ಐಪಿಎಲ್‌ನಲ್ಲಿ ನೋಬಾಲ್‌ ನಿರ್ಧರಿಸಲು ಇನ್ನು ಹೊಸ ಐಡಿಯಾ..!

By Kannadaprabha NewsFirst Published Mar 29, 2024, 12:32 PM IST
Highlights

ಈಗಾಗಲೇ ಹಾಕ್‌-ಐ ಸಂಸ್ಥೆ ಪ್ರತಿ ಆಟಗಾರನ ಕಾಲಿನಿಂದ ಸೊಂಟದ ವರೆಗಿನ ಎತ್ತರ ದಾಖಲಿಸಿಕೊಂಡಿದೆ. ಬ್ಯಾಟರ್‌ನ ಸೊಂಟಕ್ಕಿಂತ ಮೇಲೆ ಬೌಲರ್‌ ಫುಲ್‌ಟಾಸ್‌ ಎಸೆದರೆ ಹಾಕ್‌-ಐ ಸಂಸ್ಥೆ ಬಳಿ ಇರುವ ದತ್ತಾಂಶ ಪರಿಶೀಲಿಸಿ ನೋಬಾಲ್‌ ತೀರ್ಪು ನೀಡಲಾಗುತ್ತದೆ.

ನವದೆಹಲಿ(ಮಾ.29): ಐಪಿಎಲ್‌ನಲ್ಲಿ ಪ್ರತಿ ಬಾರಿಯೂ ವಿವಿಧ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಈ ಬಾರಿ ನೋಬಾಲ್‌ ನಿರ್ಧರಿಸಲು ಬಿಸಿಸಿಐ ಹೊಸ ಐಡಿಯಾ ಕಂಡುಹಿಡಿದಿದೆ. ಇನ್ನು ಮುಂದೆ ಬೌಲರ್‌ ನೋಬಾಲ್‌ ಎಸೆದರೆ ಹಾಕ್‌-ಐ ಸಂಸ್ಥೆಯು ಅದು ನೋಬಾಲ್‌ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲಿದೆ.

ಈಗಾಗಲೇ ಹಾಕ್‌-ಐ ಸಂಸ್ಥೆ ಪ್ರತಿ ಆಟಗಾರನ ಕಾಲಿನಿಂದ ಸೊಂಟದ ವರೆಗಿನ ಎತ್ತರ ದಾಖಲಿಸಿಕೊಂಡಿದೆ. ಬ್ಯಾಟರ್‌ನ ಸೊಂಟಕ್ಕಿಂತ ಮೇಲೆ ಬೌಲರ್‌ ಫುಲ್‌ಟಾಸ್‌ ಎಸೆದರೆ ಹಾಕ್‌-ಐ ಸಂಸ್ಥೆ ಬಳಿ ಇರುವ ದತ್ತಾಂಶ ಪರಿಶೀಲಿಸಿ ನೋಬಾಲ್‌ ತೀರ್ಪು ನೀಡಲಾಗುತ್ತದೆ.

ಹನುಮ ವಿಹಾರಿಗೆ ಆಂಧ್ರ ಕ್ರಿಕೆಟ್‌ ಸಂಸ್ಥೆ ನೋಟಿಸ್‌

ಬೆಂಗಳೂರು: ರಣಜಿ ತಂಡದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರ ಕ್ರಿಕೆಟ್‌ ಸಂಸ್ಥೆ(ಎಸಿಎ) ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಹಿರಿಯ ಕ್ರಿಕೆಟಿಗ ಹನುಮ ವಿಹಾರಿಗೆ ಎಸಿಎ ಶೋಕಾಸ್‌ ನೋಟಿಸ್‌ ನೀಡಿದೆ.

ಮುಂಬೈ ತಂಡದೊಳಗೆ ರೋಹಿತ್‌ ಶರ್ಮಾ vs ಹಾರ್ದಿಕ್‌ ಪಾಂಡ್ಯ ಬಣ? ಹಿಟ್‌ಮ್ಯಾನ್ ಬಣದಲ್ಲಿ ಯಾರಿದ್ದಾರೆ?

ಇದಕ್ಕೆ ಉತ್ತರಿಸಿರುವ ವಿಹಾರಿ, ತಂಡ ತೊರೆಯಲು ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡುವಂತೆ ಸಂಸ್ಥೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರ ತಂಡದಲ್ಲಿದ್ದ ಸ್ಥಳೀಯ ರಾಜಕಾರಣಿಯೊಬ್ಬರ ಮಗನ ಮೇಲೆ ಕೂಗಾಡಿದ್ದಕ್ಕೆ ತಮ್ಮನ್ನು ನಾಯಕತ್ವದಿಂದ ಕಿತ್ತು ಹಾಕಲಾಗಿತ್ತು ಎಂದು ಇತ್ತೀಚೆಗಷ್ಟೇ ವಿಹಾರಿ ಸಾಮಾಜಿಕ ತಾಣಗಳಲ್ಲಿ ಆರೋಪಿಸಿದ್ದರು. ಅಲ್ಲದೆ ಆಂಧ್ರ ಪರ ಇನ್ನೆಂದೂ ಆಡಲ್ಲ ಎಂದಿದ್ದರು.

ಐಪಿಎಲ್‌ ಉದ್ಘಾಟನಾ ಪಂದ್ಯ 16.8 ಕೋಟಿ ವೀಕ್ಷಣೆ: ದಾಖಲೆ

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನ ಚೆನ್ನೈ ಹಾಗೂ ಆರ್‌ಸಿಬಿ ನಡುವಿನ ಉದ್ಘಾಟನಾ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ 16.8 ಕೋಟಿ ಮಂದಿ ವೀಕ್ಷಿಸಿದ್ದಾರೆ. ಇದು ಈ ವರೆಗಿನ ಐಪಿಎಲ್‌ನ ಆರಂಭಿಕ ಪಂದ್ಯಗಳ ಪೈಕಿ ಗರಿಷ್ಠ ಎಂದು ಟೂರ್ನಿಯ ಅಧಿಕೃತ ಪ್ರಸಾರಕ ಸಂಸ್ಥೆ ಸ್ಟಾರ್‌ಸ್ಪೋರ್ಟ್‌ ತಿಳಿಸಿದೆ.

IPL 2024 ಬೆಂಗಳೂರಿನಲ್ಲಿಂದು RCB vs KKR ಹೈವೋಲ್ಟೇಜ್ ಫೈಟ್

ಅತಿ ಹೆಚ್ಚು ನಿಮಿಷಗಳ ಕಾಲ ವೀಕ್ಷಿಸಿದ ಪಂದ್ಯ ಎಂಬ ದಾಖಲೆಯೂ ನಿರ್ಮಾಣವಾಗಿದೆ. ಪಂದ್ಯವನ್ನು ಏಕಕಾಲಕ್ಕೆ 6.1 ಕೋಟಿ ಮಂದಿ ವೀಕ್ಷಿಸಿದ್ದು ಕೂಡಾ ದಾಖಲೆ. ಇನ್ನು, ಉದ್ಘಾಟನಾ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ 11.3 ಕೋಟಿ ಜನರಿಂದ ಪಂದ್ಯ ವೀಕ್ಷಿಸಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ.51ರಷ್ಟು ಹೆಚ್ಚು ಎಂದು ಜಿಯೋ ಸಿನಿಮಾ ತಿಳಿಸಿದೆ.

ಏ.3ರಿಂದ ಮೇ 24ರ ವರೆಗೆ ಕ್ರಿಕೆಟ್‌ ತರಬೇತಿ ಶಿಬಿರ

ಬೆಂಗಳೂರು: ನಗರದ ಪ್ರಮುಖ ಕ್ಲಬ್‌ ಆಗಿರುವ ಹೆರೋನ್ಸ್‌ ಕ್ರಿಕೆಟ್‌ ಕ್ಲಬ್‌ ಏ.3ರಿಂದ ಮೇ 24ರ ವರೆಗೆ ಎಪಿಎಸ್‌ ಪಬ್ಲಿಕ್‌ ಶಾಲೆಯ ಸಹಭಾಗಿತ್ವದಲ್ಲಿ ಎನ್‌.ಆರ್‌.ಕಾಲನಿಯ ಎಪಿಎಸ್‌ ಕಾಲೇಜ್‌ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್‌ ತರಬೇತಿ ಶಿಬಿರ ಆಯೋಜಿಸಿದೆ. ಪಾಲ್ಗೊಳ್ಳಲು ಆಸಕ್ತಿ ಇರುವವರು ಮುರಳೀಧರ (ಮೊಬೈಲ್‌ ಸಂಖ್ಯೆ: 9845096056) ಅವರನ್ನು ಸಂಪರ್ಕಿಸಬಹುದು.

ಇನ್ನೂ ಒಂದು ವಾರ ಹಸರಂಗ ಐಪಿಎಲ್‌ಗಿಲ್ಲ?

ನವದೆಹಲಿ: ಪಾದದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ಆಲ್ರೌಂಡರ್‌ ವನಿಂದು ಹಸರಂಗ ಐಪಿಎಲ್‌ನ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡ ಸೇರ್ಪಡೆ ಇನ್ನೂ ಒಂದು ವಾರ ತಡವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅವರು ಮುಂದಿನ ವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಜು.19ರಿಂದ ಲಂಕಾದಲ್ಲಿ ಮಹಿಳೆಯರ ಏಷ್ಯಾಕಪ್‌

ಡಂಬುಲಾ(ಶ್ರೀಲಂಕಾ): 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿ ಜು.19ರಿಂದ 28ರ ವರೆಗೆ ಡಂಬುಲಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿರುವ ಭಾರತ ಹಾಗೂ ಪಾಕಿಸ್ತಾನ ಜು.21ಕ್ಕೆ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಭಾರತ 7 ಬಾರಿ ಪ್ರಶಸ್ತಿ ಗೆದ್ದಿದೆ.
 

click me!