ಕಾರ್ಯಕ್ರಮದ ಮೂಲಯಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳಿಯನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದರೆ. ಸಚಿನ್ ಕಂಡು ಪುಳಕಿತರಾದ ವಿನೋದ್ ಕಾಂಬ್ಳಿ ಹತ್ತಿರ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಸಚಿನ್ ಈ ಮನವಿ ತಿರಸ್ಕರಿಸಿದ್ರಾ?
ಮುಂಬೈ(ಡಿ.03) ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಅತ್ಯಾಪ್ತರಾಗಿ ಬಳಿಕ ವಿರುದ್ಧ ದಿಕ್ಕನಲ್ಲಿ ಸಾಗಿದ್ದರು. ಇದೀಗ ಒಂದಾದರೂ ಮಾತುಕತೆ, ಸಂಪರ್ಕ ಅಷ್ಟಕಷ್ಟೆ. ಕಾರ್ಯಕ್ರಮ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಭೇಟಿಯಾದರೆ ಮಾತುಕತೆ. ಇದೀಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಭೇಟಿಯಾಗಿದ್ದಾರೆ. ವೇದಿಕೆಯಲ್ಲಿ ಮೂಲೆಯಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳಿಯನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಮಾತನಾಡಿದ್ದಾರೆ. ಆದರೆ ಇದೇ ವೇಳೆ ವಿನೋದ್ ಕಾಂಬ್ಳಿ ಮಾಡಿದ ಮನವಿಯನ್ನು ಸಚಿನ್ ತಿರಸ್ಕರಿಸಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಸಚಿನ್ ತೆಂಡೂಲ್ಕರ್ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಮೆಮೋರಿಯಲ್ ಅನಾವರಣ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಯಾಗಿದ್ದರು. ವಿನೋದ್ ಕಾಂಬ್ಳಿಯನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇನ್ನು ರಾಜ್ ಠಾಕ್ರೆ ಸೇರಿದಂತೆ ಹಲವು ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿ ಸಚಿನ್ ತೆಂಡೂಲ್ಕರ್ ವೇದಿಕೆ ಮಧ್ಯಭಾಗದಲ್ಲಿ ಕುಳಿತಿದ್ದರು. ಆಹ್ವಾನಿತ ಗಣ್ಯರ ಪೈಕಿ ವಿನೋದ್ ಕಾಂಬ್ಳಿ ವೇದಿಕೆಯ ಬದಿಯಲ್ಲಿ ಕುಳಿತಿದ್ದರು.
undefined
ಅಂಜಲಿ ಮದುವೆಗೂ ಮುನ್ನ ಈ ನಟಿ ಜತೆ ಸಚಿನ್ ತೆಂಡುಲ್ಕರ್ ಲವ್ವಿಡವ್ವಿ? ಅಷ್ಟಕ್ಕೂ ಯಾರು ಈ ಶಿಲ್ಪಾ?
ಕಾರ್ಯಕ್ರಮ ಆರಂಭಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ವೇದಿಕೆಗೆ ಆಗಮಿಸಿದ್ದರೆ. ಬಳಿಕ ತಮ್ಮ ಮಧ್ಯದ ಆಸನದಲ್ಲಿ ಕುಳಿತುಕೊಂಡಿದ್ದಾರೆ. ರಾಜ್ ಠಾಕ್ರೆ ಸೇರಿದಂತೆ ಕೆಲ ಗಣ್ಯರ ನಡುವೆ ಸಚಿನ್ ಕುಳಿತಿದ್ದಾರೆ. ಇದೇ ವೇಳೆ ಬದಿಯಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳಿಯನ್ನು ನೋಡಿದ ಸಚಿನ್ ತೆಂಡೂಲ್ಕರ್ ಕುರ್ಚಿಯಿಂದ ಎದ್ದು ಕಾಂಬ್ಳಿ ಬಳಿ ತೆರಳಿದ್ದಾರೆ. ಈ ವೇಳೆ ವಿನೋದ್ ಕಾಂಬ್ಳಿ ಪಕ್ಕದಲ್ಲಿದವರ ಜೊತೆ ಮಾತಿನಲ್ಲಿ ತಲ್ಲೀನರಾಗಿದ್ದರು
ವಿನೋದ್ ಕಾಂಬ್ಳಿ ಬಳಿ ತೆರಳಿದ ಸಚಿನ್ ತೆಂಡೂಲ್ಕರ್, ಕೈಹಿಡಿದು ಮಾತನಾಡಿಸಿದ್ದಾರೆ. ಆದರೆ ವಿನೋದ್ ಕಾಂಬ್ಳಿ ಕೆಲ ಸೆಕೆಂಡ್‌ಗಳ ವರೆಗೆ ಸಚಿನ್ ತೆಂಡೂಲ್ಕರ್ ಗುರಿತಿಸಲು ಸಾಧ್ಯವಾಗಲಿಲ್ಲ. ಸಚಿನ್ ಎಂದು ತಿಳಿಯುತ್ತಿದ್ದಂತೆ ಕಾಂಬ್ಳಿ ಪುಳಕಿತಗೊಂಡಿದ್ದಾರೆ. ಸಚಿನ್ ಕೈಗಳನ್ನು ಗಟ್ಟಿಯಾಗಿ ಹಿಡಿದು ಮಾತು ಆರಂಭಿಸಿದ್ದಾರೆ. ಕಾಂಬ್ಳಿ ಅತೀವ ಸಂತಸಗೊಂಡಿದ್ದಾರೆ. ಹೀಗಾಗಿ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಸಚಿನ್ ಒತ್ತಾಯಿಸಿದ್ದಾರೆ.
ಸಚಿನ್ ಕಾರ್ಯಕ್ರಮ ಹಾಗೂ ತನ್ನ ಜವಾಬ್ದಾರಿ ಕುರಿತು ವಿವರಿಸಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ವಿನೋದ್ ಕಾಂಬ್ಳಿ ಮಕ್ಕಳಂತೆ ಹಠ ಮಾಡುತ್ತಿರುವುದನ್ನು ಕಂಡ ಕಾರ್ಯಕ್ರಮ ಆಯೋಜಕರು ಸಚಿನ್ ಹಾಗೂ ಕಾಂಬ್ಳಿ ಪಕ್ಕ ಆಗಮಿಸಿದ್ದಾರೆ. ಬಳಿಕ ಕಾಂಬ್ಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕಾಂಬ್ಳಿಗೆ ಕಾರ್ಯಕ್ರಮದ ಕುರಿತು ಹೇಳಿ ಸಚಿನ್ ತಮ್ಮ ಆಸನದತ್ತ ತೆರಳಿದ್ದಾರೆ. ಇತ್ತ ಕಾರ್ಯಕ್ರಮ ಆಯೋಜಕರು ವಿನೋದ್ ಕಾಂಬ್ಳಿಗೆ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಚಿನ್ ತೆರಳುತ್ತಿದ್ದಂತೆ ಕಾಂಬ್ಳಿ ನಿರಾಸೆಗೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ವಿನೋದ್ ಕಾಂಬ್ಳಿಯ ಮನವಿ ತರಿಸ್ಕರಿಸಿ ಮುಂದೆ ಸಾಗಿಲ್ಲ. ಆದರೆ ಕಾರ್ಯಕ್ರಮದಲ್ಲಿ ಸಚಿನ್ ಮುಖ್ಯ ಅತಿಥಿಯಾಗಿದ್ದರು. ಸಚಿನ್‌ಗಾಗಿ ಆಸನ ನಿಗದಿಪಡಿಸಲಾಗಿತ್ತು. ಸಚಿನ್ ಮಧ್ಯದ ಆಸನದಲ್ಲಿ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಕಾಂಬ್ಳಿ ಜೊತೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕಾಂಬ್ಳಿಗ ಇದು ಬೇಸರ ತರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕಾಂಬ್ಲಿ ಜೊತೆ ಸಚಿನ್ ಕುಳಿತಿಕೊಂಡಿಲ್ಲ ಅನ್ನೋ ಚರ್ಚೆಗಳು ಶುರುವಾಗಿದೆ. ಕಾಂಬ್ಳಿ ಮನವಿ ತಿರಸ್ಕರಿಸಿದ್ದಾರೆ ಅನ್ನೋದು ಚರ್ಚೆಯಾಗುತ್ತಿದೆ. ಆದರೆ ಅಸಲಿಗೆ ಸಚಿನ್ ಮನವಿ ತರಿಸ್ಕರಿಸಿ ಸಾಗಿಲ್ಲ ಅನ್ನೋದು ಸ್ಪಷ್ಟ.
ಇತ್ತ ವಿನೋದ್ ಕಾಂಬ್ಳಿ ಆರೋಗ್ಯ ಕೂಡ ಹದಗೆಟ್ಟಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ವಿನೋದ್ ಕಾಂಬ್ಳಿಗೆ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗುತ್ತಿಲ್ಲ. ಕುಳಿತರೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಯಾರದರೂ ನೆರವು ನೀಡಬೇಕಿದೆ.