INDvsENG ಟೆಸ್ಟ್: 69 ವರ್ಷದ ದಾಖಲೆ ಮುರಿದ ರೋಹಿತ್ ಹಾಗೂ ಕೆಎಲ್ ರಾಹುಲ್ ಜೋಡಿ!

By Suvarna NewsFirst Published Aug 12, 2021, 9:28 PM IST
Highlights
  • ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಭಾರತದ ಆರಂಭಿಕ ಜೋಡಿ
  • ಲಾರ್ಡ್ಸ್ ಮೈದಾನದಲ್ಲಿ ಆರಂಭಿಕರ ಜೊತೆಯಾಟದ ದಾಖಲೆ
  • ಮಂಕಡ್ ಹಾಗೂ ಪಂಕಜ್ ದಾಖಲೆ ಬ್ರೇಕ್

ಲಂಡನ್(ಆ.12): ಭಾರತ  ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ದಾಖಲೆ ನಿರ್ಮಾಣವಾಗಿದೆ. ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಈ ದಾಖಲೆ ನಿರ್ಮಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಬರೋಬ್ಬರಿ 69 ವರ್ಷದ ದಾಖಲೆ ಪುಡಿಯಾಗಿದೆ.

ಸತತ 2 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಹಾಫ್‌ಸೆಂಚುರಿ ಆಸರೆ!

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ಇಳಿದಿತ್ತು. ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 126 ರನ್ ಜೊತೆಯಾಟ ನೀಡಿದರು. ಇದರೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಭಾರತ 69 ವರ್ಷದ ಹಿಂದಿನ ದಾಖಲೆ ಜೊತೆಯಾಟ ಮುರಿದಿದೆ.

1952ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಶತಕದ ಜೊತೆಯಾಟ ಆಡಿತ್ತು. ಇದಾದ ಬಳಿಕ ಪ್ರತಿ ಪ್ರವಾಸದಲ್ಲಿ ಟೀಂ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ಶತಕದ ಜೊತೆಯಾಟ ಮೂಡಿ ಬಂದಿರಲಿಲ್ಲ. 1952ರಲ್ಲಿ ಆರಂಭಿಕರಾದ ವಿನು ಮಂಕಡ್ ಹಾಗೂ ಪಂಕಜ್ ರಾಯ್ 106 ರನ್ ಜೊತೆಯಾಟ ನೀಡಿದ್ದರು.

INDvsENG:ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ, ಶತಕ ದಾಟಿದ ಟೀಂ ಇಂಡಿಯಾ!

ಇದೀಗ ರೋಹಿತ್ ಹಾಗೂ ರಾಹುಲ್ 126 ರನ್ ಜೊತೆಯಾಟ ನೀಡಿದ್ದಾರೆ. ರೋಹಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 83 ರನ್ ಸಿಡಿಸಿ ಔಟಾದರು. ಕೇವಲ 17 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಇತ್ತ ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

click me!