ್ತೇವೆ. ಕಾರಣ ಶಕೀಬ್ ನಿರ್ಧಾರ ಸರಿಯಾಗಿದೆ ಎಂದು ಕ್ರಿಕೆಟ್ ಸಮಿತಿ ಮುಖ್ಯಸ್ಥ ಮೈಕ್ ಗ್ಯೆಟಿಂಗ್ ಹೇಳಿದ್ದಾರೆ.

click me!