
ಮುಂಬೈ(ಮೇ.16) ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್‌ಗೆ ರೋಹಿತ ಶರ್ಮಾ ಕೊಡುಗೆ ಅಪಾರ. ಏಕದಿನದಲ್ಲಿ ಟೀಂ ಇಂಡಿಯಾ ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದಿಗ್ಗಜರ ಸಾಲಿನಲ್ಲಿ ರೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಇದೀಗ ರೋಹಿತ್ ಶರ್ಮಾ ಕೊಡುಗೆ ಪರಿಗಣಿಸಿ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಪ್ರೇಕ್ಷಕರ ಸ್ಟ್ಯಾಂಡ್ ಉದ್ಘಾಟನೆಗೊಂಡಿದೆ. ರೋಹಿತ್ ಶರ್ಮಾಗೆ ಗೌರವ ನೀಡುವ ಸಲುವಾಗ ಮುಂಬೈ ಕ್ರಿಕೆಟ್ ಸಂಸ್ಥೆ ಇಂದು ರೋಹಿತ್ ಶರ್ಮಾ ಸ್ಟ್ಯಾಂಡ್ ತೆರೆದಿದೆ. ಖುದ್ದು ರೋಹಿತ್ ಶರ್ಮಾ ಈ ಸ್ಟ್ಯಾಂಡ್ ಉದ್ಘಾಟನೆ ಮಾಡಬೇಕಿತ್ತು. ರೋಹಿತ್ ಶರ್ಮಾ ಕೂಡ ವೇದಿಕೆಯಲ್ಲಿದ್ದರು. ಆದರೆ ಉದ್ಘಾಟನೆ ಮಾಡಲು ರೋಹಿತ್ ಶರ್ಮಾ, ತನ್ನ ಪೋಷಕರನ್ನು ವೇದಿಕೆಗೆ ಆಹ್ವಾನಿಸಿ ಉದ್ಘಾಟನೆ ಮಾಡಿದ ವಿಶೇಷ ಘಟನೆ ನಡೆದಿದೆ.
ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿ ರೋಹಿತ್ ಶರ್ಮಾ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ರೋಹಿತ್ ಶರ್ಮಾರನ್ನು ಸ್ಟ್ಯಾಂಡ್ ಉದ್ಘಾಟಿಸುವಂತೆ ಮನವಿ ಮಾಡಲಾಯಿತು. ಆದರೆ ರೋಹಿತ್ ಶರ್ಮಾ ಉದ್ಘಾಟನೆ ಮಾಡುವ ಬದಲು ತನ್ನ ಪೋಷಕರನ್ನು ವೇದಿಕೆ ಮೇಲ ಆಹ್ವಾನಿಸಿದ್ದಾರೆ. ಇದರ ಜೊತೆಗೆ ಪತ್ನಿ ರಿತಿಕಾ ಸಜ್ದೆಯನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ರೋಹಿತ್ ಶರ್ಮಾ ತಂದೆ ಗುರುನಾಥ್ ಹಾಗೂ ತಾಯಿ ಪೂರ್ಣಿಮಾ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ ಮಾಡಿದ್ದಾರೆ.
ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ ಮಾಡಿ ಮಾತನಾಡಿದ ರೋಹಿತ್ ಶರ್ಮಾ, ಎಲ್ಲರ ಮುಂದೆ ನನಗೆ ಇಷ್ಟು ದೊಡ್ಡ ಗೌರವ ಸಿಗುತ್ತಿರುವುದು ನನ್ನಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.ಪ್ರಮುಖವಾಗಿ ನನ್ನ ಪೋಷಕರ ಎದರು ಈ ಗೌರವ ನನಗೆ ಹೆಚ್ಚು ಖುಷಿ ನೀಡಿದೆ. ನನ್ನ ತಂದೆ ತಾಯಿ, ಪತ್ನಿ, ಮಗಳು, ನನ್ನ ಸಹೋದರ, ಆತನ ಕುಟುಂಬ ಇಲ್ಲಿ ಹಾಜರಿದೆ. ಎಲ್ಲರನ್ನು ನನ್ನ ಕರಿಯರ್‌ಗೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದ ಲೆವಲ್ 3 ಪೆವಿಲಿಯನ್ ನ್ನು ಇದೀಗ ರೋಹಿತ್ ಶರ್ಮಾ ಸ್ಟ್ಯಾಂಡ್ ಆಗಿ ಮಾಡಲಾಗಿದೆ. ಮೇ.21ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. ಈ ಕುರಿತು ಮಾತನಾಡಿದ ರೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಇದೇ ಮೈದಾನದಲ್ಲಿ ಪಂದ್ಯ ಆಡಬೇಕಿದೆ. ಇದು ನನಗೆ ಅತೀವ ಸಂತಸದ ವಿಚಾರವಾಗಿದೆ. ಕಾರಣ ನನ್ನ ಸ್ಟ್ಯಾಂಡ್ ಎದರು ನಾನು ಆಡುತ್ತಿರುವುದು ಅತೀವ ಸಂತೋಷ ನೀಡಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಟೀಂ ಇಂಡಿಯಾಗೆ ಮಹತ್ತರ ಕೊಡುಗೆ ನೀಡಿದ ಮುಂಬೈನ ದಿಗ್ಗಜ ಕ್ರಿಕೆಟಿಗರಿಗೆ ವಾಂಖೆಡೆಯಲ್ಲಿ ಪೆವಿಲಿಯನ್ ಗೌರವ ನೀಡಲಾಗಿದೆ. ರೋಹಿತ್ ಶರ್ಮಾಗೂ ಮೊದಲು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿನು ಮಂಕಡ್ ಹಾಗೂ ದಿಲೀಪ್ ವೆಂಗಸರ್ಕರ್ ಸ್ಟ್ಯಾಂಡ್ ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.