ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿತ್ತು. ಆದರೆ ಬ್ಯಾಟಿಂಗ್ ವೇಳೆ ಅತೀ ದೊಡ್ಡ ಆಘಾತ ಅನುಭವಿಸಿದೆ. 153 ರನ್‌ಗೆ ಆಲೌಟ್ ಆಗಿರುವ ಟೀಂ ಇಂಡಿಯಾ, ಒಂದೂ ರನ್‌ಗಳಿಸದೇ ಟೆಸ್ಟ್ ಕ್ರಿಕೆಟ್‌ನಲ್ಲಿ 6 ವಿಕೆಟ್ ಕಳೆದುಕೊಂಡ ಕುಖ್ಯಾತಿಗೆ ಟೀಂ ಇಂಡಿಯಾ ಗುರಿಯಾಗಿದೆ.
ಕೇಪ್‌ಟೌನ್(ಜ.03) ಸೌತ್ ಆಫ್ರಿಕಾ ತಂಡವನ್ನು 55 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮುನ್ನಡೆ ಪಡೆದುಕೊಂಡಿತು. ಆದರೆ ದಿಟ್ಟ ಹೋರಾಟ ನೀಡಿದರೂ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೂ ರನ್‌ಗಳಿಸದೇ 6 ವಿಕೆಟ್ ಕೈಚೆಲ್ಲಿದ ಅಪಖ್ಯಾತಿಗೆ ಭಾರತ ಗುರಿಯಾಗಿದೆ. 153 ರನ್‌ಗೆ ಭಾರತದ 4 ವಿಕೆಟ್ ಪತನಗೊಂಡಿತ್ತು. ಕನಿಷ್ಠ 250 ರಿಂದ 300 ರನ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳ ಆಘಾತವಾಗಿದೆ. ಕಾರಣ 153ರನ್‌ಗೆ ಟೀಂ ಇಂಡಿಯಾ ಆಲೌಟ್ ಆಗಿದೆ. ಒಂದೂ ರನ್ ಸಿಡಿಸಿದೇ ಭಾರತ 6 ವಿಕೆಟ್ ಕಳೆದುಕೊಂಡಿದ್ದು ಮಾತ್ರವಲ್ಲ, 6 ಮಂದಿ ಶೂನ್ಯಕ್ಕೆ ಔಟಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ, ಶುಬಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದ್ದಾರೆ. ಈ ಮೂಲಕ ಭಾರತ 4 ವಿಕೆಟ್ ಕಳೆದುಕೊಂಡು 153 ರನ್ ಸಿಡಿಸಿತು. ಆದರೆ ನಂತರದ 11 ಎಸೆತದಲ್ಲಿ ಭಾರತದ ಸಂಪೂರ್ಣ ಚಿತ್ರಣ ಬದಲಾಗಿದೆ. ಒಂದೇ ಒಂದು ರನ್ ಬಂದಿಲ್ಲ. ಆದರೆ 6 ವಿಕೆಟ್‌ಗಳು ಕಳೆದುಕೊಂಡಿತು. ಇದರ ಪರಿಣಾಮ 34.5 ಓವರ್‌ಗಳಲ್ಲಿ ಭಾರತ 153 ರನ್‌ಗೆ ಆಲೌಟ್ ಆಗಿದೆ.
ಕೇಪ್‌ಟೌನ್‌ನಲ್ಲಿ ಸಿರಾಜ್ ಬಿರುಗಾಳಿ ಬೌಲಿಂಗ್; 55 ರನ್‌ಗೆ ಹರಿಣಗಳು ಧೂಳೀಪಟ..!
ಕೆಎಲ್ ರಾಹುಲ್ 8 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಆರಂಭಿಕ ಯಶಸ್ವಿ ಜೈಸ್ವಾಲ್ ಕೂಡ ಶೂನ್ಯಕ್ಕೆ ಔಟಾಗಿದ್ದಾರೆ. ಸೌತ್ ಆಫ್ರಿಕಾ ತಂಡವನ್ನು ಕೇವಲ 55 ರನ್‌ಗೆ ಆಲೌಟ್ ಮಾಡಿದ ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 98 ರನ್ ಮುನ್ನಡೆ ಪಡೆದುಕೊಂಡಿತು.
ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ದಾಳಿಗೆ ಆಘಾತ ಎದುರಿಸಿತ್ತು. ಸಿರಾಜ್ ಮಾರಕ ದಾಳಿಗೆ 6 ವಿಕಟ್ ಪತನಗೊಂಡಿತ್ತು. ಇನ್ನು ಇನ್ನು ಜಸ್ಪ್ರೀತ್ ಬುಮ್ರಾ ಹಾಗೂ ಮುಕೇಶ್ ಕುಮಾರ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
'ಏನ್ ಗುರೂ, ಕನ್ನಡ ಗೊತ್ತಿಲ್ಲ...' ಎಂದ ಬೆಂಗಳೂರು ಬಾಯ್ ವಿರಾಟ್ ಕೊಹ್ಲಿ..!
ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ,ಮುಕೇಶ್ ಕುಮಾರ್