ಬಲಿಷ್ಠ ಟೀಂ ಇಂಡಿಯಾಗಿಂತ 2ನೇ ದರ್ಜೆ ಭಾರತ ತಂಡವೇ ಸ್ಟ್ರಾಂಗ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. 2019-20ರಲ್ಲಿ 2ನೇ ದರ್ಜೆ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡು ಬಂದಿತ್ತು. ಈಗ ಇದೇ 2ನೇ ದರ್ಜೆ ತಂಡ ತವರಿನಲ್ಲಿ ಇಂಗ್ಲೆಂಡ್ ಸೊಕ್ಕಡಗಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐವರು ಸ್ಟಾರ್ಸ್ ಹುಟ್ಟಿಕೊಂಡ್ರು. ಇವರು ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ಸ್.
ಧರ್ಮಶಾಲಾ(ಮಾ.10): ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸೀನಿಯರ್ಸ್ ಅನುಪಸ್ಥಿತಿಯನ್ನು ಜೂನಿಯರ್ಸ್ ಸರಿಯಾಗಿ ಬಳಸಿಕೊಂಡರು. ಎಲ್ಲೂ ಹಿರಿಯ ಆಟಗಾರರ ಅನುಪಸ್ಥಿತಿ ಕಾಡಲೇ ಇಲ್ಲ. ಅಷ್ಟೇ ಅಲ್ಲ.. ನಾವು ಭವಿಷ್ಯದ ಸೂಪರ್ ಸ್ಟಾರ್ಸ್ ಅನ್ನೋದನ್ನ ಪ್ರೂವ್ ಸಹ ಮಾಡಿದ್ರು. ಆ ಪಂಚ ಪಾಂಡವರು ಇಲ್ಲಿದ್ದಾರೆ ನೋಡಿ.
ಯಂಗ್‌ಸ್ಟರ್ಸ್‌ಗಳಿಗೆ ವೇದಿಕೆಯಾದ ಇಂಗ್ಲೆಂಡ್ ಟೆಸ್ಟ್ ಸರಣಿ..!
undefined
ಬಲಿಷ್ಠ ಟೀಂ ಇಂಡಿಯಾಗಿಂತ 2ನೇ ದರ್ಜೆ ಭಾರತ ತಂಡವೇ ಸ್ಟ್ರಾಂಗ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. 2019-20ರಲ್ಲಿ 2ನೇ ದರ್ಜೆ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡು ಬಂದಿತ್ತು. ಈಗ ಇದೇ 2ನೇ ದರ್ಜೆ ತಂಡ ತವರಿನಲ್ಲಿ ಇಂಗ್ಲೆಂಡ್ ಸೊಕ್ಕಡಗಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐವರು ಸ್ಟಾರ್ಸ್ ಹುಟ್ಟಿಕೊಂಡ್ರು. ಇವರು ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ಸ್.
ಯಶಸ್ವಿ ಜೈಸ್ವಾಲ್‌ಗೆ ಯಶಸ್ವಿ ಸರಣಿ
ಓಪನರ್ ಯಶಸ್ವಿ ಜೈಸ್ವಾಲ್, ಈ ಸರಣಿಗೂ ಮುನ್ನ ಕೇವಲ 4 ಟೆಸ್ಟ್‌ಗಳನ್ನಾಡಿ, 314 ರನ್ ಗಳಿಸಿದ್ದರು. ಆದ್ರೆ ಈ ಸರಣಿಯ ಐದು ಟೆಸ್ಟ್‌ಗಳಿಂದ ಬರೋಬ್ಬರಿ 712 ರನ್ ಹೊಡೆದಿದ್ದಾರೆ. ಎರಡು ದ್ವಿಶತಕ, ಮೂರು ಹಾಫ್ ಸೆಂಚುರಿ ಹೊಡೆಯೋ ಮೂಲಕ, ಇಂಗ್ಲೆಂಡ್ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಅಲ್ಲಿಗೆ ಓಪನಿಂಗ್ ಸ್ಲಾಟ್ ಯಶಸ್ವಿಗೆ ಫಿಕ್ಸ್ ಆಯ್ತು.
ಟೆಸ್ಟ್ ಆಡುವವರಿಗೆ ಬಂಪರ್: ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ BCCI..! ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್
3ನೇ ಕ್ರಮಾಂಕದಲ್ಲಿ ಗಿಲ್, ಭರ್ಜರಿ ಆಟ
ಚೇತೇಶ್ವರ್ ಪೂಜಾರ ಡ್ರಾಪ್ ಆದ್ಮೇಲೆ ಆರಂಭಿಕ ಸ್ಥಾನದಿಂದ 3ನೇ ಕ್ರಮಾಂಕಕ್ಕೆ ಕೇಳಿ ಹಿಂಬಡ್ತಿ ಪಡೆದಿದ್ದ ಶುಭ್‌ಮನ್ ಗಿಲ್, ವಿಂಡೀಸ್ನಲ್ಲಿ ರನ್ ಗಳಿಸಲು ಪರದಾಡಿದ್ದರು. ಆದ್ರೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮಾತ್ರ ಗಿಲ್, ಕ್ರಿಕೆಟ್ ಅನ್ನ ಗಿಲ್ಲಿ ದಾಂಡಿನ ಸ್ಟೈಲ್ನಲ್ಲಿ ಆಡಿದ್ರು. 9 ಇನ್ನಿಂಗ್ಸ್‌ಗಳಿಂದ 2 ಶತಕ, 2 ಅರ್ಧಶತಕ ಸಹಿತ 452 ರನ್ ಕೊಳ್ಳೆ ಹೊಡೆದ್ರು. ಈ ಮೂಲಕ ಟೆಸ್ಟ್ನಲ್ಲಿ ನಂಬರ್ 3 ಸ್ಲಾಟ್ ಅನ್ನ ಕನ್ಫರ್ಮ್ ಮಾಡಿಕೊಂಡ್ರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಜುರೇಲ್ ಖಾಯಂ ಕೀಪರ್
ರಿಷಬ್ ಪಂತ್‌ಗೆ ಆಕ್ಸಿಡೆಂಟ್ ಆದ ಬಳಿಕ ಟೀಂ ಇಂಡಿಯಾ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಒಬ್ಬ ಒಳ್ಳೆ ವಿಕೆಟ್ ಕೀಪರ್ ಹುಡುಕುತ್ತಿತ್ತು. ಇಂಗ್ಲೆಂಡ್ ಸರಣಿಯಲ್ಲಿ ಆ ಕೀಪರ್ ಸಿಕ್ಕಿದ್ದಾನೆ. ಧೃವ್ ಜುರೇಲ್ ಮೂರು ಟೆಸ್ಟ್ನಿಂದ ಒಂದು ಹಾಫ್ ಸೆಂಚುರಿ ಸಹಿತ 190 ರನ್ ಹೊಡೆದಿದ್ದಾರೆ. ಐದು ಕ್ಯಾಚ್ ಹಿಡಿದು, ಎರಡು ಸ್ಟಂಪೌಟ್ ಸಹ ಮಾಡಿದ್ದಾರೆ. ಅಲ್ಲಿಗೆ ಟೆಸ್ಟ್ನಲ್ಲಿ ಜುರೇಲ್ ಖಾಯಂ ಕೀಪರ್.
ಅಪ್ಪಟ ಕನ್ನಡ ಮಾತಾಡಿದ RCB ಮನೆ ದೇವ್ರು ಎಬಿ ಡಿವಿಲಿಯರ್ಸ್..! ವಿಡಿಯೋ ವೈರಲ್
ಮಿಡಲ್ ಆರ್ಡರ್‌ಗೆ ಸರ್ಫರಾಜ್ ಫಿಕ್ಸ್
ಫಿಟ್ನೆಸ್ ಇಲ್ಲ ಅನ್ನೋ ಒಂದೇ ಕಾರಣಕ್ಕೆ ಸರ್ಫರಾಜ್ ಖಾನ್ ಅವರನ್ನ ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡಿರಲಿಲ್ಲ. ಆದ್ರೆ ಸೀನಿಯರ್ಸ್ ಅನುಪಸ್ಥಿತಿ, ಶ್ರೇಯಸ್ ಕಳಪೆ ಆಟದಿಂದ ಸರ್ಫರಾಜ್‌ಗೆ ಚಾನ್ಸ್ ಸಿಕ್ಕಿತು. ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಂಡ ಖಾನ್, ಐದು ಇನ್ನಿಂಗ್ಸ್ನಿಂದ ಮೂರು ಹಾಫ್ ಸೆಂಚುರಿ ಸಹಿತ 200 ರನ್ ಹೊಡೆದ್ರು. ಕ್ಲಾಸ್ ಆಟಕ್ಕೂ ಸೈ, ಮಾಸ್ ಆಟಕ್ಕೂ ಜೈ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಈ ಮೂಲಕ ಮಿಡಲ್ ಆರ್ಡರ್ನಲ್ಲಿ ತಮ್ಮ ಸ್ಥಾನ ಖಾಯಂ ಮಾಡಿಕೊಂಡಿದ್ದಾರೆ.
ಮಧ್ಯಮ ಕ್ರಮಾಂಕಕ್ಕೆ ಸಿಕ್ಕಿದ ಎಡಗೈ ಬ್ಯಾಟರ್
ಭಾರತ ಟೆಸ್ಟ್ ತಂಡ ಎಡಗೈ ಬ್ಯಾಟರ್ ಕೊರತೆ ಎದುರಿಸುತ್ತಿತ್ತು. ಆದ್ರೆ ಕನ್ನಡಿಗ ದೇವದತ್ ಪಡಿಕ್ಕಲ್ ಬಂದ್ಮೇಲೆ ಲೆಫ್ಟಿ ಬ್ಯಾಟರ್ ಕೊರತೆ ನೀಗಿದೆ. ಚೊಚ್ಚಲ ಟೆಸ್ಟ್ನ ಚೊಚ್ಚಲ ಇನ್ನಿಂಗ್ಸ್ನಲ್ಲೇ ಅರ್ಧಶತಕ ಬಾರಿಸಿದ ಪಡಿಕ್ಕಲ್, ಎಲ್ಲರ ಗಮನ ಸೆಳೆದಿದ್ದಾರೆ. ಇನ್ಮುಂದೆ ಟೆಸ್ಟ್ ಟೀಮ್ನಲ್ಲಿ ಈ ಲೆಫ್ಟಿ ಬ್ಯಾಟರ್ಗೆ ಯಾವಾಗಲೂ ಸ್ಥಾನ ಇರಲಿದೆ. ಯಾಕಂದ್ರೆ ಆ ಮಟ್ಟಕ್ಕೆ ಭರವಸೆ ಮೂಡಿಸಿದ್ದಾರೆ ಪಡಿಕ್ಕಲ್.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್