ಭಾರತ-ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇಬ್ಬರು ಆಟಗಾರರಿಗೆ ಪಾದಾರ್ಪಣೆಯ ಅವಕಾಶವನ್ನು ನೀಡಿದೆ.
ಟ್ರಿನಿಡಾಡ್ (ಆ.3): ಟೆಸ್ಟ್ ಹಾಗೂ ಏಕದಿನ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಟಿ20 ಸರಣಿಯಲ್ಲೂ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪಾರಮ್ಯ ಸಾಧಿಸುವ ಗುರಿಯಲ್ಲಿದೆ. ಗುರುವಾರ ಟ್ರಿನಿಡಾಡ್ ಟಾರೌಬಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದೆ.
ಈ ಪಂದ್ಯದ ಮೂಲಕ ಕಳೆದ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ ತಿಲಕ್ ವರ್ಮ ಹಾಗೂ ಮುಖೇಶ್ ಕುಮಾರ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ. ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೇ ಟೆಸ್ಟ್, ಏಕದಿನ ಹಾಗೂ ಟಿ20ಗೆ ರಾಷ್ಟ್ರೀಯ ತಂಡದ ಪರ ಪಾದಾರ್ಪಣೆ ಮಾಡಿದ ದಾಖಲೆ ಮಾಡಿದ್ದಾರೆ. ಇದಕ್ಕೂ ಮುನ್ನ 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ.ನಟರಾಜನ್ ಈ ದಾಖಲೆ ಮಾಡಿದ್ದರು.
ಈ ಟಿ20 ಸರಣಿಯ ಪ್ಲ್ಯಾನ್ ಸಂಪೂರ್ಣ ಸಿಂಪಲ್. ಮತ್ತೊಮ್ಮೆ ನಾವು ವೆಸ್ಟ್ ಇಂಡೀಸ್‌ಗೆ ಬರುವುದು ಟಿ20 ವಿಶ್ವಕಪ್ ಟೂರ್ನಿಯಾಗಿಯೇ. ಹಾಗಾಗಿ ಈ ಸರಣಿಯಲ್ಲಿ ಕೆಲವೊಂದು ಪ್ಲೇಯರ್‌ಗಳು ಅವಕಾಶ ಪಡೆಯಲಿದ್ದಾರೆ. ಮುಂದಿನ ಬಾರಿ ಅವರು ವೆಸ್ಟ್ ಇಂಡೀಸ್‌ಗೆ ಬರುವ ವೇಳೆಗೆ ಇಲ್ಲಿನ ವಾತಾವರಣಕ್ಕೆ ಸಂಪೂರ್ಣವಾಗಿ ಸಿದ್ಧರಾಗಿರುತ್ತಾರೆ. ಕೆಲವೊಂದು ಸಂಗತಿಗಳನ್ನು ಬಹಳ ಸಿಂಪಲ್ ಆಗಿ ಇರಿಸಿದ್ದೇನೆ.ನನ್ನ ಮಟ್ಟಿಗೆ ಆಟದಲ್ಲಿ ಪ್ರಗತಿ ಸಾಧಿಸುವುದು ಮುಖ್ಯ. ನಾನು ಇದಕ್ಕೆ ಗಮನ ನೀಡುತ್ತೇನೆ. ಕೆಲವೊಂದು ಸೋಲುಗಳು ಎದುರಾಗುತ್ತವೆ. ಅದಕ್ಕೆ ನಾನು ಸಿದ್ಧನಿದ್ದೇನೆ. ನಮಗೆ ನಾವೇ ಸವಾಲು ಒಡ್ಡಿಕೊಳ್ಳಬೇಕು. ಉಮ್ರಾನ್ ಮಲೀಕ್ ಹಾಗೂ ರವಿ ಬಿಷ್ಣೋಯಿ ಮಿಸ್ ಆಗಿದ್ದಾರೆ. ನಾವು ಮೂವರು ಸ್ಪಿನ್ನರ್‌ಗಳ ಜೊತೆ ಆಡುತ್ತಿದ್ದೇವೆ ಎಂದು ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನಾವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದೇವೆ. ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವ ಹಾಗೆ ಕಾಣುತ್ತಿದೆ. ಭಾರತ ಸಾಕಷ್ಟು ಸ್ಪಿನ್ನರ್‌ಗಳ ಜೊತೆ ಆಡುತ್ತಿದೆ.ಅವರ ವಿರುದ್ಧ ನಾವು ಹೇಗೆ ಆಡುತ್ತೇವೆ ಎನ್ನುವ ಕುತೂಹಲವಿದೆ. ನಮ್ಮ ಆಟಗಾರರು ವಿಶ್ವಾಸದದಲ್ಲಿದ್ದಾರೆ. ಟಿ20ಗಾಗಿ ನಮ್ಮ ಯೋಜನೆಗಳು ಸಂಪೂರ್ಣ ಭಿನ್ನ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಂದೆ ಹೋಗುತ್ತಿದ್ದೇವೆ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್‌ಮನ್ ಪಾವೆಲ್ ಹೇಳಿದ್ದಾರೆ.
undefined
ವೆಸ್ಟ್ ಇಂಡೀಸ್ (ಪ್ಲೇಯಿಂಗ್ ಇಲೆವೆನ್): ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (ವಿ.ಕೀ), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಖ್ಯಾತ ನಟಿಯರೊಂದಿಗೆ ಡೇಟಿಂಗ್ ಮಾಡಿದ ಕ್ರಿಕೆಟಿಗರು, ಆಮೇಲೆ ಮದ್ವೆಯಾಗಿದ್ದು ಮಾತ್ರ ಬೇರೆ ಯಾರನ್ನೋ!
ಭಾರತ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ಇಶಾನ್ ಕಿಶನ್(ವಿ.ಕೀ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್