ಮದುವೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡ ಮಾಸ್ಟರ್ ಬ್ಲಾಸ್ಟರ್ ಪುತ್ರ ಅರ್ಜುನ್ ತೆಂಡೂಲ್ಕರ್

Published : Aug 21, 2026, 11:53 AM IST
Saaniya-Arjun tendulkar wedding pics

ಸಾರಾಂಶ

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಲವು ಗೊಂದಲಗಳಿಗೆ ತೆರೆ ಏಳೆದಿದ್ದಾರೆ. ಏನದು ಅರ್ಜುನ್ ನಿರ್ಧಾರ?

ಮುಂಬೈ (ಆ.21) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಮದುವೆ ಮಹೋತ್ಸವದಲ್ಲಿ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಮದುವೆ ಬಳಿಕ ಐಪಿಎಲ್ ಟೂರ್ನಿ ಆಡಿದ ಅರ್ಜುನ್ ತೆಂಡೂಲ್ಕರ್ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಗೊಂದಲ ಸೇರಿದಂತೆ ಹಲವು ಊಹಾಪೋಹಗಳಿಗೆ ತೆರೆ ಏಳೆದಿದ್ದಾರೆ.

ಅರ್ಜುನ್ ತೆಂಡೂಲ್ಕರ್ ತೆಗೆದುಕೊಂಡ ನಿರ್ಧಾರವೇನು?

ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಗೆ ಜಾರಿದ್ದ ಅರ್ಜುನ್ ತೆಂಡೂಲ್ಕರ್ ಪತ್ನಿ ಸಾನಿಯಾ ಚಂದೋಕ್ ಜೊತೆ ಪ್ರವಾಸದಲ್ಲಿದ್ದರು. ದೇಶಿ ಮಟ್ಟದಲ್ಲಿ ಗೋವಾ ರಾಜ್ಯದ ಪರ ಕ್ರಿಕೆಟ್ ಆಡುವ ಅರ್ಜುನ್ ತೆಂಡೂಲ್ಕರ್ ಕರಿಯರ್ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಇತ್ತೀಚೆಗೆ ಗೋವಾ ತಂಡದ ಓಮನ್ ಪ್ರವಾಸಕ್ಕೂ ಅರ್ಜುನ್ ತೆಂಡೂಲ್ಕರ್ ಗೈರಾಗಿದ್ದರು. ಇದಕ್ಕೂ ಮೊದಲು ಕೆಲ ಟೂರ್ನಿಗಳಿಗೂ ಗೈರಾಗಿದ್ದರು. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಈ ಕುರಿತು ಸ್ಪಷ್ಟನೆ ಹೊರಬಿದ್ದಿದೆ. ಅರ್ಜುನ್ ತೆಂಡೂಲ್ಕರ್ ಗೋವಾ ತಂಡದಲ್ಲೇ ಮುಂದುವರಿಯುತ್ತಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಮುಂಬರುವ ದೇಶಿ ಟೂರ್ನಿಯಲ್ಲಿ ಗೋವಾ ತಂಡದ ಮುಂದುವರಿಯುವುದಾಗಿ ಅರ್ಜುನ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಈಗಾಗಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಕ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಗೋವಾ ರಣಜಿ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಲು ಮುಂದಾಗಿದ್ದಾರೆ.

2022-23ರಲ್ಲಿ ಮುಂಬೈ ತೊರೆದು ಗೋವಾ ಸೇರಿದ್ದ ಅರ್ಜುನ್

ಮುಂಬೈ ತಂಡದ ಪರ ಆಡುತ್ತಿದ್ದ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶದ ಕೊರತೆ ಎದುರಾಗಿತ್ತು. ಕೆಲ ವರ್ಷಗಳ ಕಾಲ ಮುಂಬೈ ತಂಡದಲ್ಲಿ ಅವಕಾಶಕ್ಕಾಗಿ ಕಾದ ಅರ್ಜುನ್ ತೆಂಡೂಲ್ಕರ್ ಅನಿವಾರ್ಯವಾಗಿ ಮುಂಬೈ ತಂಡವನ್ನು ತೊರೆದಿದ್ದರು. ಮುಂಬೈ ತೊರೆದ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ಸೇರಿಕೊಂಡಿದ್ದರು. ಗೋವಾ ತಂಡ ಸೇರಿಕೊಂಡ ಬೆನ್ನಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದರು. ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅರ್ಜುನ್ ತೆಂಡೂಲ್ಕರ್ 50 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನದ ಮೂಲಕ ಆಯ್ಕೆ ಸಮಿತಿ ಗಮನಸೆಳೆಯಲು ಮುಂದಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಮಗಳು ಓದುತ್ತಿರೋರು ಈ ಪ್ರೀಮಿಯಂ ಶಾಲೆಯಲ್ಲಿ! ವಾರ್ಷಿಕ ಫೀಸ್ ಕೇಳಿದ್ರೆ ದಂಗಾಗ್ತೀರಾ!
Cricket: ಟೀಮ್ ಇಂಡಿಯಾದಲ್ಲಿ ಏಕಾಏಕಿ ದೊಡ್ಡ ಬದಲಾವಣೆ! ಸ್ಟಾರ್‌ ಪ್ಲೇಯರ್‌ ಔಟ್? 2ನೇ ಟೆಸ್ಟ್‌ಗೆ ಭಾರತದ ಸರ್ಪ್ರೈಸ್ 'ಪ್ಲೇಯಿಂಗ್ 11