ಕೊರೊನಾ ಟೈಂನಲ್ಲಿ ಬ್ಯಾನ್‌ ಆಗಿದ್ದ ನಿಯಮ ಐಪಿಎಲ್‌ 2025ರಿಂದ ಮತ್ತೆ ಶುರುವಾಗಲಿದ್ಯಾ?

Published : Mar 20, 2025, 11:47 AM ISTUpdated : Mar 20, 2025, 05:55 PM IST
ಕೊರೊನಾ ಟೈಂನಲ್ಲಿ ಬ್ಯಾನ್‌ ಆಗಿದ್ದ ನಿಯಮ ಐಪಿಎಲ್‌ 2025ರಿಂದ ಮತ್ತೆ ಶುರುವಾಗಲಿದ್ಯಾ?

ಸಾರಾಂಶ

ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಚೆಂಡಿಗೆ ಲಾಲಾರಸ ಹಚ್ಚುವ ನಿಯಮವನ್ನು ಮರು ಜಾರಿಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರವನ್ನು ನಾಯಕರ ಅಭಿಪ್ರಾಯದ ನಂತರ ತೆಗೆದುಕೊಳ್ಳಲಾಗುವುದು. 65 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಕೋಲ್ಕತ್ತಾ ಮತ್ತು ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.

ಇದೇ ಶನಿವಾರ ಅಂದ್ರೆ ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ipl) ಹಬ್ಬ ಶುರುವಾಗ್ತಿದೆ. ಐಪಿಎಲ್ 18ನೇ ಋತುವಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಹಳೆ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆ ಇದೆ. ಚೆಂಡಿನ ಮೇಲೆ ಲಾಲಾರಸ (Saliva) ಹಚ್ಚುವುದರ ಮೇಲಿದ್ದ ನಿಷೇಧವನ್ನು ಬಿಸಿಸಿಐ ತೆಗೆದುಹಾಕುವ ಸಾಧ್ಯತೆ ಇದೆ. ಇದ್ರ ಬಗ್ಗೆ ಬಿಸಿಸಿಐನಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಇಂದು ಮುಂಬೈನಲ್ಲಿ ನಡೆಯಲಿರುವ ಎಲ್ಲಾ ಐಪಿಎಲ್ ನಾಯಕ (IPL captain)ರ ಸಭೆಯಲ್ಲಿ ಈ ವಿಷ್ಯವನ್ನಿಟ್ಟು ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ. 

ಕೋವಿಡ್ -19 (Covid-19) ಸಾಂಕ್ರಾಮಿಕ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೆಂಡಿಗೆ ಹೊಳಪು ಮಾಡಲು ಅನ್ವಯಿಸಲಾಗ್ತಿದ್ದ ಲಾಲಾರಸ  ಪದ್ಧತಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧಿಸಿತ್ತು. ಐಸಿಸಿ 2022 ರಲ್ಲಿ ಈ ನಿಷೇಧವನ್ನು ಶಾಶ್ವತಗೊಳಿಸಿದೆ.  ಐಪಿಎಲ್ ಮಾರ್ಗಸೂಚಿಗಳು ಐಸಿಸಿ ನಿಯಮಕ್ಕಿಂತ ಭಿನ್ನವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  ಐಪಿಎಲ್ ಕೂಡ ಲಾಲಾರಸ ಬಳಕೆಯನ್ನು ನಿಷೇಧಿಸಿತ್ತು. ಆದ್ರೀಗ ಮತ್ತೆ ಹಳೆ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಆಲೋಚನೆ ನಡೆಸಿದೆ. 

ಈ ಐಪಿಎಲ್‌ನಲ್ಲಿ ಹಲವು ಹೊಸ ದಾಖಲೆ ನಿರ್ಮಾಣವಾಗುತ್ತೆ: ರಾಬಿನ್ ಉತ್ತಪ್ಪ

ಕೊರೊನಾಗೂ ಮುನ್ನ ಚೆಂಡಿನ ಮೇಲೆ ಲಾಲಾರಸ ಹಚ್ಚುವುದು ಸಾಮಾನ್ಯ ಅಭ್ಯಾಸವಾಗಿತ್ತು ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಕೊರೊನಾ ಬೆದರಿಕೆ ಇಲ್ಲದಿರುವುದರಿಂದ, ಐಪಿಎಲ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧವನ್ನು ತೆಗೆದುಹಾಕುವುದರಿಂದ ಯಾವುದೇ ಹಾನಿಯಿಲ್ಲ ಎಂದವರು ತಿಳಿಸಿದ್ದಾರೆ.  ಚೆಂಡಿಗೆ ಲಾಲಾರಸ ಹಾಕುವುದರಿಂದ, ಕೆಂಪು ಚೆಂಡಿನ ಕ್ರಿಕೆಟ್ ಮೇಲೆ ಇದು ಭಾರಿ ಪರಿಣಾಮ ಬೀರುತ್ತದೆ.  ಬಿಳಿ ಚೆಂಡಿನಲ್ಲಿ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಮಾಡುತ್ತದೆ. ಹಾಗಾಗಿ ಐಪಿಎಲ್‌ನಲ್ಲಿ ಲಾಲಾರಸ ಅನ್ವಯಿಸಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ನಾಯಕರ ಅಭಿಪ್ರಾಯದ ನಂತ್ರ ಅಂತಿಮ ನಿರ್ಧಾರ ಹೊರಗೆ ಬರಲಿದೆ.

ಈ ಬಗ್ಗೆ ಮೊಹಮ್ಮದ್ ಶಮಿ ಹೇಳಿದ್ದೇನು? :  ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ಲಾಲಾರಸದ ಮಹತ್ವದ ಬಗ್ಗೆ ಹೇಳಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಚೆಂಡಿನ ಮೇಲೆ ಲಾಲಾರಸ ಹಚ್ಚುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಅದು ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಪರವಾಗಿರುತ್ತದೆ ಎಂದಿದ್ದರು. ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಕೂಡ ಇದನ್ನು ಬೆಂಬಲಿಸಿದ್ದರು.

ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000

65 ದಿನ ನಡೆಯಲಿದೆ ಐಪಿಎಲ್ ಪಂದ್ಯಾವಳಿ : ಐಪಿಎಲ್ ಟೂರ್ನಮೆಂಟ್ 65 ದಿನಗಳ ಕಾಲ ನಡೆಯಲಿದೆ. ಒಟ್ಟೂ 74 ಪಂದ್ಯಗಳು ನಡೆಯಲಿವೆ. 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕಪ್ ಎತ್ತಿತ್ತು. ಐಪಿಎಲ್ ಮೊದಲ ಪಂದ್ಯ ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಧ್ಯೆ ಈಡನ್ ಗಾರ್ಡನ್ ನಲ್ಲಿ ಮಾರ್ಚ 22 ರಂದು ನಡೆಯಲಿದೆ. ಮೇ. 25ರಂದು ಫೈನಲ್ ಪಂದ್ಯ ನಡೆಯಲಿದೆ. ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಕಪ್ ಗೆದ್ದಿಲ್ಲ. ಕೆಕೆಆರ್ ಮೂರು ಬಾರಿ ಐಪಿಎಲ್ ಟ್ರೋಪಿ ಗೆದ್ದಿದ್ದರೆ, ಚೆನೈ ಸೂಪರ್ ಕಿಂಗ್ಸ್ ಐದು ಬಾರಿ ಮತ್ತು ಮುಂಬೈ ಇಂಡಿಯನ್ಸ್ ಐದು ಬಾರಿ ಟ್ರೋಪಿ ಗೆದ್ದಿದೆ. ಈ ಬಾರಿ ಯಾರ ಪಾಲಾಗುತ್ತೆ ಟ್ರೋಪಿ ಎನ್ನುವ ಕುತೂಹಲವಿದ್ದು, ಐಪಿಎಲ್ ವೀಕ್ಷಣೆಗೆ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ