IPL 2022: ಹ್ಯಾಟ್ರಿಕ್ ಸೋಲಿನ ಬಳಿಕ ಕೆರಳಿದ ನಿಂತ RCB ಬಾಯ್ಸ್

Published : May 10, 2022, 05:48 PM IST
IPL 2022: ಹ್ಯಾಟ್ರಿಕ್ ಸೋಲಿನ ಬಳಿಕ ಕೆರಳಿದ ನಿಂತ RCB ಬಾಯ್ಸ್

ಸಾರಾಂಶ

* ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಹ್ಯಾಟ್ರಿಕ್ ಸೋಲಿನ ಬಳಿಕ ಫಿನಿಕ್ಸ್‌ನಂತೆ ಎದ್ದು ನಿಂತ ಆರ್‌ಸಿಬಿ * ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಭದ್ರವಾಗಿದೆ ಫಾಫ್ ಡು ಪ್ಲೆಸಿಸ್ ಪಡೆ

ಬೆಂಗಳೂರು(ಮೇ.10): ಜಸ್ಟ್​​ ಒನ್​ ಗೇಮ್​ ಮ್ಯಾಟರ್​​​. ಆರಂಭಿಕ 2 ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಹ್ಯಾಟ್ರಿಕ್ ಸೋಲು ಕಂಡು ಕಂಗೆಟ್ಟಿತ್ತು. ಇದಾದ ಬಳಿಕ ಫಾಫ್ ಡು ಪ್ಲೆಸಿಸ್​ ಪಡೆಗೆ ಬೇರೆ ಆ್ಯಪ್ಷನ್​​ ಇರ್ಲಿಲ್ಲ. ಇದ್ದಿದ್ದು ಒಂದೇ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳೋದು. ಅದು ಅಷ್ಟು ಸುಲಭನೂ ಆಗಿರ್ಲಿಲ್ಲ. ಆದ್ರೆ ಜಸ್ಟ್​ ಒಂದು ಗೆಲುವು ಇಂಪಾಸಿಬಲ್ ಅನ್ನು ಪಾಸಿಬಲ್​​ ಮಾಡಿಬಿಡ್ತು. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ರಿವೆಂಜ್ ವಿಕ್ಟರಿ ಆರ್​ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್​​ಗೆ ಮರಳಿತು.

ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಣಿಸಿದ ಬಳಿಕ ಆರ್​ಸಿಬಿ ಕೆರಳಿ ನಿಂತಿದೆ. ಎದುರಾಳಿ ತಂಡವನ್ನು ಸುಲಭವಾಗಿ ಬಡಿದು ಬಾಯಿಗೆ ಹಾಕಿಕೊಳ್ತಿದೆ. ಚೆನ್ನೈ ಬಳಿಕ ಹೈದ್ರಾಬಾದ್ ವಿರುದ್ಧ  ಪ್ರಚಂಡ 67 ರನ್​​ಗಳ ವಿಕ್ಟರಿ ದಾಖಲಿಸ್ತು. ಆ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯ ಗೆದ್ದು, ಪಾಯಿಂಟ್ಸ್ ಟೇಬಲ್​ನಲ್ಲಿ ಆರೆಂಜ್ ಆರ್ಮಿಯನ್ನ ಓವರ್​ ಟೇಕ್​ ಮಾಡಿ ಮತ್ತೆ 4ನೇ ಸ್ಥಾನಕ್ಕೆ ಲಗ್ಗೆಯಿಡ್ತು. 7 ಗೆಲುವಿನ ಬಳಿಕ ಕೆಂಪಂಗಿ ಸೈನ್ಯದ ಪ್ಲೇ ಆಫ್​​ ಕನಸು ಚಿಗುರೊಡೆದಿದೆ. ಇನ್ನುಳಿದ ಎರಡು ಪಂದ್ಯಗಳನ್ನ ಗೆದ್ದು ಬಿಟ್ರೆ ಒಟ್ಟು 18 ಅಂಕ ಸಂಪಾದಿಸಿ ಪ್ಲೇ ಆಫ್​​​ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲಿದೆ.

RCB ಗೆಲುವು ದುಪ್ಪಟ್ಟಾಗಿಸಿದ ಗ್ರೀನ್​ ಜೆರ್ಸಿ ವಿಕ್ಟರಿ:

ಸನ್‌ರೈಸರ್ಸ್‌ ಹೈದ್ರಾಬಾದ್​ ಎದುರಿನ ಪಂದ್ಯ ಆರ್​ಸಿಬಿಗೆ ವೆರಿ ಸ್ಪೆಷಲ್ ಆಗಿತ್ತು. ಯಾಕಂದ್ರೆ ಡುಪ್ಲೆಸಿಸ್​​ ಬಾಯ್ಸ್​ ಗ್ರೀನ್​ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ರು. ಮೊದಲೇ ಈ ಜೆರ್ಸಿ ತಂಡಕ್ಕೆ ಅನ್​​ಲಕ್ಕಿ ಅನ್ನೋ ಅಪವಾದವಿತ್ತು. ಇದನ್ನ ಹೇಗಾದ್ರೂ ಮಾಡಿ ಬದಲಿಸಲೇಬೇಕು ಅಂತ ಆರ್​ಸಿಬಿ ಶತಪಗೈದಿತ್ತು. ಕೊನೆಗೆ ದೊಡ್ಡ ವಿಕ್ಟರಿಯೊಂದಿಗೆ ಗ್ರೀನ್​ ಜೆರ್ಸಿಯಲ್ಲಿ ಮೆರೆದಾಡಿತು. ಇನ್ನು ಈ ಸ್ಪೆಷಲ್​ ಗೆಲುವನ್ನು ಆರ್​ಸಿಬಿ ಹುಡುಗ್ರು ಸ್ಪೆಷಲ್ ರೀತಿಯಲ್ಲಿ ಸಂಭ್ರಮಿಸಿದ್ರು.

ಗೆಲುವಿನ ಹುಮ್ಮಸ್ಸಿನಲ್ಲಿ ಆರ್​ಸಿಬಿ ಆಂಡ್​ ಟೀಮ್​ ನಗು ಮೊಗದಿಂದಲೇ ಡ್ರೆಸ್ಸಿಂಗ್ ರೂಮ್​ಗೆ ಎಂಟ್ರಿಕೊಟ್ರು. ಪ್ರತಿಯೊಬ್ಬ ಪ್ಲೇಯರ್​ ಒಬ್ಬರನ್ನ ಒಬ್ಬರು ತಬ್ಬಿಕೊಂಡು ಖುಷಿಪಟ್ರು. ಜೋಡೆತ್ತು ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​ ನಗುವಿನ ಚಟಾಕಿ ಹಾರಿಸಿದ್ರು. ಇನ್ನು ಇಷ್ಟಕ್ಕೆ ಆರ್​ಸಿಬಿ ಹುಡುಗರ ಸಂಭ್ರಮ ನಿಲ್ಲಲಿಲ್ಲ. ಮುಂದುವರಿದು ಎಲ್ಲರೂ ವಿಕ್ಟರಿ ಗೀತೆಗೆ ಧ್ವನಿಗೂಡಿಸಿದ್ರು. ಆ ಮೂಮೆಂಟ್​​ ಅನ್ನ ಇಂತೂ ಮಜವಾಗಿತ್ತು.

IPL 2022 ಲೆಜೆಂಡ್ ಸುನಿಲ್ ಗವಾಸ್ಕರ್ ಮಾತಿಗೂ ಬೆಲೆ ಕೊಡೋದಿಲ್ವಾ ಬಿಸಿಸಿಐ ಸೆಲೆಕ್ಟರ್ಸ್..?

ಒಟ್ಟಿನಲ್ಲಿ ಆರ್​ಸಿಬಿ ಹುಡುಗರ ಈ ಸಂಭ್ರಮ ನೋಡ್ತಿದ್ರೆ ಗ್ರೀನ್ ಜೆರ್ಸಿ ಗೆಲುವು ತಂಡದ ಗೆಲುವನ್ನ ಇಮ್ಮಡಿಗೊಳಿಸಿದೆ. ಹೈ ಜೋಶ್​​​ನಲ್ಲಿರೋ ಈ ತಂಡವನ್ನ ಇನ್ಮುಂದೆ ಕಟ್ಟಿಹಾಕೋದು ಎದುರಾಳಿಗೆ  ಟಫ್​​​​. ಸೋ ಕೆಂಪಂಗಿ ಪಡೆ ಉಳಿದ 2 ಪಂದ್ಯ ಗೆದ್ದು ಪ್ಲೇ ಆಫ್​​ಗೆ ಎಂಟ್ರಿಕೊಡೋದ್ರಲ್ಲಿ ಯಾವುದೇ ಸಂಶಯವಿಲ್ಲ ಬಿಡಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!