
ಇಸ್ಲಾಮಾಬಾದ್(ಫೆ.08): ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆಸಿದ ಅಂತಾರಾಷ್ಟ್ರೀಯ ಕ್ರಿಕೆಟಿಗ ನಾಸಿರ್ ಜೆಮ್ಶೆಡ್‌ಗೆ 17 ತಿಂಗಳು ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಇನ್ನು ಜೆಮ್ಶೆಡ್ ಜೊತೆಗೆ ಇದರೊಂದಿಗೆ ಫಿಕ್ಸಿಂಗ್ ಕಿಂಗ್ ಪಿನ್‌ಗಳಾದ ಯುೂಸುಫ್ ಅನ್ವರ್ ಹಾಗೂ ಮೊಹಮ್ಮದ್ ಇಝಾಜ್‌ಗೂ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಸ್ಪಾಟ್ ಫಿಕ್ಸಿಂಗ್ ನಡೆಸಿದ ಪಾಕ್ ಕ್ರಿಕೆಟಗನಿಗೆ 10 ವರ್ಷ ನಿಷೇಧ
ಕಳೆದ ಡಿಸೆಂಬರ್‌ನಲ್ಲಿ ನಾಸಿರ್ ಜೆಮ್ಶೆಡ್ ಫಿಕ್ಸಿಂಗ್ ನಡೆಸಿರುವುದನ್ನು ತನಿಖೆಯಲ್ಲಿಒಪ್ಪಿಕೊಂಡಿದ್ದರು. ಇಷ್ಟೇ ಅಲ್ಲ 2016ರಲ್ಲಿ ಬಾಂಗ್ಲಾ ಪ್ರಿಮೀಯರ್ ಲೀಗ್ ಟೂರ್ನಿಯಲ್ಲೂ ಫಿಕ್ಸಿಂಗ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಸುದೀರ್ಘ ವಿಚಾರಣೆ ನಡೆಸಿದ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನಾಸಿರ್‌ಗೆ 17 ತಿಂಗಳು, ಯೂಸುಫ್‌ಗೆ 40 ತಿಂಗಳು ಹಾಗೂ ಇಝಾಜ್‌ಗೆ 30 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಕಳಂಕಿತ ಆಟಗಾರರ ಜತೆ ಆಡಿದ್ದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!
ನಾಸಿರ್ ಜೆಮ್ಶೆಡ್ ಪಾಕಿಸ್ತಾನ ಪರ 2 ಟೆಸ್ಟ್ ಪಂದ್ಯ, 48 ಏಕದಿನ ಹಾಗೂ 19 ಟಿ20 ಪಂದ್ಯ ಆಡಿದ್ದಾರೆ. ಫಿಕ್ಸಿಂಗ್ ಆರೋಪ ಸಾಬೀತಾದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ 10 ವರ್ಷ ನಿಷೇಧ ಹೇರಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.