ಬ್ಯಾನ್‌ ಆಗಿದ್ದ ಶ್ರೀಶಾಂತ್ ಕೇರಳದ ಕ್ರಿಕೆಟಿಗರ ರಕ್ಷಣೆ ಮಾಡಬೇಕಾಗಿಲ್ಲ: ಕಿಡಿಕಾರಿದ ಕೇರಳ ಕ್ರಿಕೆಟ್ ಸಂಸ್ಥೆ

Published : Feb 08, 2025, 10:41 AM IST
ಬ್ಯಾನ್‌ ಆಗಿದ್ದ ಶ್ರೀಶಾಂತ್ ಕೇರಳದ ಕ್ರಿಕೆಟಿಗರ ರಕ್ಷಣೆ ಮಾಡಬೇಕಾಗಿಲ್ಲ: ಕಿಡಿಕಾರಿದ ಕೇರಳ ಕ್ರಿಕೆಟ್ ಸಂಸ್ಥೆ

ಸಾರಾಂಶ

ಸಂಜು ಸ್ಯಾಮ್ಸನ್‌ ಬಗ್ಗೆ ಟೀಕಿಸಿದ ಶ್ರೀಶಾಂತ್‌ಗೆ ಕೆಸಿಎ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಫಿಕ್ಸಿಂಗ್‌ ಪ್ರಕರಣದಲ್ಲಿ ಇನ್ನೂ ಖುಲಾಸೆಗೊಳ್ಳದ ಶ್ರೀಶಾಂತ್‌ ಕೇರಳದ ಆಟಗಾರರ ಬಗ್ಗೆ ಮಾತನಾಡಬಾರದೆಂದು ಕೆಸಿಎ ತಿಳಿಸಿದೆ. ಶ್ರೀಶಾಂತ್‌ಗೆ ಕೇರಳ ಕ್ರಿಕೆಟ್‌ ಬಗ್ಗೆ ಅರಿವಿಲ್ಲ ಎಂದೂ ಕೆಸಿಎ ಕಿಡಿಕಾರಿದೆ. ಸಂಸ್ಥೆಯ ಹೆಸರಿಗೆ ಮಸಿ ಬಳಿಯುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ತಿರುವನಂತಪುರಂ: ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಬಗ್ಗೆ ಮಾತನಾಡಿದ್ದ ಮಾಜಿ ಆಟಗಾರ ಎಸ್‌.ಶ್ರೀಶಾಂತ್‌ಗೆ ಕೇರಳ ಕ್ರಿಕೆಟ್‌ ಸಂಸ್ಥೆ(ಕೆಸಿಎ) ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಅಲ್ಲದೆ, ಫಿಕ್ಸಿಂಗ್‌ ಮಾಡಿ ಬ್ಯಾನ್‌ ಆಗಿದ್ದ ಶ್ರೀಶಾಂತ್‌, ಕೇರಳದ ಆಟಗಾರರನ್ನು ರಕ್ಷಿಸಬೇಕಾಗಿಲ್ಲ ಎಂದು ಕಿಡಿಕಾರಿದೆ. 

ಸಂಜು ವಿಜಯ್‌ ಹಜಾರೆ ಆಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ಶ್ರೀಶಾಂತ್‌, ಕೇರಳ ಕ್ರಿಕೆಟ್‌ ಸಂಸ್ಥೆ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಸಿಎ, ‘ಶ್ರೀಶಾಂತ್‌ಗೆ ಕೇರಳ ಕ್ರಿಕೆಟ್‌ ಬಗ್ಗೆ ಅರಿವಿಲ್ಲ. ಇನ್ನೂ ಫಿಕ್ಸಿಂಗ್‌ ಪ್ರಕರಣದಲ್ಲಿ ಖುಲಾಸೆಗೊಳ್ಳದ ಶ್ರೀಶಾಂತ್‌ ಕೇರಳದ ಕ್ರಿಕೆಟಿಗರ ರಕ್ಷಣೆಗೆ ಬರುವುದು ಬೇಡ’ ಎಂದಿದೆ. ಅಲ್ಲದೆ ಸಂಸ್ಥೆಯ ಹೆಸರಿಗೆ ಮಸಿ ಬಳಿಯುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.

ವಿರಾಟ್ ಕೊಹ್ಲಿ 2ನೇ ಏಕದಿನ ಪಂದ್ಯ ಆಡ್ತಾರಾ? ಮಹತ್ವದ ಅಪ್‌ಡೇಟ್ ಕೊಟ್ಟ ಗೌತಮ್ ಗಂಭೀರ್

ಕೇರಳ ಕ್ರಿಕೆಟ್ ಸಂಸ್ಥೆಯು ಯಾವಾಗಲೂ ತಮ್ಮ ಆಟಗಾರರ ಪರವಾಗಿ ನಿಂತಿದೆ.  ಸ್ವತಃ ಎಸ್ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗಲೂ ಕೇರಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಶ್ರೀಶಾಂತ್‌ ಅವರಿಗೆ ಬೆಂಬಲ ನೀಡಿದ್ದರು. ಇನ್ನು ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದು ಖಚಿತವಾದ ಬಳಿಕವಷ್ಟೇ ಅವರ ಮೇಲೆ ಬಸಿಸಿಐ ಜೀವಾವಧಿ ನಿಷೇಧ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಬಿಸಿಸಿಐ ಓಂಬಡ್ಸ್‌ಮನ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಸತ್ಯ ಏನು ಎಂದರೆ, ಕೋರ್ಟ್ ಶ್ರೀಶಾಂತ್ ಮೇಲಿನ ಅಪರಾಧ ವಿಚಾರಣೆ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಆದರೆ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಖುಲಾಸೆಯಾಗಿಲ್ಲ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿದೆ.

ಹೀಗಾಗಿ ಶ್ರೀಶಾಂತ್ ಅವರಂತವರು ಕೇರಳ ಕ್ರಿಕೆಟಿಗರ ರಕ್ಷಣೆಗೆ ಬರುವ ಅಗತ್ಯವಿಲ್ಲ ಎಂದು ಕೇರಳ ಕ್ರಿಕೆಟ್ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿರಾಟ್ ಕೊಹ್ಲಿ 2ನೇ ಏಕದಿನ ಪಂದ್ಯ ಆಡ್ತಾರಾ? ಮಹತ್ವದ ಅಪ್‌ಡೇಟ್ ಕೊಟ್ಟ ಗೌತಮ್ ಗಂಭೀರ್

ಜಂಟಿ ಕಾರ್‍ಯದರ್ಶಿ ಆಯ್ಕೆಗೆ ಮಾ.1ಕ್ಕೆ ಬಿಸಿಸಿಐ ಸಭೆ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾ.1ರಂದು ವಿಶೇಷ ಸಾಮಾನ್ಯ ಸಭೆ ನಡೆಸಲಿದೆ. ಈ ಸಭೆಯಲ್ಲಿ ಮಂಡಳಿಗೆ ನೂತನ ಜಂಟಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಿದೆ. ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಜಯ್‌ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗಿ ಅಸ್ಸಾಂನ ದೇವ್‌ಜಿತ್‌ ಸೈಕಿಯಾ ಜಂಟಿ ಕಾರ್ಯದರ್ಶಿಯಾಗಿದ್ದರು. ಶಾ ಐಸಿಸಿ ಹುದ್ದೆಗೇರಿದ ಬಳಿಕ ಸೈಕಿಯಾ ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ತೆರವಾದ ಸ್ಥಾನಕ್ಕೆ ವಿಶೇಷ ಸಭೆಯಲ್ಲಿ ನೂತನ ಪದಾಧಿಕಾರಿಯನ್ನು ಆಯ್ಕೆ ಮಾಡಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!