
ಮುಂಬೈ (ನ.09) ದೀಪಾವಳಿ ಹಬ್ಬದ ಸಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಕೆಟಿಗರು, ಸೆಲೆಬ್ರೆಟಿಗಳು ದೀಪಾವಳಿ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ. ಇದರ ನಡುವೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ದೀಪಾವಳಿ ಹಬ್ಬದ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ತಮ್ಮ ಮುದ್ದಿನ ಬೌನ್ಸರ್ ಜೊತೆ ದೀಪಾವಳಿ ಆಚರಿಸಿದ್ದಾರೆ. ಬೆಳಗ್ಗೆ ಸಚಿನ್ ಮುದ್ದಿನ ನಾಯಿ ಬೌನ್ಸರ್ ಜೊತೆ ಕಾರಿನಲ್ಲಿ ಹೊರಟಿದ್ದಾರೆ. ಡ್ರೈವ್ ಎಂಜಾಯ್ ಮಾಡುತ್ತಾ ಸಾಗಿದ ಬೌನ್ಸರ್ ಕಾರಿನಿಂದ ಇಳಿಯಲು ನಿರಾಕರಿಸಿದೆ. ಸಚಿನ್ ತೆಂಡೂಲ್ಕರ್ ಎಷ್ಟೇ ಹೇಳಿದರೂ ಬೌನ್ಸರ್ ಮಾತ್ರ ಕಾರಿನಲ್ಲೇ ಕುಳಿತು ಕ್ರಿಕೆಟ್ ದೇವರಿಗೆ ಸವಾಲೆಸೆದಿದೆ.
ದೀಪಾವಳಿ ಹಬ್ಬದ ಕಾರಣ ಮುಂಬೈ ಬೀದಿಗಳಲ್ಲಿ ಹೆಚ್ಚಿನ ವಾಹನ, ಟ್ರಾಫಿಕ್ ಇಲ್ಲ. ಹೀಗಾಗಿ ಸಚಿನ್ ತೆಂಡೂಲ್ಕರ್ ಬೆಳಗ್ಗೆ ನಾಯಿ ಬೌನ್ಸರ್ ಜೊತೆ ಕಾರಿನಲ್ಲಿ ಒಂದು ಸುತ್ತು ಹೊಡೆದು ಬರಲು ನಿರ್ಧರಿಸಿದ್ದಾರೆ. ಕಾರಿನಲ್ಲಿ ಮುದ್ದಿನ ನಾಯಿ 'ಬೌನ್ಸರ್' ಜೊತೆ ಬೆಳಗಿನ ದೀಪಾವಳಿ ರೈಡ್ ಕುರಿತ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ. ಈ ಫನ್ನಿ ವಿಡಿಯೋ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ. ಅಭಿಮಾನಿಗಳು ಸಚಿನ್ ಬೌನ್ಸರ್ ಕುರಿತು ಕಮೆಂಟ್ಸ್ ಮಾಡಿದ್ದಾರೆ.
ಸಚಿನ್ ಹಂಚಿಕೊಂಡಿರುವ ವೀಡಿಯೋದಲ್ಲಿ, ಅವರು ತಮ್ಮ ಕಾರನ್ನು ಡ್ರೈವ್ ಮಾಡುತ್ತಿದ್ದರೆ, ಹಿಂದಿನ ಸೀಟಿನಲ್ಲಿ ಕುಳಿತು 'ಬೌನ್ಸರ್' ಡ್ರೈವಿಂಗ್ ಅನ್ನು ಭಾರಿ ಖುಷಿಯಿಂದ ಆನಂದಿಸುತ್ತಿರುವ ದಶ್ಯವಿದೆ. ಡ್ರೈವ್ ಮುಗಿದ ನಂತರ ಸಚಿನ್ ಕಾರಿನಿಂದ ಕೆಳಗಿಳಿದು ಕ್ಯಾಮೆರಾವನ್ನು ನಾಯಿಯತ್ತ ತಿರುಗಿಸುತ್ತಾ, "ನಮ್ಮ ಡ್ರೈವ್ ಪೂರ್ಣಗೊಂಡಿದೆ, ಆದರೆ ಇಲ್ಲೊಬ್ಬರು ಕಾರಿನಿಂದ ಇಳಿಯಲು ಒಪ್ಪುತ್ತಿಲ್ಲ ಎಂದಿದ್ದಾರೆ. ಸಚಿನ್ ಅದೆಷ್ಟೇ ಪರಿಪರಿಯಾಗಿ ಕೇಳಿಕೊಂಡರೂ ಬೌನ್ಸರ್ ಮಾತ್ರ ಕಾರಿನಿಂದ ಇಳಿಯಲು ಕೇಳಿಲ್ಲ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ಮಾರಕ ಬೌನ್ಸರ್ ಎಸೆತಗಳನ್ನು ಎದುರಿಸಿದ್ದಾರೆ. ಬೌನ್ಸರ್ ಸವಾಲನ್ನು ಸಚಿನ್ ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಸಚಿನ್ ಮುದ್ದಿನ ಬೌನ್ಸರ್ ಸವಾಲು ಎದಿರಿಸಲು ಸಚಿನ್ ಪರದಾಡಿದ್ದಾರೆ. ಸಚಿನ್ ಮಾತು ಕೇಳುತ್ತಿಲ್ಲ, ಕಾರಿನಿಂದ ಇಳಿಯದೆ ಸಚಿನ್ ನಾಯಿ ಕ್ರಿಕೆಟ್ ದೇವರಿಗೆ ತಲೆನೋವು ತಂದಿಟ್ಟಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್ ವಿಡಿಯೋ ಹಂಚಿಕೊಂಡು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಕೋರಿದ್ದಾರೆ.
Diwali drive with Bouncer who doesn't want to leave the car 🐶🚗
Wishing you and your families a very happy Diwali 🪔 https://t.co/bkuDkaM7aR
— Sachin Tendulkar (@sachin_rt) November 8, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.