ಇಂದು ಬೆಂಗಳೂರಿನಲ್ಲಿ ಆರ್ಸಿಬಿ ತಂಡ ಕೆಕೆಆರ್ ಸವಾಲನ್ನ ಎದುರಿಸುತ್ತಿದೆ. ಅದಕ್ಕೂ ಮುನ್ನ ದಿನ ಅಂದ್ರೆ ನಿನ್ನೆ ರೆಡ್ ಆರ್ಮಿ ಪ್ಲೇಯರ್ಸ್ ರಿಲ್ಯಾಕ್ಷ್ ಮೂಡಿಗೆ ಜಾರಿದ್ರು. ವಿರಾಟ್ ಕೊಹ್ಲಿ, ಅಲ್ಜಾರಿ ಜೋಸೆಫ್, ರೀಸ್ ಟೋಪ್ಲಿ, ಕ್ಯಾಮರೋನ್ ಗ್ರೀನ್ ಫುಟ್ಬಾಲ್ ಗೇಮ್ ಆಡಿ ಎಂಜಾಯ್ ಮಾಡಿದ್ರು.
ಬೆಂಗಳೂರು(ಮಾ.29): ಆರ್ಸಿಬಿ ಗುರುವಾರ ಪ್ಲೇಯರ್ಸ್ ಕ್ರಿಕೆಟ್ ಪ್ರಾಕ್ಟೀಸ್ ಮಾಡೋ ಬದಲು ಫುಟ್ಬಾಲ್ ಆಡಿದ್ರು. ಅಯ್ಯೋ.. ಫಿಟ್ನೆಸ್ಗೆ ಫುಟ್ಬಾಲ್ ಆಡೋದು ಕಾಮನ್ ಅನ್ನಬೇಡಿ. ಅವರು ಫುಟ್ಬಾಲ್ ಆಡಿದ್ದು ಫಿಟ್ನೆಸ್ಗಾಗಿ ಅಲ್ಲ. ಮೈದಾನದಲ್ಲೂ ಅಲ್ಲ. ಮತ್ತೆಲ್ಲಿ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ ರೆಡ್ ಆರ್ಮಿ ಪಡೆದ ಫುಟ್ಬಾಲ್ ಆಟ.
ಆನ್ಲೈನ್ ಫುಟ್ಬಾಲ್ ಗೇಮ್ ಆಡಿದ ಪ್ಲೇಯರ್ಸ್
undefined
ಇಂದು ಬೆಂಗಳೂರಿನಲ್ಲಿ ಆರ್ಸಿಬಿ ತಂಡ ಕೆಕೆಆರ್ ಸವಾಲನ್ನ ಎದುರಿಸುತ್ತಿದೆ. ಅದಕ್ಕೂ ಮುನ್ನ ದಿನ ಅಂದ್ರೆ ನಿನ್ನೆ ರೆಡ್ ಆರ್ಮಿ ಪ್ಲೇಯರ್ಸ್ ರಿಲ್ಯಾಕ್ಷ್ ಮೂಡಿಗೆ ಜಾರಿದ್ರು. ವಿರಾಟ್ ಕೊಹ್ಲಿ, ಅಲ್ಜಾರಿ ಜೋಸೆಫ್, ರೀಸ್ ಟೋಪ್ಲಿ, ಕ್ಯಾಮರೋನ್ ಗ್ರೀನ್ ಫುಟ್ಬಾಲ್ ಗೇಮ್ ಆಡಿ ಎಂಜಾಯ್ ಮಾಡಿದ್ರು. ಆ ವಿಡಿಯೋವನ್ನ ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಕಾಮೆಂಟ್ಸ್, ಲೈಕ್ಸ್ ಪಡೆದುಕೊಂಡಿದೆ.
Rest Day 🤝 Gaming Challenge
Virat Kohli, Reece Topley, Cameron Green and Alzarri Joseph bonded over a session of football gaming at the RCB HQ. 😆👌
Watch presents Bold Diaries. Download the Big Basket App and get groceries delivered in ten minutes. 📱… pic.twitter.com/UTn1pbaTWN
ಐಪಿಎಲ್‌ನಲ್ಲಿ ನೋಬಾಲ್ ನಿರ್ಧರಿಸಲು ಇನ್ನು ಹೊಸ ಐಡಿಯಾ..!
ರೀಸ್ ಟೋಪ್ಲಿ, ಅಲ್ಜಾರಿ ಜೋಸೆಫ್ ಮತ್ತು ಕ್ಯಾಮರೂನ್ ಗ್ರೀನ್ ಸೇರಿದಂತೆ ಆರ್‌ಸಿಬಿ ತಾರೆಗಳು ವಿರಾಟ್ ಕೊಹ್ಲಿಯೊಂದಿಗೆ ತಮ್ಮ ಆಫ್-ಡೇ ಸಮಯದಲ್ಲಿ ವಿಶ್ರಾಂತಿ ಪಡೆಯಲು ಒಟ್ಟಿಗೆ ಫಿಫಾ ಆಡಿದರು. ಪರದೆಯ ಮೇಲೆ ಫುಟ್ಬಾಲ್ ಪಂದ್ಯವು ರೋಚಕ ಮುಕ್ತಾಯದ ಕಡೆಗೆ ಸಾಗಿದಾಗ ಆಟವು ಸ್ಪರ್ಧಾತ್ಮಕ ತಿರುವು ಪಡೆದುಕೊಂಡಿತು.
When you lose the ball on the last ball of your innings 🫣
Tommy C and Suyash's reaction says it all! 😁 pic.twitter.com/NgJecoz1wC
ಆರ್‌ಸಿಬಿ ತಂಡದ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಆಟಗಾರರು ಫಿಫಾ ಗೇಮ್‌ನಲ್ಲಿ ತಮಾಷೆಯ ಬಗ್ಗೆ ಬಾಂಧವ್ಯವನ್ನು ತೋರಿಸಿದರು. ಅಲ್ಜಾರಿ, ನೀವು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ನಿಮಗೆ ಹೇಗೆ ಆಡಬೇಕೆಂದು ಗೊತ್ತಿಲ್ಲ ಎಂದು ನೀವು ಹೇಳುತ್ತೀರಿ ಎಂದು ಕೊಹ್ಲಿ, ಅಲ್ಜಾರಿ ಕಾಲು ಎಳೆದಿದ್ದಾರೆ.
ಪರದೆಯ ಮೇಲೆ ಫಿಫಾ ಪಂದ್ಯದ ಸಮಯದಲ್ಲಿ, ವಿರಾಟ್ ಕೊಹ್ಲಿ ತನ್ನ ಹಲವಾರು ಭಾವನೆಗಳನ್ನು ಪ್ರದರ್ಶಿಸಿದರು. ಅವರು ಗೋಲು ಗಳಿಸಿದ ನಂತರ ಸಂತೋಷಪಟ್ಟರು ಮತ್ತು ಉತ್ತಮವಾದ ಟ್ಯಾಕಲ್‌ಗಾಗಿ ತಮ್ಮ ಸಹ ಆಟಗಾರರನ್ನು ಹೊಗಳಿದರು.
ಮುಂಬೈ ತಂಡದೊಳಗೆ ರೋಹಿತ್ ಶರ್ಮಾ vs ಹಾರ್ದಿಕ್ ಪಾಂಡ್ಯ ಬಣ? ಹಿಟ್‌ಮ್ಯಾನ್ ಬಣದಲ್ಲಿ ಯಾರಿದ್ದಾರೆ?
ಹೆಚ್ಚಿನ ಐಪಿಎಲ್ ತಂಡಗಳು ತಮ್ಮ ಹೋಟೆಲ್‌ಗಳಲ್ಲಿ ಟೀಂ ಬಾಂಡಿಂಗ್ ಸ್ಪೇಸ್‌ಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿವೆ. ಗೇಮಿಂಗ್ ಮತ್ತು ಇತರ ಮನರಂಜನಾ ಚಟುವಟಿಕೆಗಳಿಗೆ ನಿರ್ದಿಷ್ಟ ಪ್ರದೇಶಗಳನ್ನು ಹೊಂದಿರುವ ಪರಿಕಲ್ಪನೆ ನೀಡುತ್ತಿವೆ. ಈ ಮೂಲ್ಕ ಆಟಗಾರರ ನಡುವಿನ ಬಾಂಡಿಂಗ್ ಹೆಚ್ಚಿಸಿ ಪಂದ್ಯ ಗೆಲ್ಲುವುದು ಫ್ರಾಂಚೈಸಿ ಗುರಿಯಾಗಿದೆ. ಒಟ್ನಲ್ಲಿ ನಿನ್ನೆ ಫುಟ್ಬಾಲ್ ಆಡಿರೋ ಆರ್‌ಸಿಬಿ ಬಾಯ್ಸ್, ಇಂದು ಕ್ರಿಕೆಟ್ ಆಡಲು ಸಿದ್ದರಾಗಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್