‘ಟ್ರ್ಯಾವಿಸ್ ಹೆಡ್‌ರಂತೆ ಕೊಹ್ಲಿಯೂ 40 ಎಸೆತದಲ್ಲಿ 100 ರನ್ ಸಿಡಿಸುವ ಸಾಮರ್ಥ್ಯವಿದೆ. ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿ, ಮುಕ್ತವಾಗಿ ಸ್ಫೋಟಕ ಆಟವಾಡಲು ಬಿಡಬೇಕು’ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿಶ್ವಕಪ್‌ನಲ್ಲಿ ಅನುಭವಿಗಳ ಜೊತೆ ಯುವ ಆಟಗಾರರ ಸಂಯೋಜನೆ ಇರಬೇಕು. ಬರೀ ಐಪಿಎಲ್‌ನ ಆಟ ನೋಡಿ ಆಯ್ಕೆ ಮಾಡಬಾರದು ಎಂದಿದ್ದಾರೆ.
ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡಿಸಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಟ್ರ್ಯಾವಿಸ್ ಹೆಡ್‌ರಂತೆ ಕೊಹ್ಲಿಯೂ 40 ಎಸೆತದಲ್ಲಿ 100 ರನ್ ಸಿಡಿಸುವ ಸಾಮರ್ಥ್ಯವಿದೆ. ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿ, ಮುಕ್ತವಾಗಿ ಸ್ಫೋಟಕ ಆಟವಾಡಲು ಬಿಡಬೇಕು’ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿಶ್ವಕಪ್‌ನಲ್ಲಿ ಅನುಭವಿಗಳ ಜೊತೆ ಯುವ ಆಟಗಾರರ ಸಂಯೋಜನೆ ಇರಬೇಕು. ಬರೀ ಐಪಿಎಲ್‌ನ ಆಟ ನೋಡಿ ಆಯ್ಕೆ ಮಾಡಬಾರದು ಎಂದಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು ವಿರಾಟ್ ಕೊಹ್ಲಿ 67 ಎಸೆತಗಳನ್ನು ಎದುರಿಸಿ ಶತಕ ಬಾರಿಸಿದ್ದರು. ಕೊಹ್ಲಿ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದರ ಹೊರತಾಗಿಯೂ ದಾದಾ ಇದೀಗ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದು ಅಚ್ಚರಿಗೆ ಕಾರಣವಾಗಿದೆ.
ಅಂಪೈರ್ ಜೊತೆ ವಾಗ್ವಾದ: ವಿರಾಟ್ ಕೊಹ್ಲಿಗೆ ಶೇ.50ರಷ್ಟು ದಂಡ!
ಕೋಲ್ಕತಾ: ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ನೋಬಾಲ್ ತೀರ್ಪು ವಿಚಾರದಲ್ಲಿ ಅಂಪೈರ್ ವಿರುದ್ಧ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದ ಆರ್‌ಸಿಬಿಯ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಐಪಿಎಲ್ ಆಡಳಿ ಮಂಡಳಿ, ‘ಕೊಹ್ಲಿ ಅಂಪೈರ್ ತೀರ್ಪು ಪ್ರಶ್ನಿಸುವ ಮೂಲಕ ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿದೆ’ ಎಂದಿದೆ. ಕೊಹ್ಲಿ ಬ್ಯಾಟಿಂಗ್ ವೇಳೆ ಹರ್ಷಿತ್ ರಾಣಾ ಸೊಂಟದ ಎತ್ತರಕ್ಕೆ ಚೆಂಡು ಎಸೆದಿದ್ದರು. ಆದರೆ ಹರ್ಷಿತ್‌ಗೆ ಕೊಹ್ಲಿ ಕ್ಯಾಚ್ ನೀಡಿದ್ದು, ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ICC T20 World Cup 2024: ಭಾರತ ಸಂಭಾವ್ಯ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಆದರೆ ಚೆಂಡು ಸೊಂಟದ ಮೇಲೆ ಇತ್ತು ಎಂದು ಕೊಹ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಹಾಕ್-ಐ ತಂತ್ರಾಂಶ, 3ನೇ ಅಂಪೈರ್ ಪರಿಶೀಲನೆಯಲ್ಲೂ ಚೆಂಡು ಸೊಂಟದ ಮೇಲೆ ಇದ್ದುದಾಗಿ ಕಂಡುಬಂದಿದ್ದರಿಂದ ಕೊಹ್ಲಿ ಅಂಪೈರ್ ನಿರ್ಧಾರ ಟೀಕಿಸುತ್ತಲೇ ಮೈದಾನ ತೊರೆದಿದ್ದರು.
ಡು ಪ್ಲೆಸಿಗೆ ದಂಡ: ಇದೇ ವೇಳೆ ನಿಧಾನಗತಿ ಬೌಲಿಂಗ್‌ಗಾಗಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಅಂಪೈರ್ ನಿರ್ಧಾರ ಟೀಕಿಸಿದ್ದಕ್ಕೆ ಪಂಜಾಬ್ ನಾಯಕ ಸ್ಯಾಮ್ ಕರ್ರನ್‌ಗೂ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.
‘ನಿಮ್ಮ ವಿಕೆಟ್ ನಾನೇ ತೆಗಿತೀನಿ’: ನರೈನ್‌ರನ್ನು ಕಿಚ್ಚಾಯಿಸಿದ ಕೊಹ್ಲಿ!
ಕೋಲ್ಕತಾ: ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ನ ತಾರಾ ಆಲ್ರೌಂಡರ್ ಸುನಿಲ್ ನರೈನ್‌ರನ್ನು ಕಿಚ್ಚಾಯಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳ ಗಮನ ಸೆಳೆದರು. ನರೈನ್ ಬ್ಯಾಟಿಂಗ್ ಆರಂಭಿಸಲು ಸಜ್ಜಾಗುತ್ತಿದ್ದಂತೆ ಅಂಪೈರ್ ಕೈಗೆ ಕ್ಯಾಪ್ ನೀಡಿ ಬೌಲ್ ಮಾಡಲು ಸಿದ್ಧರಾದ ಕೊಹ್ಲಿ, ‘ನಿಮ್ಮ ವಿಕೆಟ್ ನಾನೇ ತೆಗಿತೀನಿ’ ಎಂದು ನರೈನ್‌ರನ್ನು ಕಿಚ್ಚಾಯಿಸಿದರು. ಈ ಪ್ರಸಂಗ ಸದಾ ಗಂಭೀರವಾಗಿರುವ ನರೈನ್ ಮುಖದಲ್ಲೂ ನಗು ಮೂಡಿತು. ಈ ಸನ್ನಿವೇಶದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.