
ನವದೆಹಲಿ(ಜ.22): ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಕೆಲ ತಿಂಗಳುಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರು ಎಂದು ಸಾನಿಯಾರ ಕುಟುಂಬಸ್ಥರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
2010ರಲ್ಲಿ ವಿವಾಹವಾಗಿದ್ದ ಸಾನಿಯಾ-ಮಲಿಕ್ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಹಬ್ಬುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಈ ನಡುವೆ ಶನಿವಾರ ಮಲಿಕ್ ಬೇರೊಂದು ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಸಾನಿಯಾ ಕುಟುಂಬಸ್ಥರು ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ನೀಡಿದ್ದು, ‘ಇಬ್ಬರೂ ಕೆಲ ತಿಂಗಳ ಹಿಂದೆಯೇ ವಿಚ್ಛೇದಿತರಾಗಿದ್ದಾರೆ. ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಶುಭ ಹಾರೈಸಿದ್ದಾರೆ’ ಎಂದಿದೆ. ಅಲ್ಲದೆ, ಸಾನಿಯಾ ತಮ್ಮ ವೈಯಕ್ತಿಕ ಬದುಕನ್ನು ಯಾವತ್ತೂ ಸಾರ್ವಜನಿಕ ವಲಯದಿಂದ ದೂರವಿರಿಸಿದ್ದಾರೆ. ಸದ್ಯದ ಸೂಕ್ಷ್ಮ ಪರಿಸ್ಥಿತಿಯಲ್ಲೂ ಸಾನಿಯಾರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು’ ಎಂದು ವಿನಂತಿಸಿದ್ದಾರೆ.
ಸಾನಿಯಾ ಹಾಗೂ ಮಲಿಕ್ 2010ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಮಗನಿದ್ದಾರೆ. 2022ರಿಂದಲೂ ಸಾನಿಯಾ-ಮಲಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದಾಗಿ ಊಹಾಪೋಹ ಹರಿದಾಡುತ್ತಿದ್ದವು. ಆದರೆ ಈ ವರೆಗೆ ಇಬ್ಬರೂ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಈ ನಡುವೆ ಮಲಿಕ್ 2ನೇ ವಿವಾಹವಾಗಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾರ ತಂದೆ ಇಮ್ರಾನ್ ಪ್ರತಿಕ್ರಿಯೆ ನೀಡಿದ್ದು, ಮಲಿಕ್‌ಗೆ ಸಾನಿಯಾ ವಿಚ್ಛೇದನ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ನಟಿ ಸನಾಗೂ ಇದು 2ನೇ ಮದುವೆ. ಈ ಮೊದಲು 2020ರಲ್ಲಿ ಗಾಯಕ ಉಮೈರ್ ಜಸ್ವಾಲ್ ಜೊತೆ ಮದುವೆಯಾಗಿದ್ದ ಸನಾ, ಕಳೆದ ವರ್ಷ ದೂರವಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.