
ಬೆಂಗಳೂರು: ಟೀಂ ಇಂಡಿಯಾ ಕೋಚ್ ಯಾರು ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಆನೌನ್ಸ್ ಆಗಲಿದೆ. ಆಗ್ಲೇ ಇಬ್ಬರು ಆಟಗಾರರಿಗೆ ಭಯ ಶುರುವಾಗಿದೆ. ಯಾಕಂದ್ರೆ ಆತ ಭಾರತಕ್ಕೆ ಕೋಚ್ ಆದರೆ ಇವರಿಬ್ಬರ ಕೆರಿಯರ್ ಕ್ಲೋಸ್ ಆಗಲಿದೆ. ಯಾರು ಆ ಆಟಗಾರರು ಅನ್ನೋದನ್ನ ಹೇಳ್ತೀವಿ ನೋಡಿ.
ರೋಹಿತ್-ವಿರಾಟ್ ಟಿ20 ಕೆರಿಯರ್ ಕ್ಲೋಸ್..!
2007ರ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿಲ್ಲ. 17 ವರ್ಷಗಳ ನಂತ್ರ ಮತ್ತೊಂದು ಟಿ20 ವರ್ಲ್ಡ್‌ಕಪ್ ಗೆಲ್ಲಲು ಭಾರತ ಎದುರು ನೋಡ್ತಿದೆ. ಇನ್ನು ತಂಡದಲ್ಲಿರುವ ಇಬ್ಬರು ಸೀನಿಯರ್ ಪ್ಲೇಯರ್ಸ್‌ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವ ಒತ್ತಡದಲ್ಲಿದ್ದಾರೆ. ಈ ವರ್ಲ್ಡ್‌ಕಪ್ ಬಳಿಕ ಅವರು ರಿಟೈರ್ಡ್ ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೆ ಆ ಒಂದು ಬೆಳವಣಿಗೆ ನೋಡಿದ್ರೆ ಈ ವಿಶ್ವಕಪ್ ನಂತರ ಟಿ20 ಕ್ರಿಕೆಟ್ ಕೆರಿಯರ್ ಕ್ಲೋಸ್ ಆಗಲಿದೆ.
ಗೌತಮ್ ಗಂಭೀರ್, ಟೀಂ ಇಂಡಿಯಾ ಕೋಚ್ ಆಗೋದು ಹೆಚ್ಚುಕಮ್ಮಿ ಕನ್ಫರ್ಮ್. ಗೌತಿ ಆಗ್ಲೇ ಮೂರು ಮಾದರಿಗೆ ಮೂರು ತಂಡ. ಮೂರು ಮಾದರಿಗೆ ಮೂವರು ನಾಯಕರು. ಹೀಗೆ ಅನೇಕ ಪ್ಲಾನ್ಗಳೊಂದಿಗೆ ಟೀಂ ಇಂಡಿಯಾಗೆ ಕೋಚ್ ಆಗಿ ಎಂಟ್ರಿಕೊಡು ಸಿದ್ದತೆ ಮಾಡಿಕೊಳ್ತಿದ್ದಾರೆ. ಸದ್ಯದ ಗಂಭೀರ್ ಟಾರ್ಗೆಟ್, 2026ರಲ್ಲಿ ಭಾರತದಲ್ಲಿ ನಡೆಯುವ ಟಿ20 ವರ್ಲ್ಡ್‌ಕಪ್. ಹಾಗಾಗಿ ಅವರು ಆಗ್ಲೇ ಯಂಗ್‌ಸ್ಟರ್ಗಳ ಮೇಲೆ ಕಣ್ಣಿಟ್ಟಿದ್ದಾರೆ. ಗೌತಿ ಕೋಚ್ ಆಗಿ ಎಂಟ್ರಿ ಕೊಡುತ್ತಿದಂತೆ ವಿರಾಟ್-ರೋಹಿತ್ ಟಿ20 ಟೀಮ್‌ನಿಂದ ಎಕ್ಸೀಟ್ ಆಗೋದು ಪಕ್ಕಾ.
T20 World Cup 2024: ಇಂಗ್ಲೆಂಡ್‌ಗೆ ಇಂದು ಯುಎಸ್ ಸವಾಲು..!
ವಿಶ್ವಕಪ್ ಬಳಿಕ ರೋಹಿತ್ ಕೆರಿಯರ್ ಕ್ಲೋಸ್ ಆಗುತ್ತಾ..?
ಯಂಗ್ ಸ್ಟರ್ಸ್‌ಗೆ ಅವಕಾಶ ಕೊಡುವ ದೃಷ್ಟಿಯಿಂದ ವಿರಾಟ್ ಕೊಹ್ಲಿ ಅವರನ್ನ ಟಿ20ಯಿಂದ ಡ್ರಾಪ್ ಮಾಡಿದ್ರೂ ಟೆಸ್ಟ್ ಮತ್ತು ಒನ್ಡೇ ಟೀಮ್‌ನಲ್ಲಿ ಇರ್ತಾರೆ. ಆದ್ರೆ ರೋಹಿತ್ ಶರ್ಮಾ ಅವರನ್ನ ಮಾತ್ರ ವೈಟ್ ಬಾಲ್ ಕ್ರಿಕೆಟ್ನಿಂದಲೇ ದೂರ ಮಾಡೋ ಪ್ಲಾನ್ನಲ್ಲಿದ್ದಾರೆ ಗಂಭೀರ್. ಹೌದು, ಫಾರ್ಮ್, ವಯಸ್ಸು ಮತ್ತು ಫಿಟ್ನೆಸ್ ಮೂರು ಕೈಕೊಟ್ಟಿದೆ. ಹಾಗಾಗಿ ರೋಹಿತ್ ನಿವೃತ್ತಿ ಸಮಯ ಹತ್ತಿರವಾಗ್ತಿದೆ. ಟೆಸ್ಟ್‌ನಲ್ಲೂ ಅವರ ಪರ್ಫಾಮೆನ್ಸ್ ಅಷ್ಟಕಷ್ಟೆ. ಅಲ್ಲಿಗೆ ಗಂಭೀರ್ ಎಂಟ್ರಿ ಆದ್ಮೇಲೆ ರೋಹಿತ್ ಎಕ್ಸೀಟ್ ಗ್ಯಾರಂಟಿ.
ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡ್ತಾರಾ ಸೀನಿಯರ್ಸ್..?
ವಿರಾಟ್-ರೋಹಿತ್‌ಗೆ ಇದು ಕೊನೆ ಟಿ20 ವಿಶ್ವಕಪ್. ಈ ಇಬ್ಬರು ಸೀನಿಯರ್ಸ್ ಭಾರತಕ್ಕೆ ಮತ್ತೊಂದು ವರ್ಲ್ಡ್‌ಕಪ್ ಗೆಲ್ಲಿಸಿಕೊಡ್ತಾರಾ..? 17 ವರ್ಷಗಳ ಬಳಿಕ ಭಾರತ ಮತ್ತೆ ವಿಶ್ವಕಪ್ ಎತ್ತಿ ಹಿಡಿಯುತ್ತಾ ಅನ್ನೂ ಕುತೂಹಲವಿದೆ. ಆದ್ರೆ ಇಬ್ಬರು ಕಳಪೆ ಫಾರ್ಮ್ನಲ್ಲಿದ್ದಾರೆ. ಇದೇ ಟೀಂ ಇಂಡಿಯಾಗೆ ಚಿಂತೆಗೀಡು ಮಾಡಿರೋದು. ಸೀನಿಯರ್ಸ್ ಅಲ್ವಾ..? ಯಾವಾಗ ಬೇಕಿದ್ರೂ ಫಾರ್ಮ್ಗೆ ಮರಳಬಹುದು.
T20 World Cup 2024: ಬಲಿಷ್ಠ ಆಸ್ಟ್ರೇಲಿಯಾಗೆ ಸೋಲುಣಿಸಿ ಇತಿಹಾಸ ಬರೆದ ಆಫ್ಘಾನಿಸ್ತಾನ..!
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರು ಟಿ20 ಕ್ರಿಕೆಟ್ನಲ್ಲಿ 4 ಸಾವಿರ ರನ್ ಹೊಡೆದಿದ್ದಾರೆ. ಇವರಿಬ್ರನ್ನ ಬಿಟ್ರೆ ಬಾಬರ್ ಅಜಂ ಮಾತ್ರ ಈ ಸಾಧನೆ ಮಾಡಿರೋದು. ಈಗ ಇವರಿಬ್ಬರೇ ಟಿ20ಯಲ್ಲಿ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಟಾಪ್-2ನಲ್ಲಿರೋದು. ಆದ್ರೆ ಟಿ20 ವಿಶ್ವಕಪ್ ಬಳಿಕ ಈ ರೆಕಾರ್ಡ್ ಅನ್ನ ಬಾಬರ್ ಅಜಂ ಮುರಿದು ಹಾಕಲಿದ್ದಾರೆ. ಒಟ್ನಲ್ಲಿ ಇಬ್ಬರು ಸೀನಿಯರ್ಸ್ ಟಿ20 ಕೆರಿಯರ್ ಕ್ಲೋಸ್ ಆಗ್ತಿದೆ. ಇದು ಬೇಸರದ ವಿಷ್ಯವಾದ್ರೂ 2026ರ ವಿಶ್ವಕಪ್ ದೃಷ್ಟಿಯಿಂದ ಉತ್ತಮ ಬೆಳವಣಿಗೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.