ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಬಾಯ್ಸ್ ಮತ್ತು ಶಾರೂಖ್ ಬಾಯ್ಸ್ ನಡುವೆ ಬಿಗ್ ವಾರ್ ನಡೆಯಲಿದೆ. ಐಪಿಎಲ್ನ 10ನೇ ಪಂದ್ಯದಲ್ಲಿ ಇಂದು ಸಂಜೆ 7.30ರಿಂದ ಆರ್ಸಿಬಿ-ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಬೆಂಗಳೂರಿನಲ್ಲಿ ಪಂದ್ಯ ನಡೆಯೋದ್ರಿಂದ ರನ್ ಹೊಳೆ ಗ್ಯಾರಂಟಿ. ರೆಡ್ ಆರ್ಮಿ ಪಡೆ, ಎರಡು ಮ್ಯಾಚ್ ಆಡಿದ್ದು, ಒಂದು ಗೆದ್ದು, ಒಂದನ್ನ ಸೋತಿದೆ.
ಬೆಂಗಳೂರು(ಮಾ.29): ಐಪಿಎಲ್‌ನಲ್ಲಿ ಇಂದು ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗ್ತಿವೆ. ಬೆಂಗಳೂರಿನಲ್ಲಿ ನಡೆಯೋ ಮ್ಯಾಚ್ ಎರಡು ತಂಡಕ್ಕೂ ಮಹತ್ವದ್ದು. ಇಂದು ಸಹ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಆರ್‌ಸಿಬಿಗೆ ಬ್ಯಾಟರ್ಗಳಿಗಿಂತ ಬೌಲರ್ಸ್ ಚಿಂತೆಯಾಗಿದೆ. ಇಂದಿನ ಪಂದ್ಯದ ಡಿಟೇಲ್ಸ್ ಇಲ್ಲಿದೆ ನೋಡಿ.
ಬೆಂಗಳೂರಿನಲ್ಲಿ ಇಂದು ಐಪಿಎಲ್ ಹಬ್ಬ
undefined
ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಬಾಯ್ಸ್ ಮತ್ತು ಶಾರೂಖ್ ಬಾಯ್ಸ್ ನಡುವೆ ಬಿಗ್ ವಾರ್ ನಡೆಯಲಿದೆ. ಐಪಿಎಲ್ನ 10ನೇ ಪಂದ್ಯದಲ್ಲಿ ಇಂದು ಸಂಜೆ 7.30ರಿಂದ ಆರ್ಸಿಬಿ-ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಬೆಂಗಳೂರಿನಲ್ಲಿ ಪಂದ್ಯ ನಡೆಯೋದ್ರಿಂದ ರನ್ ಹೊಳೆ ಗ್ಯಾರಂಟಿ. ರೆಡ್ ಆರ್ಮಿ ಪಡೆ, ಎರಡು ಮ್ಯಾಚ್ ಆಡಿದ್ದು, ಒಂದು ಗೆದ್ದು, ಒಂದನ್ನ ಸೋತಿದೆ. ಕೆಕೆಆರ್ ಆಡಿರೋ ಏಕೈಕ ಪಂದ್ಯವನ್ನೂ ಗೆದ್ದಿದೆ. ಹಾಗಾಗಿ ಇಂದು ಯಾರೂ ಸುಲಭವಾಗಿ ಪಂದ್ಯವನ್ನ ಸೋಲಲ್ಲ. ನಿನ್ನೆ ಸ್ಟೇಡಿಯಂನಲ್ಲಿ ಎರಡು ಟೀಮ್ಸ್ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ರು. ಅದರಲ್ಲೂ ರಸೆಲ್ ಮತ್ತು ಕೊಹ್ಲಿ ಸಿಕ್ಸರ್ ಪ್ರಾಕ್ಟೀಸ್ ಮಾಡಿದ್ರು.
ಬ್ಯಾಟಿಂಗ್ ಕ್ರಮಾಂಕ ಫಿಕ್ಸ್ ಆಗಬೇಕಿದೆ..!
ಆರ್‌ಸಿಬಿ ಆಡಿರುವ ಎರಡು ಪಂದ್ಯದಲ್ಲಿ ಆಡಿರೋದು ಇಬ್ಬರೇ. ಒಬ್ಬರು ವಿಕೆ. ಇನ್ನೊಬ್ಬರು ಡಿಕೆ. ಉಳಿದ ಬ್ಯಾಟರ್ಸ್ ವಿಫಲರಾಗಿದ್ದಾರೆ. ಇದಕ್ಕೆ ಕಾರಣ ಬ್ಯಾಟಿಂಗ್ ಸ್ಲಾಟ್ ಚೇಂಜ್ ಆಗಿರೋದು. ಸಿಎಸ್‌ಕೆ ವಿರುದ್ಧ 3ನೇ ಕ್ರಮಾಂಕದಲ್ಲಿ ಆಡಿದ ರಜತ್ ಪಾಟೀದರ್ ಮತ್ತು ನಂಬರ್ 4 ಸ್ಲಾಟ್ನಲ್ಲಿ ಮ್ಯಾಕ್ಸ್‌ವೆಲ್ ಇಬ್ಬರೂ ಡಕೌಟ್ ಆಗಿದ್ರು. ಹಾಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ಕಳುಹಿಸಲಾಯ್ತು. ಫಸ್ಟ್ ಡೌನ್ನಲ್ಲಿ ಕ್ಯಾಮರೋನ್ ಗ್ರೀನ್, ನಂಬರ್ 4ರಲ್ಲಿ ರಜತ್, 5ರಲ್ಲಿ ಮ್ಯಾಕ್ಸಿ. ಆದ್ರೆ ಮೂವರು ವಿಫಲರಾದ್ರು. ಇದು ಆರ್ಸಿಬಿಯನ್ನ ಸಂಕಷ್ಟಕ್ಕೆ ಸಿಲುಕಿಸಿತ್ತು. ಕೊನೆಯಲ್ಲಿ ಡಿಕೆ ಮ್ಯಾಚ್ ಫಿನಿಶ್ ಮಾಡಿದ್ರಿಂದ ನಿರಾಳವಾಯ್ತು.
ಬ್ಯಾಟರ್‌ಗಳಿಗೆ ಮೊದಲು ಬ್ಯಾಟಿಂಗ್ ಕ್ರಮಾಂಕವನ್ನ ಫಿಕ್ಸ್ ಮಾಡುವ ಅಗತ್ಯವಿದೆ. ಅವರಿಗೆ ಸ್ಲಾಟ್ ಫಿಕ್ಸ್ ಮಾಡಿದ್ರೆ ಆಗ ಅವತೇ ಜವಾಬ್ದಾರಿ ಆಟವನ್ನ ಆಡ್ತಾರೆ. ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಾಯಕ ಡು ಪ್ಲೆಸಿಸ್, ಡಿಕೆ, ರಾವತ್ ಸಹ ಲಯದಲ್ಲಿದ್ದಾರೆ. ಆದ್ರೀಗ ಗ್ರೀನ್, ಮ್ಯಾಕ್ಸಿ ಮತ್ತು ಪಾಟೀದರ್ ಬ್ಯಾಟಿಂಗ್ ಚಿಂತೆಯಾಗಿದೆ. ಈ ತ್ರಿಮೂರ್ತಿಗಳು ಫಾರ್ಮ್ಗೆ ಮರಳಿದ್ರೆ, ಇಂದು ಆರ್ಸಿಬಿ ರನ್ ಹೊಳೆಯನ್ನೇ ಹರಿಸಲಿದೆ. ಇಂಪ್ಯಾಕ್ಟ್ ಪ್ಲೇಯರ್ ಅನ್ನ ರೆಡ್ ಆರ್ಮಿ ಪಡೆ ಸದ್ಭಳಕೆ ಮಾಡಿಕೊಳ್ತಿದೆ. ಇದು ಸಹ ಆರ್ಸಿಬಿ ಗೆಲುವಿಗೆ ಕಾರಣವಾಗಿತ್ತು.
ರನ್‌ಗೆ ಕಡಿವಾಣ ಹಾಕಬೇಕಿದೆ ಬೌಲರ್ಸ್
ಮೊಹಮ್ಮದ್ ಸಿರಾಜ್, ಅಲ್ಜರಿ ಜೋಸೆಫ್, ಯಸ್ ದಯಾಳ್ ವಿಕೆಟ್ ಪಡೆದ್ರೂ ದುಬಾರಿ ರನ್ ನೀಡ್ತಿದ್ದಾರೆ. ಅದರಲ್ಲೂ ಜೋಸೆಫ್ ಎರಡು ಮ್ಯಾಚ್ನಲ್ಲಿ 10ರ ಎಕಾನಮಿಯಲ್ಲಿ ರನ್ ನೀಡಿ ಆರ್ಸಿಬಿಗೆ ಮಾರಕರಾಗಿದ್ದಾರೆ. ಸ್ಪಿನ್ನರ್ಸ್ ಹೆಚ್ಚಾಗಿ ಚಮಾತ್ಕಾರ ಮಾಡ್ತಿಲ್ಲ. ಹಾಗಾಗಿ ಇಂದು ಬೌಲರ್ಸ್ ಸ್ವಲ್ಪ ಒತ್ತಡದಿಂದಲೇ ಆಡಲಿದ್ದಾರೆ.
ಲೋ ಆರ್ಡರ್ ಕೆಕೆಆರ್ ಬಲ
ಕೆಕೆಆರ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 4 ರನ್ನಿಂದ ರೋಚಕ ಜಯ ಸಾಧಿಸಿದೆ. ಆ ಪಂದ್ಯ ಗೆಲ್ಲಲು ಮತ್ತು ಕೆಕೆಆರ್ ದೊಡ್ಡ ಮೊತ್ತ ಕೂಡಿಹಾಕಲು ಕಾರಣ ಲೋ ಆರ್ಡರ್ ಬ್ಯಾಟರ್ಸ್. ರಸೆಲ್, ರಿಂಕು ಸಿಂಗ್ ಮತ್ತು ರಮಣ್ದೀಪ್ ಸಿಂಗ್ ರನ್ ಹೊಳೆಯನ್ನೇ ಹರಿಸಿದ್ರು. ಹರ್ಷದೀಪ್ ರಾಣಾ ಕೊನೆ ಓವರ್ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ರು. ಇದರಿಂದ ಕೆಕೆಆರ್ಗೆ ಗೆಲುವು ದಕ್ಕಿತ್ತು. 4 ಓವರ್ನಲ್ಲಿ 53 ರನ್ ನೀಡಿ ದುಬಾರಿಯಾಗಿದ್ದ 20 ಕೋಟಿ ವೀರ ಮಿಚೆಲ್ ಸ್ಟಾರ್ಕ್, ಫಾರ್ಮ್ಗೆ ಮರಳಬೇಕಾದ ಒತ್ತಡದಲ್ಲಿದ್ದಾರೆ. ಒಟ್ನಲ್ಲಿ ಇಂದು ವೆರಿ ಬಿಗ್ ಫೈಟ್ ನಿರೀಕ್ಷಿಸಲಾಗಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್