ವುಮೆನ್ಸ್ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಮುಂಬೈ 47 ರನ್‌ಗಳಿಂದ ಜಯಗಳಿಸಿತು. ನಾಳೆ ಡೆಲ್ಲಿ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆ.
ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 2ನೇ ಬಾರಿ ಫೈನಲ್‌ಗೇರಿದೆ. ಗುರುವಾರ ನಡೆದ 3ನೇ ಆವೃತ್ತಿ ಟೂರ್ನಿಯ ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ 47 ರನ್ ಗೆಲುವು ಸಾಧಿಸಿತು. ಇದರೊಂದಿಗೆ ಗುಜರಾತ್‌ನ ಚೊಚ್ಚಲ ಫೈನಲ್ ಕನಸು ಭಗ್ನಗೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮುಂಬೈ 4 ವಿಕೆಟ್‌ಗೆ 213 ರನ್ ಕಲೆಹಾಕಿತು. 2ನೇ ವಿಕೆಟ್‌ಗೆ ಶೀವರ್ ಬ್ರಂಟ್ ಹಾಗೂ ಹೇಲಿ ಮ್ಯಾಥ್ಯೂಸ್ 71 ಎಸೆತಗಳಲ್ಲಿ 133 ರನ್ ಜೊತೆಯಾಟವಾಡಿದರು. ಇಬ್ಬರೂ ತಲಾ 77 ರನ್ ಸಿಡಿಸಿದರು. ಮ್ಯಾಥ್ಯೂಸ್ 50 ಎಸೆತಗಳಲ್ಲಿ ಎದುರಿಸಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿದರೆ, ಬ್ರಂಟ್ 41 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಹರ್ಮನ್‌ಪ್ರೀತ್ ಕೌರ್ ಕೇವಲ 12 ಎಸೆತಗಳಲ್ಲಿ 36 ರನ್ ಗಳಿಸಿ ತಂಡವನ್ನು 200ರ ಗಡಿ ದಾಟಿಸಿದರು. ಡೇನಿಲ್ ಗಿಬ್ಸನ್ 2 ವಿಕೆಟ್ ಕಿತ್ತರು.
WPL 2025: ಇಂದು ಮುಂಬೈ vs ಗುಜರಾತ್ ಎಲಿಮಿನೇಟರ್ ಫೈಟ್
ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ 19.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಡೇನಿಲ್ ಗಿಬ್ಸ್ 24 ಎಸೆತಗಳಲ್ಲಿ 34, ಫೋಬೆ ಲಿಚ್‌ಫೀಲ್ಡ್ 20 ಎಸೆತಗಳಲ್ಲಿ 31, ಭಾರ್ತಿ ಫುಲ್ಮಾಲಿ 20 ಎಸೆತಗಳಲ್ಲಿ 30 ರನ್ ಗಳಿಸಿದರೂ ದೊಡ್ಡ ಜೊತೆಯಾದ ಸಿಗದ ಕಾರಣ ತಂಡಕ್ಕೆ ಗೆಲುವು ಮರೀಚಿಕೆಯಾಯಿತು. ಹೇಲಿ 2 ವಿಕೆಟ್ ಕಿತ್ತರು.
ಸ್ಕೋರ್:
ಮುಂಬೈ 20 ಓವರಲ್ಲಿ 213/4 (ಶೀವರ್ 77, ಹೇಲಿ ಮ್ಯಾಥ್ಯೂಸ್ 77, ಹರ್ಮನ್‌ಪ್ರೀತ್ 36, ಗಿಬ್ಸನ್ 2-40),
ಗುಜರಾತ್ 19.2 ಓವರಲ್ಲಿ 166/10 (ಗಿಬ್ಸನ್ 34, ಲಿಚ್‌ಫೀಲ್ಡ್ 31, ಭಾರ್ತಿ 30, ಹೇಲಿ 3-31)
ಅಜಿಂಕ್ಯ ರಹಾನೆ ಕ್ಯಾಪ್ಟನ್ ಮಾಡಿ ಮಹಾ ಯಡವಟ್ಟು ಮಾಡಿತಾ ಕೆಕೆಆರ್?
ಟೂರ್ನಿಯ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಡೆಲ್ಲಿ ತಂಡ ಈ ಬಾರಿ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿದ್ದರಿಂದ ನೇರವಾಗಿ ಫೈನಲ್‌ಗೇರಿತ್ತು. 2023ರ ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಹಾಗೂ ಡೆಲ್ಲಿ ತಂಡಗಳೇ ಫೈನಲ್ ಆಡಿದ್ದರು. ಮುಂಬೈ ಗೆದ್ದಿತ್ತು. ಕಳೆದ ಬಾರಿ ಡೆಲ್ಲಿ ತಂಡ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. 3ನೇ ಬಾರಿ ಫೈನಲ್‌ಗೇರಿರುವ ತಂಡದ ಅದೃಷ್ಟ ಈ ಬಾರಿ ಕೈ ಹಿಡಿಯಲಿದೆಯೇ ಕಾದುನೋಡಬೇಕಿದೆ.