RCB ಪಾಲಿಗೆ ತಂಡದ ಬೌಲರ್‌ಗಳೇ ವಿಲನ್..! ಹೀಗಾದ್ರೆ ಕಪ್ ಗೆಲ್ಲೋದು ಹೇಗೆ?

By Naveen Kodase  |  First Published Apr 13, 2024, 1:05 PM IST

ಈ ಬಾರಿಯ IPL ಸಮರದಲ್ಲಿ RCBಯ ಸೋಲಿನ ಯಾತ್ರೆ ಮುಂದುವರಿದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಫಾಫ್ ಡು ಪ್ಲೆಸಿಸ್ ಪಡೆ ಮಕಾಡೆ ಮಲಗಿ, ಸತತ 4ನೇ ಸೋಲು  ಕಂಡಿದೆ. ಆದ್ರೆ, ಈ ಸೋಲುಗಳಿಗೆ ತಂಡದ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ಬೌಲರ್‌ಗಳ ಫ್ಲಾಪ್ ಶೋ RCBಗೆ ಮುಳುವಾಗಿದೆ. 


ಬೆಂಗಳೂರು(ಏ.13) ಒಂದು ಮನೆ ಚೆನ್ನಾಗಿ ನಡೆಯಬೇಕಂದ್ರೆ, ಆ ಮನೆಯ ಯಜಮಾನ ಚೆನ್ನಾಗಿರಬೇಕು. ಎಲ್ಲಾ ಜವಾಬ್ದಾರಿಯನ್ನ ಹೆಗಲ ಮೇಲೆ ಹೊತ್ತು ಸಾಗಬೇಕು. ಇಲ್ಲ ಅಂದ್ರೆ, ಸಂಸಾರ ಸರಿಯಾಗಿರಲ್ಲ. ಅದರಂತೆ IPLನಲ್ಲಿ RCB ಕಥೆಯಾಗಿದೆ. ಅಷ್ಟಕ್ಕೂ ಇವ್ರು ಏನ್ ಹೇಳ್ತಿದ್ದಾರೆ ಅಂತ ತಲೆಕೆಡಿಕೊಳ್ತಿದ್ದಿರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ..!! 

ಆರ್‌ಸಿಬಿ ತಂಡದಲ್ಲಿರುವಂತ ಕಳಪೆ ಬೌಲಿಂಗ್ ಅಟ್ಯಾಕ್ ಬೇರಲ್ಲೂ ಇಲ್ಲ..! 

Latest Videos

undefined

ಈ ಬಾರಿಯ IPL ಸಮರದಲ್ಲಿ RCBಯ ಸೋಲಿನ ಯಾತ್ರೆ ಮುಂದುವರಿದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಫಾಫ್ ಡು ಪ್ಲೆಸಿಸ್ ಪಡೆ ಮಕಾಡೆ ಮಲಗಿ, ಸತತ 4ನೇ ಸೋಲು  ಕಂಡಿದೆ. ಆದ್ರೆ, ಈ ಸೋಲುಗಳಿಗೆ ತಂಡದ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ಬೌಲರ್‌ಗಳ ಫ್ಲಾಪ್ ಶೋ RCBಗೆ ಮುಳುವಾಗಿದೆ. 

ಪ್ರತಿ ಪಂದ್ಯದಲ್ಲೂ ಅದೇ ರಾಗ, ಅದೇ ಹಾಡು..! 

ಯೆಸ್, RCBಯ ಸೋಲುಗಳಲ್ಲಿ ಬೌಲರ್‌ಗಳಿಗೆ ಸಿಂಹಪಾಲು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇವ್ರು ನೆಟ್ಟಗೆ ಆಡಿದ್ರೆ RCB ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಒಂದು ಪಂದ್ಯವಲ್ಲ, ಈವರೆಗೂ ಆಡಿರೋ 5 ಪಂದ್ಯಗಳಲ್ಲೂ ಅದೇ ರಾಗ. ಅದೇ ಹಾಡು!  ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲ್ಲ, ಮಿಡಲ್ ಓವರ್‌ಗಳಲ್ಲಿ ವೇರಿಯೇಷನ್ಸ್ ಇಲ್ಲ, ಲೈನ್ ಆ್ಯಂಡ್ ಲೆಂಥ್ ಮೇಲೆ ಹಿಡಿತವಿಲ್ಲ, ಯಾರ್ಕರ್ ಹಾಕಲ್ಲ. ಇಂತಹ ಬೌಲಿಂಗ್ ಲೈನ್ ಅಪ್ ಇಟ್ಟು ಯಾವ ತಂಡವೂ  ಕಪ್ ಗೆಲ್ಲಲು ಸಾಧ್ಯವಿಲ್ಲ. 

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ RCB ಬೌಲರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿತ್ತು. 198 ರನ್‌ಗಳ ಗುರಿಯನ್ನ  ಮುಂಬೈ ಕೇವಲ 15.3 ಓವರ್ಗಳಲ್ಲಿ ಚೇಸ್ ಮಾಡಿದ್ದೇ ಇದಕ್ಕೆ ಸಾಕ್ಷಿ..! ಯಾವುದೇ ಹಂತದಲ್ಲೂ ಮುಂಬೈ ಬ್ಯಾಟರ್‌ಗಳಿಗೆ RCBಯ ಬೌಲಿಂಗ್ ಅಟ್ಯಾಕ್ ಸವಾಲು ಎನಿಸಲೇ ಇಲ್ಲ. ಇದ್ರಿಂದ ಮುಂಬೈ ಬ್ಯಾಟರ್ಸ್ ಬೌಂಡರಿ ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸಿದ್ರು. 

ಡು ಪ್ಲೆಸಿಸ್‌ ಪಡೆಯ ಮೇನ್ ವಿಲನ್ ಮೊಹಮ್ಮದ್ ಸಿರಾಜ್..!

ಯೆಸ್, ಬೌಲಿಂಗ್ ಯೂನಿಟ್ನಲ್ಲಿ RCBಯ ಮೇನ್ ವಿಲನ್ ಅಂದ್ರೆ ಅದು ಮೊಹಮ್ಮದ್ ಸಿರಾಜ್. ಹೇಳಿಕೊಳ್ಳೋಕೆ ತಂಡದ ಮೇನ್ ಬೌಲರ್. ಆದ್ರೆ, ಬೌಲಿಂಗ್ ಮಾತ್ರ ಪಾರ್ಟ್‌ಟೈಮ್‌ ಬೌಲರ್‌ಗಿಂತ ಕಡೆ. ಪಿಚ್ ಸ್ವಿಂಗ್ಗೆ ಹೆಲ್ಪ್ ಆದ್ರೆ ಮಾತ್ರ ಒಂದೆರೆಡು ವಿಕೆಟ್. ಇಲ್ಲ ಅಂದ್ರೆ , ಎದುರಾಳಿಗಳ ಪಾಲಿಗೆ ರನ್ಮಷಿನ್. ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಪಂದ್ಯ ಮುಂಬೈ ಪರ ವಾಲಿದ್ದೇ ಸಿರಾಜ್ ಎಸೆದ 5ನೇ ಓವರ್ನಲ್ಲೆ 23 ರನ್ ಹರಿದು ಬಂದ್ವು. ಅಲ್ಲಿಗೆ ಮುಂಬೈಗೆ ಗೆಲುವಿನ ಬಾಗಿಲು ಓಪನ್ ಆಯ್ತು. 

ಮುಂಬೈ ವಿರುದ್ಧ ಸೋತ್ರೂ, ಫ್ಯಾನ್ಸ್ ಮನಗೆದ್ದ ಕೊಹ್ಲಿ..! ಕೊಹ್ಲಿಯ ಒಂದೇ ಮಾತಿನಿಂದ ಮುಂಬೈ ಫ್ಯಾನ್ಸ್ ಸೈಲೆಂಟ್..!

ಇದೊಂದು ಪಂದ್ಯವಲ್ಲ, ಬೇಱವ ಪಂದ್ಯದಲ್ಲೂ ಸಿರಾಜ್ ಇಂಪ್ಯಾಕ್ಟ್ಫುಲ್ ಫರ್ಪಾಮೆನ್ಸ್ ನೀಡಿಲ್ಲ. ಟೂರ್ನಿಯಲ್ಲಿ ಈವರೆಗೂ 6 ಪಂದ್ಯಗಳನ್ನಾಡಿ, 10.40ರ ಎಕಾಮಿನಿಯಲ್ಲಿ 229 ರನ್ ನೀಡಿದ್ದಾರೆ. ಕೇವಲ 4 ವಿಕೆಟ್ ಪಡೆದುಕೊಂಡಿದ್ದಾರೆ. 

ಇಂತಹ ಬೌಲರ್ T20 ವಿಶ್ವಕಪ್ ತಂಡಕ್ಕೆ ಬೇಕಾ..? 

IPL ಮುಗಿದ ನಂತರ ಟಿ20 ವಿಶ್ವಕಪ್ ನಡೆಯಲಿದ್ದು, ಸಿರಾಜ್ ಟೀಂ ಇಂಡಿಯಾ ಆಯ್ಕೆಯ ರೇಸ್ನಲ್ಲಿದ್ದಾರೆ. ಆದ್ರೆ, ಸದ್ಯದ ಅವ್ರ ಪರ್ಫಾಮೆನ್ಸ್ ನೋಡಿದ್ರೆ, ಖಂಡಿತ ಅವರು ತಂಡಕ್ಕೆ ಬೇಡ ಅನ್ನೋ ಮಾತುಗಳು ಕೇಳಿಬರ್ತಿವೆ. ಕಂಡೀಷನ್ಸ್ ಸಪೋರ್ಟ್ ಮಾಡಿದ್ರೆ ಮಾತ್ರ, ಮಿಂಚೋ ಬೌಲರ್ನಿಂದ ತಂಡಕ್ಕೆ ಯಾವುದೇ ಯಶಸ್ಸು ಸಿಗೋದಿಲ್ಲ. ಹಾಗಂತ, ಸಿರಾಜ್ ಕಥೆ ಇಲ್ಲಿಗೆ ಮುಗಿದೋಯ್ತು ಅಂತ ನಾವೇಳ್ತಿಲ್ಲ. ಮುಂದಿನ ಪಂದ್ಯಗಳಲ್ಲಿ ಈ ಹೈದ್ರಾಬಾದ್ ಎಕ್ಸ್ಪ್ರೆಸ್ ತನ್ನ ತಾಕತ್ತು ಪ್ರೂವ್ ಆಡಲಿ, ಆ ಮೂಲಕ ತನ್ನ ವಿರುದ್ಧದ ಟೀಕೆಗಳಿಗೆ ಉತ್ತರಿಸಲಿ ಅನ್ನೋದ ನಮ್ಮ ಆಶಯ. 

ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಪತ್ನಿ ಸಂಜನಾ

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!