WPL 2025: ಇಂದು ಮುಂಬೈ vs ಗುಜರಾತ್ ಎಲಿಮಿನೇಟರ್ ಫೈಟ್

ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಸೆಣಸಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

WPL 2025 Mumbai Indians vs Gujarat Giants Eliminator Clash kvn

ಮುಂಬೈ: 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಿರ್ಣಾಯಕ ಹಂತ ತಲುಪಿದ್ದು, ಕೇವಲ 2 ಪಂದ್ಯ ಬಾಕಿ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ನೇರವಾಗಿ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಸುತ್ತಿನಲ್ಲಿ ತನ್ನ ಎದುರಾಳಿ ಯಾರು ಎಂದು ಕಾತರದಿಂದ ಕಾಯುತ್ತಿದೆ.

ಮತ್ತೊಂದು ಫೈನಲಿಸ್ಟ್‌ ಯಾರು  ಎನ್ನುವುದನ್ನು ನಿರ್ಧರಿಸಿಲು ಗುರುವಾರ ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಳೆದೆರಡೂ ಆವೃತ್ತಿಗಳಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಗುಜರಾತ್ ಜೈಂಟ್ಸ್‌  ಸೆಣಸಲಿವೆ. 

Latest Videos

ಗುಜರಾತ್ ವಿರುದ್ಧ ಡಬ್ಲ್ಯುಪಿಎಲ್ ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಮುಂಬೈ ಜಯ ಸಾಧಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ವಿಂಡೀಸ್ ಆಲ್ರೌಂಡರ್ ಹೇಲಿ ಮ್ಯಾಥ್ಯೂಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಆಕರ್ಷಕ ಸ್ಪಿನ್ ದಾಳಿ ಮೂಲಕ ಮುಂಬೈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇನ್ನು, ನಥಾಲಿ ಸ್ಟೀವ‌ರ್‌ಬ್ರಂಟ್, ಮುಂಬೈನ ರನ್ ಮಷಿನ್ ಎನಿ ಸಿದ್ದು 8 ಪಂದ್ಯಗಳಿಂದ ಬರೋಬ್ಬರಿ 416 ರನ್‌ ಕಲೆಹಾಕಿದ್ದು, ಫೈನಲ್‌ನಲ್ಲಿ ನಥಾಲಿ ಯನ್ನು ಕಟ್ಟಿಹಾಕದಿದ್ದರೆ ಗುಜರಾತ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ನಾಯಕಿ ಹರ್ಮನ್‌ ಪ್ರೀತ್ ಕೌರ್ ಫಿನಿಶರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬೇಕಿದ್ದು ಬೌಲರ್‌ಗಳ ನಿರ್ವಹಣೆಯಲ್ಲೂ ಚಾಕಚಕ್ಯತೆ ಪ್ರದರ್ಶಿಸಬೇಕಿದೆ. 

ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಮಾಡಿದ್ದು ಹೇಗೆ?

ಮತ್ತೊಂದೆಡೆ ಮೊದಲೆರಡು ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಗುಜರಾತ್‌ ಜೈಂಟ್‌ಗೆ ಆಶ್ಲೆ ಗಾರ್ಡ್ನರ್ ನಾಯಕತ್ವ ಹೊಸ ಹುರುಪನ್ನು ನೀಡಿದೆ. ಆಶ್ಲೆ ಗಾರ್ಡರ್ ನಾಯಕತ್ವದ ಜೊತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಬೆಥ್ ಮೂನಿ, ಹರ್ಲೀನ್ ಡಿಯೋಲ್, ದಿಯೋಂಡ್ರಾ ಡಾಟಿನ್, ಫೀಬಿ ಲಿಚ್ ಫೀಲ್ಡ್, ಕಾಶೀ ಗೌತಮ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಹಾಗೂ ಗುಜರಾತ್ ಎರಡೂ ತಂಡಗಳು ಸೋಲುಂಡಿವೆ. ಗುಜರಾತ್‌ಗೆ ಮುಂಬೈ ವಿರುದ್ದವೇ ಸೋಲು ಎದುರಾದರೆ, ಮುಂಬೈ ತಂಡ ಆರ್‌ಬಿ ವಿರುದ್ಧ ಪರಾಭವಗೊಂಡಿತ್ತು. ಹೀಗಾಗಿ ಲಯಕ್ಕೆ ಮರಳಿ ಫೈನಲ್ ಪ್ರವೇಶಿಸಲು ಎರಡೂ ತಂಡಗಳು ಹಪಹಪಿಸುತ್ತಿವೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.

ಅಜಿಂಕ್ಯ ರಹಾನೆ ಕ್ಯಾಪ್ಟನ್ ಮಾಡಿ ಮಹಾ ಯಡವಟ್ಟು ಮಾಡಿತಾ ಕೆಕೆಆರ್?

ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ 

click me!