ಶಾಯ್ ಹೋಪ್ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದು ಹೇಗೆ? ಅವರ ತಂತ್ರದ ಹಿಂದೆ ಭಾರತದ ದಿಗ್ಗಜನ ಕೈವಾಡ

Published : Oct 04, 2026, 04:05 PM IST
Hope Reveals MS Dhonis Advice After Win

ಸಾರಾಂಶ

ವೆಸ್ಟ್ ವಿಂಡೀಸ್ ಗೆಲುವಿನ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ನೀಡಿದ್ದ ಸಲಹೆಯೊಂದು ವರ್ಕ್ ಆಗಿದೆ. ಈ ಬಗ್ಗೆ ಖುದ್ದು ವಿಂಡೀಸ್ ಆಟಗಾರ ಶಾಯ್ ಹೋಪ್ ರಿವೀಲ್ ಮಾಡಿದ್ದಾರೆ. ಅವರು ಹೇಳಿದ್ದೇನು? ಸ್ಟೋರಿ ಓದಿ..

ನಿನ್ನೆ ಭಾರತ ಹಾಗೂ ವೆಸ್ಟ್ ವಿಂಡೀಸ್ ತಂಡಗಳು ಏಕದಿನ ಸರಣಿಯ ಮೂರನೇ ಪಂದ್ಯವನ್ನು ಚಂಡಿಗಡದಲ್ಲಿ ಆಡಿದವು. ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 351 ರನ್‌ ಗಳಿಸಿತ್ತು. ಈ 352 ರನ್‌ಗಳ ಗುರಿ ಬೆನ್ನು ಹತ್ತಿದ್ದ ವೆಸ್ಟ್‌ ವಿಂಡೀಸ್, 48.2 ಓವರ್‍ನಲ್ಲಿ ಐದು ವಿಕೆಟ್‌ ಕಳೆದುಕೊಂಡು ನಿಗಧಿತ ಗುರಿ ಮುಟ್ಟಿತು. ಇನ್ನು ವೆಸ್ಟ್ ವಿಂಡೀಸ್ ಗೆಲುವಿಗೆ ಕಾರಣರಾಗಿದ್ದು, ನಾಯಕ ಶಾಯ್ ಹೋಪ್!

ಗುರಿ ಬೆನ್ನು ಹತ್ತಿದ್ದ ಶಾಯ್ ಹೋಪ್ ಅದ್ಭುತ್ ಬ್ಯಾಟಿಂಗ್ ನಡೆಸಿದರು. ಬಂಡೆಯಾಗಿ ನಿಂತು ತಂಡವನ್ನು ಗೆಲ್ಲಿಸಿಕೊಟ್ಟರು. ತಮ್ಮ ಇನ್ನಿಂಗ್ಸ್‌ನಲ್ಲಿ 143 ಬಾಲ್‌ಗಳನ್ನ ಎದುರಿಸಿ 162 ರನ್‌ಗಳನ್ನ ಚಚ್ಚಿದರು. 113.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು.. ಮೂರು ಸಿಕ್ಸರ್, 17 ಬೌಂಡರಿ ಬಾರಿಸಿದರು. ಇನ್ನು ಪಂದ್ಯವನ್ನು ಗೆಲ್ಲಿಸಿದ ಬಳಿಕ ಗೆಲುವಿನ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.

ಏನಂದ್ರು ಶಾಯ್ ಹೋಪ್?

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೋಪ್.. ಪಂದ್ಯ ಆರಂಭಕ್ಕೂ ಮುನ್ನ ನಾನು ಭಾರತದ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಆಗಿದ್ದೆ. ನಾವಿಬ್ಬರು ತುಂಬಾ ಮುಕ್ತವಾಗಿ ಮಾತನಾಡಿದೆ. ಈ ವೇಳೆ ಅವರು ನೀಡಿದ ಸಲಹೆ ನನಗೆ ತುಂಬಾ ಸಹಾಯ ಆಯಿತು. ತಂಡದ ಗೆಲುವಿಗೆ ಮತ್ತು ನನ್ನ ಇನ್ನಿಂಗ್ಸ್‌ಗೆ ಸ್ಫೂರ್ತಿ ನೀಡಿತು ಎಂದಿದ್ದಾರೆ.

ಧೋನಿ ಸಲಹೆ ಏನಾಗಿತ್ತು?

ಶಾಯ್ ಹೋಪ್ ನೀಡಿರುವ ಮಾಹಿತಿ ಪ್ರಕಾರ.. ನಾನು ಧೋನಿ ನೀಡಿದ್ದ ಸಲಹೆಯನ್ನು ಖುದ್ದು ಇನ್ನಿಂಗ್ಸ್ ಆರಂಭಿಸುವ ಮೊದಲು ನೆನಪಿಸಿಕೊಂಡೆ. ಅವರು ನೀಡಿದ ಟ್ರಿಕ್ ಅನ್ನೇ ಬಳಸಬೇಕು ಎಂದುಕೊಂಡಿದೆ. ನಿಮಗೆ ಮೈದಾನದಲ್ಲಿ ಯೋಚಿಸಲು ಹೆಚ್ಚು ಸಮಯ ಸಿಗಲಿದೆ. ಅದನ್ನು ಸರಿಯಾಗಿ ಆಯಾ ಸಮಯಕ್ಕೆ ಬಳಸಿಕೊಂಡು ಆಟವಾಡಿ ಎಂದಿದ್ದರು. ಈ ಚಿಂತನೆ ಹೋಪ್ ಅವರ ಬ್ಯಾಟಿಂಗ್ ತಂತ್ರದ ಭಾಗವಾಗಿತ್ತು. ಧೋನಿ ಸಲಹೆ ನಮಗೆ ಆಂಭದಲ್ಲಿ ಎದುರಾಗುವ ಅಪಾಯವನ್ನು ತಪ್ಪಿಸಿಕೊಳ್ಳುವಂತೆ ಮಾಡಿತು. ನಮ್ಮ ಮುಂದೆ ದೊಡ್ಡ ಟಾರ್ಗೆಟ್ ಇತ್ತು. ಆದರೆ ನಾವು ಅದನ್ನು ಸಣ್ಣ ಸಣ್ಣ ವಿಭಾಗವಾಗಿ ಮುರಿಯುವ ಮೂಲಕ ಗುರಿಯನ್ನ ಹತ್ತಿರಕ್ಕೆ ಕೊಂಡೊಯ್ದೇವು.

ನಾವು ತಂಡದ ಫಲಿತಾಂಶದ ಮೇಲೆ ಹೆಚ್ಚು ಗಮನ ಹರಿಸಲು ಪ್ರಯತ್ನಿಸಲಿಲ್ಲ. ಮಾಡಬೇಕಾಗಿದ್ದ ಕೆಲಸದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಕೊನೆಯ ಕ್ಷಣಗಳಲ್ಲಿ ಬೌಂಡರಿಗಳನ್ನ ಹೊಡೆಯಲು ಪ್ರಯತ್ನಿಸಿದೆ. ಜೊತೆಗೆ ಭಾರತ ತಂಡದ ನಿಧಾನಗತಿ ಓವರ್‍‌ಗಳ ಮೇಲೂ ಗಮನಹರಿಸಿದ್ದೆ. ಇದರಿಂದ ಅವರು ಅಂತಿಮ ಹಂತದಲ್ಲಿ ಕೆಲವು ಫೀಲ್ಡರ್‍‌ಗಳು ಮುಂದೆ ಬರುತ್ತಾರೆ ಅನ್ನೋ ವಿಚಾರವನ್ನೂ ತಿಳಿದುಕೊಂಡಿದ್ದೆ. ಒಬ್ಬ ಬ್ಯಾಟ್ಸ್‌ಮನ್‌ ಆಗಿ ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡುತ್ತ ಹೋದೆ. ಗೆಲುವಿನ ಗುರಿ ಹತ್ತಿರವಾಯಿತು ಎಂದು ಶಾಯ್ ಹೋಪ್ ತಿಳಿಸಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನ ಗೆದ್ದು ಸರಣಿ ಗೆದ್ದುಕೊಂಡಿದೆ. ವೆಸ್ಟ್ ವಿಂಡೀಸ್ ಅಂತಿಮ ಪಂದ್ಯವನ್ನು ಗೆದ್ದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; ಗಿಲ್‌ ಕಳಪೆ ನಾಯಕತ್ವದಿಂದಲ್ಲ, ಧೋನಿಯಿಂದಾಗಿ ಟೀಮ್ ಇಂಡಿಯಾ ಸೋತಿದ್ದು! ವಿಂಡೀಸ್ ಕ್ಯಾಪ್ಟನ್ ಹೇಳಿಕೆ ವೈರಲ್‌!
Cricket; ಕೊನೆಯ ಏಕದಿನದಲ್ಲಿ ಗಳಿಸಿದ್ದು 1 ರನ್ ಮಾತ್ರ, ಆದ್ರೂ ವರ್ಲ್ಡ್ ರೆಕಾರ್ಡ್ ಬರೆದ ಗಿಲ್: ಕೊಹ್ಲಿಗೂ ಸಾಧ್ಯವಾಗದ್ದನ್ನು ಸಾಧಿಸಿದ ಶುಭಮನ್!