
ಮುಂಬೈ(ಏ.13) ಸೋಲಿನಿಂದ ಹೊರಬಂದಿರುವ ಮುಂಬೈ ಇಂಡಿಯನ್ಸ್ ಇದೀಗ ಸತತ ಗೆಲುವು ಕಾಣುತ್ತಿದೆ. ಆರ್‌ಸಿಬಿ ವಿರುದ್ದದ ಗೆಲವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಸಹಆಟಗಾರನ್ನು ಕಾಲೆಳೆಯುತ್ತಾ ಮಜಾ ಮಾಡುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಬಸ್ ಡ್ರೈವರ್ ಆಗಿದ್ದಾರೆ. ಮುಂಬೈ ತಂಡದ ಬಸ್‌ನ ಡ್ರೈವರ್ ಸೀಟಿನಲ್ಲಿ ಕುಳಿತ ರೋಹಿತ್ ಶರ್ಮಾ ಸಹ ಆಟಗಾರರನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಿಂದ ಹೊಟೆಲ್‌ಗೆ ಮರಳಲು ಆಟಗಾರರಿಗೆ ಬಸ್ ತಯಾರಾಗಿ ನಿಂತಿದೆ. ಎಲ್ಲರ ಮೊದಲು ಹತ್ತಿದ ರೋಹಿತ್ ಶರ್ಮಾ ನೇರವಾಗಿ ಬಸ್ ಡ್ರೈವರ್ ಸೀಟಿನಲ್ಲಿ ಕುಳಿತಿದ್ದಾರೆ. ಬಳಿಕ ಮುಂಬೈ ಇಂಡಿಯನ್ಸ್ ಸಹ ಆಟಗಾರರನ್ನು ಬೇಗನೆ ಬಸ್ ಹತ್ತಲು ಸೂಚಿಸಿದ್ದಾರೆ. ರೋಹಿತ್ ಶರ್ಮಾ ಬಸ್ ಡ್ರೈವರ್ ಸೀಟಿನಲ್ಲಿ ನೋಡುತ್ತಿದ್ದಂತೆ ಕೆಲ ಆಟಗಾರರು ನಗುತ್ತಲೇ ಬಸ್ ಹತ್ತಿದ್ದರೆ, ಮತ್ತೆ ಕೆಲವರು ಹತ್ತಲು ಹಿಂದೇಟು ಹಾಕುವ ಮೂಲಕ ರೋಹಿತ್ ಶರ್ಮಾಗೆ ಕಿಚಾಯಿಸಿದರು.
'ಈ ಇಬ್ಬರು ತುಂಬಾ ಗಲೀಜು': ಟೀಂ ಇಂಡಿಯಾ ಆಟಗಾರರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಡ್ರೈವರ್ ಸೀಟಿನಲ್ಲಿ ನೋಡಿದ ಅಭಿಮಾನಿಗಳು ಬಸ್ ಮುಂಭಾಗಕ್ಕೆ ಆಗಮಿಸಿದ್ದಾರೆ. ಈ ವೇಳೆ ರೋಹಿತ್ ಬದಿಗೆ ಸರಿಯಿರಿ ಈಗ ಹೊರಬೇಕು ಎಂದು ಕೈಸನ್ನೆ ಮಾಡಿದ್ದಾರೆ. ರೋಹಿತ್ ಶರ್ಮಾ ಈ ನಡೆ ಸಹ ಆಟಗಾರರಲ್ಲಿ ನಗು ತರಿಸಿದರೆ, ಅಭಿಮಾನಗಳು ರೋಮಾಂಚನಗೊಂಡಿದ್ದಾರೆ. ಇದೀಗ ಬಸ್ ಡ್ರೈವರ್ ರೋಹಿತ್ ಶರ್ಮಾ ವಿಡಿಯೋ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಕ್ರೀಸಿಗಿಳಿದರೆ ಹೊಡಿಬಡಿ ಆಟ. ಆದರೆ ಆಫ್ ದಿ ಫೀಲ್ಡ್‌ನಲ್ಲಿ ಸಹ ಆಟಗಾರರನ್ನು ಕಾಲೆಳೆಯುತ್ತಾ ಫನ್ ಮಾಡುತ್ತಾರೆ. ತಂಡದ ಯಾವುದೇ ಕಾರ್ಯಕ್ರಮ, ಇಂಡೋರ್ ಗೇಮ್‌ಗಳಲ್ಲಿ ರೋಹಿತ್ ಶರ್ಮ ಇದ್ದರೆ ಅಲ್ಲಿ ಫನ್, ಕಿಚಾಯಿಸುವಿಕೆ, ಕಾಲೆಳೆದುಕೊಳ್ಳುವುದು ಇದ್ದೇ ಇರುತ್ತೆ.
ಮುಂಬೈ ವಿರುದ್ದ ಆರ್‌ಸಿಬಿಗೆ ಟಾಸ್‌ನಲ್ಲೂ ಆಗಿತ್ತಾ ಮೋಸ? ವೈರಲ್ ವಿಡಿಯೋಗೆ ಫ್ಯಾನ್ಸ್ ಉತ್ತರ!
ಇತ್ತೀಚೆಗೆ ಹೋಳಿ ಹಬ್ಬ ಆಚರಣೆ ವೇಳೆ ರೋಹಿತ್ ಶರ್ಮಾ ಗುರುತೇ ಸಿಗದಷ್ಟು ಬಣ್ಣದಲ್ಲಿ ಮುಳುಗಿದ್ದರು. ಕುಟುಂಬ ಹಾಗೂ ಮುಂಬೈ ಇಂಡಿಯನ್ಸ್ ಜೊತೆ ಹೋಳಿ ಹಬ್ಬ ಆಚರಿಸಿದ್ದರು. ಇನ್ನು ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಮೈದಾನದಲ್ಲೂ ದಿನೇಶ್ ಕಾರ್ತಿಕ್ ಸೇರಿದಂತೆ ಕೆಲ ಕ್ರಿಕೆಟಿಗರ ಕಾಲೆಳೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.