
ಢಾಕಾ(ಫೆ.04) ಆರಂಭಿಕ ಬ್ಯಾಟ್ಸ್‌ಮನ್ ಶದ್ಮಾನ್ ಇಸ್ಲಾಂ (59) ಬಾರಿಸಿದ ಚೊಚ್ಚಲ ಅರ್ಧಶತಕ ಹಾಗೂ ಶಕೀಬ್ ಅಲ್ ಹಸನ್ (39*) ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ. ಮೊದಲ ದಿನಾದಾಟದಂತ್ಯಕ್ಕೆ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು 242 ರನ್‌ಗಳಿಸಿದೆ.
ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಆರಂಭಿಕ ಆಘಾತ ಆನುಭವಿಸಿತು. ಅನುಭವಿ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಆಘಾತದ ಹೊರತಾಗಿಯೂ ಮತ್ತೋರ್ವ ಓಪನ್ನರ್ ಶದ್ಮಾನ್ ಇಸ್ಲಾಂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಬರೋಬ್ಬರಿ 154 ಎಸೆತಗಳನ್ನು ಎದುರಿಸಿದ ಶದ್ಮಾನ್ 6 ಬೌಂಡರಿ ಸಹಿತ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇವರಿಗೆ ನಜ್ಮುಲ್ ಹುಸೈನ್(25), ನಾಯಕ ಮೊಮಿನುಲ್ ಹಕ್(26) ಹಾಗೂ ಮುಷ್ಫಿಕುರ್ ರಹೀಮ್ (38)ಉತ್ತಮ ಸಾಥ್ ನೀಡಿದರು.
ಭಾರತ ಸರಣಿಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಓಲಿ ಪೋಪ್
ಸದ್ಯ ಬಾಂಗ್ಲಾದೇಶದ ಮತ್ತೋರ್ವ ಅನುಭವಿ ಬ್ಯಾಟ್ಸ್‌ಮನ್ ಶಕೀಬ್ ಅಲ್ ಹಸನ್(39) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್(34) ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ಈ ಜೋಡಿಯ ಜತೆಯಾಟದ ಮೇಲೆ ಪಂದ್ಯದ ದಿಕ್ಕು ನಿರ್ಧಾರವಾಗುವ ಸಾಧ್ಯತೆಯಿದೆ
ಇನ್ನು ವಿಂಡೀಸ್ ಪರ ಜೊಮೆಲ್ ವರಿಕನ್ 3 ವಿಕೆಟ್ ಪಡೆದರೆ, ಕೀಮರ್ ರೋಚ್ ಕೇವಲ ಒಂದು ವಿಕೆಟ್ ಕಬಳಿಸಿದ್ದಾರೆ.
ಸ್ಕೋರ್: ಬಾಂಗ್ಲಾದೇಶ 242/5 (ಮೊದಲ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.