ಭಾಷಣದ ನಡುವೆ ಕವಿ ಗುಲ್ಜಾರ್‌ಗೆ ನೀರು ಕೊಟ್ಟ ಸಚಿನ್ ತೆಂಡೂಲ್ಕರ್,ಹೃದಯಸ್ಪರ್ಶಿ ನಡೆಗೆ ಮೆಚ್ಚುಗೆ

Published : Oct 04, 2026, 05:02 PM IST
Sachin Tendulkar Gives Water to Gulzar

ಸಾರಾಂಶ

ವೇದಿಕೆಯಲ್ಲಿ ಖ್ಯಾತ ಗೀತೆರಚನೆಕಾರ ಗುಲ್ಜಾರ್ ಭಾಷಣದ ನಡುವೆ ತುಟಿಗಳು ಒಣಗಿದೆ. ತಕ್ಷಣವೇ ಸಚಿನ್ ತೆಂಡೂಲ್ಕರ್ ನೀರು ನೀಡಿದ್ದಾರೆ. ಸಚಿನ್ ಕೈಹಿಡಿದು ಗುಲ್ಜಾರ್ ಸಾಬ್ ಧನ್ಯವಾದ ಅರ್ಪಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಹೃದಯಸ್ಪರ್ಶಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈ (ಅ.03) ಬಾಲಿವುಡ್‌ನ ಖ್ಯಾತ ಗೀತೆರಚನೆಕಾರ, ಕವಿ ಗುಲ್ಜಾರ್ ಅವರಿಗೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕುಡಿಯಲು ನೀರು ನೀಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗುಲ್ಜಾರ್, ಸಚಿನ್ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಗುಲ್ಜಾರ್ ತುಟಿಗಳು ಒಣಗಿದೆ. ತಕ್ಷಣವೇ ಸಚಿನ್ ತೆಂಡೂಲ್ಕರ್ ಯಾವುದೇ ಸಿಬ್ಬಂದಿಗಳನ್ನು ಕಾಯದೇ ತಾವೇ ನೀರು ನೀಡಿದ ಘಟನೆ ನಡೆದಿದೆ.

ಭಾಷಣದ ನಡುವೆ ನೀರು ಕೇಳಿದ ಗುಲ್ಜಾರ್

92ರ ಹರೆಯದ ಗುಲ್ಜಾರ್ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಭಾಷಣ ಮಾಡುತ್ತಿದ್ದರು. ಭಾಷಣದ ನಡುವೆ ಗುಲ್ಜಾರ್ ತುಟಿಗಳು ಒಣಗಿದೆ. ಹೀಗಾಗಿ ಗುಲ್ಜಾರ್ ನೀರು ಕೇಳಿದ್ದಾರೆ. ವೇದಿಕೆಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಕುಳಿತಿದ್ದ ಸಚಿನ್ ತೆಂಡೂಲ್ಕರ್ ತಕ್ಷಣವೇ ಎದ್ದು, ನೀರು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಕೈಹಿಡಿದು ನೀರು ಕುಡಿದ ಗುಲ್ಜಾರ್, ಧನ್ಯವಾದ ತಿಳಿಸಿದ್ದಾರೆ. ತುಟಿ ತೇವಗೊಳಿಸಿಕೊಳ್ಳಿ ಎಂದು ಸಚಿನ್ ತೆಂಡೂಲ್ಕರ್, ಗುಲ್ಜಾರ್ ಅವರಿಗೆ ಸೂಚಿಸಿದ್ದಾರೆ. ಸಚಿನ್‌ಗೆ ಧನ್ಯವಾದ ಹೇಳಿದ ಗುಲ್ಜಾರ್ ಸಾಬ್ ಮತ್ತೆ ತಮ್ಮ ಭಾಷಣ ಮುಂದುವರಿಸಿದ್ದಾರೆ.

ಸಚಿನ್ ವಿನಮ್ರತೆಗೆ ಭಾರಿ ಮೆಚ್ಚುಗೆ

ನೀರು ಕೇಳಿದ ತಕ್ಷಣ ಕಾರ್ಯಕ್ರಮದ ಸಿಬ್ಬಂದಿಗಳು ಆಗಮಿಸುವ ಮೊದಲೇ ಸಚಿನ್ ತೆಂಡೂಲ್ಕರ್ ಸೀಟಿನಿಂದ ಎದ್ದು ಬಂದು ಗುಲ್ಜಾರ್ ಅವರಿಗೆ ನೀರು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ವಿನಮ್ರತೆ, ಗುಲ್ಜಾರ್ ಮೇಲಿಟ್ಟಿರುವ ಗೌರವಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಚಿನ್ ಅವರ ಸರಳತೆ, ಇತರರಿಗೆ ನೀಡುವ ಗೌರವ ಕುರಿತು ಭಾರಿ ಚರ್ಚೆಯಾಗುತ್ತಿದೆ.

ಅಮಿತಾಬ್ ಬಚ್ಚನ್ ಹಾಗೂ ಗುಲ್ಜಾರ್ ನಡುವಿನ ಆತ್ಮೀಯತೆ ಹಲವು ದಶಕಗಳಿಂದ ಇದೆ. 1970ರಿಂದ ಅಮಿತಾಬ್ ಬಚ್ಚನ್ ಸಿನಿಮಾಗಳಿಗೆ ಹಾಡು, ಸಾಹಿತ್ಯ, ಸಂಗೀತ ನೀಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೌನ್ ಬನೆಗಾ ಕರೋಡ್ ಪತಿ ಸೆಟ್‌ನಲ್ಲಿ ಗಾಯಗೊಂಡಿದ್ದರು. ಮೊಣಕಾಲಿಗೆ ಗಾಯವಾಗಿತ್ತು. ಅಮಿತಾಬ್ ಬಚ್ಚನ್ ಜೊತೆ ಜಯಾ ಬಚ್ಚನ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಈ ಕಾರ್ಯಕ್ರಮದ ಹಲವು ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ. ದಿಗ್ಗಜರ ಸಮಾಗಮ. ಮೂವರು ದಿಗ್ಗಜರಾಗಿದ್ದರೂ ಅವರ ಸರಳತೆಗೆ ಎಲ್ಲರಿಗೂ ಮಾದರಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಯ್ ಹೋಪ್ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದು ಹೇಗೆ? ಅವರ ತಂತ್ರದ ಹಿಂದೆ ಭಾರತದ ದಿಗ್ಗಜನ ಕೈವಾಡ
Cricket; ಗಿಲ್‌ ಕಳಪೆ ನಾಯಕತ್ವದಿಂದಲ್ಲ, ಧೋನಿಯಿಂದಾಗಿ ಟೀಮ್ ಇಂಡಿಯಾ ಸೋತಿದ್ದು! ವಿಂಡೀಸ್ ಕ್ಯಾಪ್ಟನ್ ಹೇಳಿಕೆ ವೈರಲ್‌!