ಟಿ20 ಮಾದರಿಯಲ್ಲಿ ವೆಸ್ಟ್ ಇಂಡೀಸ್‌ನ ಮಹಾಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಭಾರತ ತಂಡ, ಮೊದಲ ಟಿ20 ಪಂದ್ಯದಲ್ಲಿ ಗೆಲುವಿಗೆ ಸುಬಳ ಗುರಿ ಪಡೆದುಕೊಂಡಿದೆ.
ಟ್ರಿನಿಡಾಡ್ (ಆ.3): ನಾಯಕ ರೋವ್‌ಮನ್ ಪಾವೆಲ್ ಆಕರ್ಷಕ ಆಟದ ನಡುವೆಯೂ ಟೀಮ್ ಇಂಡಿಯಾದ ಶಿಸ್ತಿನ ಬೌಲಿಂಗ್ ಮುಂದೆ ಪರದಾಡಿದ ವೆಸ್ಟ್ ಇಂಡೀಸ್ ತಂಡ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿದೆ. ಟೀಮ್ ಇಂಡಿಯಾ ಪರವಾಗಿ ಆಕರ್ಷಕ ದಾಳಿ ಸಂಘಟಿಸಿದ ಯಜುವೇಂದ್ರ ಚಾಹಲ್ 3 ಓವರ್‌ಗಳ ಕೋಟಾದಲ್ಲಿ 24 ರನ್ ನೀಡಿ 2 ವಿಕೆಟ್ ಉರುಳಿಸಿದರು. ಆರ್ಶ್‌ದೀಪ್ ಸಿಂಗ್ ಕೂಡ 2 ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.ಕೊನೆಯ ಎರಡು ಓವರ್‌ಗಳಲ್ಲಿ ಮುಕೇಶ್ ಕುಮಾರ್ ಆಕರ್ಷಕ ಯಾರ್ಕರ್‌ಗಳನ್ನು ಹಾಕುವ ಮೂಲಕ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸುವ ವಿಂಡೀಸ್ ತಂಡದ ಪ್ಲ್ಯಾನ್ ಅನ್ನು ಹಾಳು ಮಾಡಿದರು. ಭಾರತ ತನ್ನ 20 ಓವರ್‌ಗಳನ್ನು ಮಾಡಲು ಬರೋಬ್ಬರಿ 1 ಗಂಟೆ 48 ನಿಮಿಷ ತೆಗೆದುಕೊಂಡಿತು.
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಮೊದಲು ಬ್ಯಾಟಿಂಗ್ ಮಾಡವ ನಿರ್ಧಾರ ಸೂಕ್ತವೇ ಆಗಿತ್ತು. ಅದರಂತೆ ಬ್ರಾಂಡನ್ ಕಿಂಗ್ (28ರನ್, 19 ಎಸೆತ, 4 ಬೌಂಡರಿ, 1 ಸಿಕ್ಸರ್) ಅಬ್ಬರದ ಆರಂಭ ನೀಡಿದ್ದರು. ಮೊದಲ 25 ಎಸೆತಗಳಲ್ಲಿ ವಿಂಡೀಸ್ 29 ರನ್ ಗಳಿಸಿದ್ದಾಗ, ನಾಯಕ ಹಾರ್ದಿಕ್ ಪಾಂಡ್ಯ ಸ್ಪಿನ್ನರ್‌ಗಳನ್ನು ಇಳಿಸುವ ನಿರ್ಧಾರ ಮಾಡಿದ್ದು ಫಲ ನೀಡಿತು. ಕೇವಲ ಒಂದು ರನ್ ಅಂತರದಲ್ಲಿ ಬ್ರಾಂಡನ್ ಕಿಂಗ್ ಹಾಗೂ ಕೈಲ್ ಮೇಯರ್ಸ್ ಇಬ್ಬರೂ ಔಟಾಗಿ ಹೊರನಡೆದರು. ಯಜುವೇಂದ್ರ ಚಾಹಲ್ ಈ ವಿಕೆಟ್‌ಗಳನ್ನು ಉರುಳಿಸಿ ಭಾರತಕ್ಕೆ ಮೇಲುಗೈ ನೀಡಿದರು.
undefined
ಆ ಬಳಿಕ ವಿಂಡೀಸ್ ತಂಡ ಚೇತರಿಕೆ ಕಾಣುವ ಪ್ರಯತ್ನ ಮಾಡಿತಾದರೂ ರನ್‌ವೇಗ ಮಾತ್ರ ಕುಸಿತ ಕಂಡಿತು. ವಿಕೆಟ್ ಕೀಪರ್ ಜಾನ್ಸನ್ ಚಾರ್ಲ್ಸ್ ಕೇವಲ 3 ರನ್ ಬಾರಿಸಿ ಔಟಾದಾಗ ವಿಂಡೀಸ್ 58 ರನ್ ಬಾರಿಸಿತ್ತು. ಬಳಿಕ ಜೊತೆಯಾದ ಅನುಭವಿ ನಿಕೋಲಸ್ ಪೂರನ್ (41 ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್ ) ಹಾಗೂ ನಾಯಕ ರೋವ್‌ಮನ್ ಪೊವೆಲ್ (48ರನ್, 32 ಎಸೆತ, 3 ಬೌಂಡರಿ, 3 ಸಿಕ್ಸರ್) ನಾಲ್ಕನೇ ವಿಕೆಟ್‌ಗೆ 38 ರನ್ ಜೊತೆಯಾಟವಾಡಿದರು. ಇದರಲ್ಲಿ ಹೆಚ್ಚಿನ ರನ್‌ಗಳನ್ನು ಪೂರನ್ ಅವರೇ ಬಾರಿಸಿದ್ದರು.
West Indies vs India: ಟೀಮ್ ಇಂಡಿಯಾ ಪರ ಇಬ್ಬರು ಪಾದಾರ್ಪಣೆ!
ವಿಂಡೀಸ್ ತಂಡದ ರನ್ ಮೂರಂಕಿಯ ಗಡಿ ದಾಟಲು ನಾಲ್ಕು ರನ್ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯ ಅಪಾಯಕಾರಿ ಪೂರನ್ ಅವರ ವಿಕೆಟ್ ಉರುಳಿಸಿದರು. ಈ ವೇಳೆಗಾಗಲೇ 15ನೇ ಓವರ್ ನಡೆಯುತ್ತಿದ್ದ ಕಾರಣದಿಂದ ವಿಂಡೀಸ್ ಸ್ಲಾಗ್ ಓವರ್ ಬ್ಯಾಟಿಂಗ್‌ಗೆ ಸಿದ್ಧವಾಗಬೇಕಿತ್ತು. ಈ ಹಂತದಲ್ಲಿ ಭಾರತ ಮುಕೇಶ್ ಕುಮಾರ್ ಅವರ ಯಾರ್ಕರ್‌ಗಳನ್ನು ಯಶಸ್ವಿಯಾಗಿ ಬಳಸಿಕೊಂಡು ವಿಂಡೀಸ್ ಬ್ಯಾಟಿಂಗ್‌ಗೆ ಕಡಿವಾಣ ಹೇರಲು ಯಶಸ್ವಿಯಾಯಿತು.ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೆಯರ್ 12 ಎಸೆತಗಳಲ್ಲಿ 10 ರನ್ ಬಾರಿಸಿ ಔಟಾದರೆ, ಇನ್ನಿಂಗ್ಸ್ ಮುಗಿಯಲು ಇನ್ನೂ ಒಂದು ಓವರ್ ಇರುವಾಗ ರೋವ್‌ಮನ್ ಪಾವೆಲ್ ಕೂಡ ಔಟಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು.
Mercedes-Benz GLE SUV ಕಾರು ಖರೀದಿಸಿದ 2018ರ ಐಪಿಎಲ್‌ನ ದುಬಾರಿ ಕ್ರಿಕೆಟಿಗ..!