Kohli vs Rohit: ಐಪಿಎಲ್‌ನಲ್ಲಿ ಸ್ಯಾಲರಿಗಾಗಿ ಬಿಗ್ ಫೈಟ್, 19 ಆವೃತ್ತಿಗಳಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?

Published : Nov 28, 2026, 04:55 PM IST
Virat Kohli and Rohit Sharma

ಸಾರಾಂಶ

ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಐಪಿಎಲ್ ವೇತನದ ಇತಿಹಾಸ ಮತ್ತು ಹೋಲಿಕೆ. 2008 ರಿಂದ 2026 ರವರೆಗಿನ ಅವರ ಆದಾಯ ಮತ್ತು ಏರಿಳಿತಗಳನ್ನು ವಿಶ್ಲೇಷಿಸಲಾಗಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರು ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ. ಕ್ರಿಕೆಟ್ ಲೋಕವನ್ನೇ ಉತ್ತುಂಗಕ್ಕೆ ಕೊಂಡೊಯ್ದ ಶ್ರೇಯಸ್ಸು ಇವರಿಬ್ಬರಿಗೂ ಇದೆ. ಏಕಕಾಲಕ್ಕೆ ಕ್ರಿಕೆಟ್‌ಗೆ ಎಂಟ್ರಿ ಆಗಿರುವ ದೈತ್ಯ ಪ್ರತಿಭೆಗಳು ಇವತ್ತಿಗೂ ಮುಂದುವರಿದ್ದಾರೆ. ವಿರಾಟ್ ಕೊಹ್ಲಿ ಇತ್ತೀಚೆಗೆ 38ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರೆ, ರೋಹಿತ್ ಶರ್ಮಾಗೆ 39 ವರ್ಷ. ಈಗಲೂ ಈ ದಿಗ್ಗಜರು ಮೈದಾನದಲ್ಲಿ ಇದ್ದಾರೆ ಅಂದರೆ ಎದುರಾಳಿಗಳಿಗೆ ನಡುಕ ಫಿಕ್ಸ್. ಇನ್ನು ಇವರಿಬ್ಬರ ಐಪಿಎಲ್‌ ಕರಿಯರ್‍ ಮತ್ತು ಸ್ಯಾಲರಿ ವಿಚಾರ ಹೀಗಿದೆ..

ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ವಿಭಿನ್ನ ಆರಂಭ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ 2007 ಟಿ-20 ವಿಶ್ವಕಪ್‌ನ ಭಾಗವಾಗಿದ್ದರು. 2008ರಲ್ಲಿ ಹಾಲಿ ಡೆಕ್ಕನ್ ಚಾರ್ಜಸ್‌ ಸುಮಾರು ಮೂರು ಕೋಟಿಗೆ ಖರೀದಿಸಿತ್ತು. ಕೊಹ್ಲಿಯನ್ನ ಆರ್‍‌ಸಿಬಿ 20 ಲಕ್ಷ ರೂಪಾಯಿಗೆ ಖರೀದಿಸಿತ್ತು.

2011ರಲ್ಲಿ ಟರ್ನಿಂಗ್ ಪಾಯಿಂಟ್

2010 ವರೆಗೂ ಸಾಮಾನ್ಯ ಆಟಗಾರರಾಗಿಗೇ ಫ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದ ರೋಹಿತ್ ಮತ್ತು ಕೊಹ್ಲಿಗೆ 2011ರಲ್ಲಿ ಬಿಗ್‌ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ಡೆಕ್ಕನ್ ಚಾರ್ಜರ್ಸ್‌ನಿಂದ ರೋಹಿತ್ ಶರ್ಮಾ ಬರೋಬ್ಬರಿ 9 ಕೋಟಿ ಸೇಲ್ ಆದರು. ಇದರೊಂದಿಗೆ ರೋಹಿತ್ ಶರ್ಮಾ ತಮ್ಮ ಸ್ಯಾಲರಿಯನ್ನ ಶೇಕಡಾ 160ರಷ್ಟು ಹೆಚ್ಚಿಸಿಕೊಂಡರು. ವಿರಾಟ್ ಕೊಹ್ಲಿ 8.16 ಕೋಟಿಗೆ ಉಳಿಸಿಕೊಂಡಿತು.

2013 ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಕೊಹ್ಲಿ ಆರ್‍‌fಸಿಬಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರು. ಒಂದು ವರ್ಷಗಳ ನಂತರ 2014 ರಿಂದ ಆರ್‍‌ಸಿಬಿ ಅಂದ್ರೆ ಕೊಹ್ಲಿ, ಮುಂಬೈ ಇಂಡಿಯನ್ಸ್ ಅಂದ್ರೆ ರೋಹಿತ್ ಶರ್ಮಾ ಎಂಬ ಬ್ರಾಂಡ್ ಕ್ರಿಯೇಟ್ ಮಾಡಿದರು. 2017 ವರೆಗೂ ಇಬ್ಬರು ಸಮಾನ ಸಂಬಳ ಪಡೆದುಕೊಂಡರು.

2022ರಲ್ಲಿ ಕೊಹ್ಲಿ ಸ್ವಯಂಪ್ರೇರಣೆಯಿಂದ ₹2 ಕೋಟಿ ವೇತನ ಕಡಿತ ಮಾಡಿಕೊಂಡರು. ಆದರೆ ರೋಹಿತ್ ₹16 ಕೋಟಿಗೆ ಮುಂದುವರಿದರು. 2024ರ ನಂತರ ರೋಹಿತ್ ಮತ್ತು ವಿರಾಟ್ ಇಬ್ಬರಿಗೂ ಪರಿಸ್ಥಿತಿ ಬದಲಾಯಿತು. ಆರ್‌ಸಿಬಿ 2025ರಲ್ಲಿ ಕೊಹ್ಲಿಯ ವೇತನವನ್ನು ₹15 ಕೋಟಿಯಿಂದ ₹21 ಕೋಟಿಗೆ ಹೆಚ್ಚಿಸಿತು. ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಪಿಎಲ್‌ ಸ್ಯಾಲರಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ವರ್ಷವಿರಾಟ್ ಕೊಹ್ಲಿಯ ಐಪಿಎಲ್ ಸಂಬಳರೋಹಿತ್ ಶರ್ಮಾ ಐಪಿಎಲ್ ಸಂಭಾವನೆ
2026₹ 21 ಕೋಟಿ₹ 16.3 ಕೋಟಿ
2025₹ 21 ಕೋಟಿ (+40%₹ 16.3 ಕೋಟಿ (+2%)
2024₹ 15 ಕೋಟಿ₹ 16 ಕೋಟಿ
2023₹ 15 ಕೋಟಿ₹ 16 ಕೋಟಿ
2022₹ 15 ಕೋಟಿ (-12%)₹ 16 ಕೋಟಿ (+7%)
2021₹ 17 ಕೋಟಿ₹ 15 ಕೋಟಿ
2020₹ 17 ಕೋಟಿ₹ 15 ಕೋಟಿ
2019₹ 17 ಕೋಟಿ₹ 15 ಕೋಟಿ
2018₹ 17 ಕೋಟಿ (+36%₹ 15 ಕೋಟಿ (+20%)
2017₹ 12.5 ಕೋಟಿ (ವಿರಾಟ್ ಕೊಹ್ಲಿ ಸಂಬಳ)₹ 12.5 ಕೋಟಿ (ರೋಹಿತ್ ಸಂಬಳ )
2016₹ 12.5 ಕೋಟಿ₹ 12.5 ಕೋಟಿ
2015₹ 12.5 ಕೋಟಿ₹ 12.5 ಕೋಟಿ
2014₹ 12.5 ಕೋಟಿ (+31%)₹ 12.5 ಕೋಟಿ (+17%)
2013₹ 9.57 ಕೋಟಿ (+9%)₹ 10.64 ಕೋಟಿ (+9%)
2012₹ 8.74 ಕೋಟಿ (+7%)₹ 9.71 ಕೋಟಿ (+7%)
2011₹ 8.16 ಕೋಟಿ (+ 3456%)₹ 9.06 ಕೋಟಿ (+163%)
2010₹ 22.95 ಲಕ್ಷ (-6%)₹ 3.44 ಕೋಟಿ (-6%)
2009₹ 24.4 ಲಕ್ಷ (+21%)₹ 3.66 ಕೋಟಿ (+21%)
2008₹ 20.1 ಲಕ್ಷ₹ 3.01 ಕೋಟಿ

19 ಸೀಸನ್‌ಗಳಲ್ಲಿ ವಿರಾಟ್ ಕೊಹ್ಲಿ ಒಟ್ಟು 232.15 ಕೋಟಿ ಗಳಿಸಿದರೆ, ರೋಹಿತ್ ಶರ್ಮಾ 230. 14 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್‌ಗೆ ಸಿಕ್ಕ ಬೆಂಬಲ ಪಾಂಡ್ಯಗೆ ಯಾಕೆ ಸಿಗಲಿಲ್ಲ? ಅರ್ಹತೆ ಇದ್ದರೂ ಮುಂಬೈ ಅಖಾಡದಲ್ಲಿ ಹಾರ್ದಿಕ್ ಏಕಾಂಗಿಯಾಗಿದ್ದೇಗೆ?
IND vs NZ: ಬೆನ್ ಸ್ಟೋಕ್ಸ್ ದಾಖಲೆ ಮುರಿದ ರಿಷಭ್ ಪಂತ್; WTC ಇತಿಹಾಸದಲ್ಲೇ ಹೊಸ ವಿಶ್ವದಾಖಲೆ ಬರೆದ ವಿಕೆಟ್ ಕೀಪರ್..!