ಸಾನಿ​ಯಾಗೆ ವಿಚ್ಛೇ​ದನ ವದಂತಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ಶೋಯೆಬ್‌ ಮಲಿ​ಕ್‌!

Published : Apr 26, 2023, 01:19 PM IST
ಸಾನಿ​ಯಾಗೆ ವಿಚ್ಛೇ​ದನ ವದಂತಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ಶೋಯೆಬ್‌ ಮಲಿ​ಕ್‌!

ಸಾರಾಂಶ

* ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯ ಜೀವನದ ಬಗ್ಗೆ ಮಲಿಕ್ ಮಾತು * ಗಾಳಿ ಸುದ್ದಿಗೆ ತೆರೆ ಎಳೆದ ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್ * ವಿಚ್ಛೇ​ದನ ಸುದ್ದಿ ಸುಳ್ಳು ಎಂದು ಸ್ಪಷ್ಟ​ಪ​ಡಿ​ಸಿದ ಸಾನಿಯಾ ಪತಿ

ಕರಾ​ಚಿ(ಏ.26): ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ವೈಯುಕ್ತಿಕ ಬಿನ್ನಾಭಿಪ್ರಾಯಗಳಿಂದಾಗಿ ಈ ಇಬ್ಬರು ತಾರಾ ಜೋಡಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು ಎನ್ನುವಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಈ ಕುರಿತಂತೆ ಸಾನಿಯಾ ಮಿರ್ಜಾ ಅವರಾಗಲಿ ಅಥವಾ ಶೋಯೆಬ್ ಮಲಿಕ್ ಆಗಿಲಿ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಹಲವು ಸಮ​ಯ​ದಿಂದ ಕೇಳಿ​ಬ​ರು​ತ್ತಿ​ರುವ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಜೊತೆ​ಗಿನ ವಿಚ್ಛೇ​ದನ ವದಂತಿ ಬಗ್ಗೆ ಪಾಕಿ​ಸ್ತಾನ ಮಾಜಿ ನಾಯಕ ಶೋಹೆಬ್‌ ಮಲಿಕ್‌ ಕೊನೆಗೂ ಮೌನ ಮುರಿ​ದಿದ್ದು, ವಿಚ್ಛೇ​ದನ ಸುದ್ದಿ ಸುಳ್ಳು ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ. 

ಈ ಬಗ್ಗೆ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿ​ಯಿ​ಸಿ​ರುವ ಮಲಿಕ್‌, ಸಾನಿಯಾ ಹಾಗೂ ಮಗನ ಜೊತೆ ಈದ್‌ ಆಚ​ರಿ​ಸ​ಬೇ​ಕಿತ್ತು. ಆದರೆ ಅವರು ದೂರ​ದ​ಲ್ಲಿ​ದ್ದಾರೆ. ಒತ್ತ​ಡದ ವೇಳಾ​ಪ​ಟ್ಟಿ​ಯಿಂದಾಗಿ ಒಟ್ಟಿಗೆ ಇರಲು ಸಮಯ ಸಿಗು​ತ್ತಿಲ್ಲ. ಆದರೆ ನಾವಿ​ಬ್ಬರು ದೂರ​ವಾ​ಗುವ ಬಗ್ಗೆ ವರ​ದಿ​ಗಳು ಆಧಾ​ರ​ರ​ಹಿ​ತ’ ಎಂದಿ​ದ್ದಾರೆ. ಸಾನಿ​ಯಾ-ಮಲಿಕ್‌ 2010ರಲ್ಲಿ ವಿವಾ​ಹ​ವಾ​ಗಿ​ದ್ದರು. ಆದರೆ ಕಳೆದ 6 ತಿಂಗ​ಳಿಂದ ಇಬ್ಬರೂ ಒಟ್ಟಿಗೆ ಕಾಣಿ​ಸಿ​ಕೊಂಡಿಲ್ಲ. ಹೀಗಾಗಿ ವಿಚ್ಛೇ​ದನ ವದಂತಿ ಹಬ್ಬಿ​ತ್ತು.

ವಿಚ್ಛೇದನದ ಸುದ್ದಿಯ ನಡುವೆ, 'ಹೃದಯ ಭಾರವಾದಂತೆ ಅನಿಸಿದೆ...' ಎಂದು ಸಾನಿಯಾ ಪೋಸ್ಟ್‌!

ಕೆಲ ತಿಂಗಳ ಹಿಂದಷ್ಟೇ ಸಾನಿಯಾ ಮಿರ್ಜಾ ತಮ್ಮ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದರು. ಆದರೆ ಇದಕ್ಕೂ ಕೆಲವೇ ದಿನಗಳ ಹಿಂದಷ್ಟೇ ಸಾನಿಯಾ ತಮ್ಮ ಮಗನ ಜೊತೆಗಿರುವ ಫೋಟೋ ಹಂಚಿಕೊಂಡು, ‘ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಸಂತಸದ ಕ್ಷಣಗಳು’ ಎಂದು ಬರೆದಿದ್ದು, ವದಂತಿಗೆ ಕಾರಣವಾಗಿತ್ತು. ಬಳಿಕ ‘ಒಡೆಯ ಹೃದಯಗಳು ಎಲ್ಲಿಗೆ ಹೋಗುತ್ತವೆ. ದೇವರ ಬಳಿಗೆ’ ಎಂದು ಸ್ಟೋರಿಯೊಂದನ್ನು ಹಾಕಿದ್ದು ಮತ್ತಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು. 

ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?

ಇನ್ನು ಇದೆಲ್ಲದರ ನಡುವೆ ಭಾರತದ ಟೆನಿಸ್‌ ತಾರೆ, 6 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ತಾರಾ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ದಾಂಪತ್ಯ ಅಂತ್ಯಗೊಂಡಿದೆ. ಇಬ್ಬರ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಗದ ಪತ್ರಗಳ ಕಾರ‍್ಯ ಬಾಕಿ ಇದೆ ಎಂದು ದಂಪತಿಯ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿಯಾಗಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ. ಸಾನಿಯಾ ದುಬೈನಲ್ಲಿ ತಮ್ಮ ಮಗುವಿನೊಂದಿಗೆ ನೆಲೆಸಿದ್ದು, ಶೋಯೆಬ್‌ ಪಾಕಿಸ್ತಾನದಲ್ಲಿದ್ದಾರೆ ಎನ್ನಲಾಗಿದೆ. ಶೋಯೆಬ್‌ ಪಾಕಿಸ್ತಾನದ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ವಿಚ್ಛೇದನಕ್ಕೆ ಮುಖ್ಯ ಕಾರಣ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಈ ಎಲ್ಲಾ ಗಾಳಿ ಸುದ್ದಿಗೆ ಮಲಿಕ್ ಇದೀಗ ತೆರೆ ಎಳೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ