INDvsENG:ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ, ಶತಕ ದಾಟಿದ ಟೀಂ ಇಂಡಿಯಾ!

By Suvarna NewsFirst Published Aug 12, 2021, 7:29 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ
  • ಮಳೆಯಿಂದ ಅಲ್ಪ ವಿಳಂಬವಾಗಿ ಆರಂಭಗೊಂಡ ಪಂದ್ಯ
  • ರೋಹಿತ್ ಶರ್ಮಾ ಹಾಫ್ ಸೆಂಚುರಿ, ಆರಂಭಿಕರ ಹೋರಾಟ

ಲಂಡನ್(ಆ.12): ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ. ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದ್ದಾರೆ. ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

INDvsENG 2ನೇ ಟೆಸ್ಟ್: ಮೊದಲ ದಿನದಾಟ ಆರಂಭಕ್ಕೂ ಮಳೆ ಅಡ್ಡಿ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ರೋಹಿತ್ ಹಾಗೂ ರಾಹುಲ್ ಎಚ್ಚರಿಕೆ ಆರಂಭ ನೀಡಿದರು. ಇದು ಇಂಗ್ಲೆಂಡ್ ಲೆಕ್ಕಾಚರ ಉಲ್ಟಾ ಮಾಡಿತು. ಲಾರ್ಡ್ಸ್ ಮೈದಾನದ ಲಾಭ ಪಡೆಯಲು ಇಂಗ್ಲೆಂಡ್ ಯತ್ನಿಸಿದರು ಪ್ರಯೋಜನವಾಗಲಿಲ್ಲ. 

ರೋಹಿತ್ ಶರ್ಮಾ ಹಾಫ್ ಸೆಂಚುರಿ ಪೂರೈಸಿದರು. ಇತ್ತ ಕೆಎಲ್ ರಾಹುಲ್ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜೊತೆಯಾಟದಿಂದ ಟೀಂ ಇಂಡಿಯಾ 100 ರನ್ ಗಡಿ ದಾಟಿದೆ. ರೋಹಿತ್ ಶರ್ಮಾ 75 ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದು, ಮೊದಲ ದಿನದಲ್ಲಿ ಭಾರತದ ಉತ್ತಮ ಮೊತ್ತ ಪೇರಿಸುವ ವಿಶ್ವಾಸಲ್ಲಿದೆ.

INDvsENG 2ನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್; ಟೀಂ ಇಂಡಿಯಾದಲ್ಲಿ 1 ಬದಲಾವಣೆ!

2ನೇ ಪಂದ್ಯದ ಮೊದಲ ದಿನವೇ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯ ಕೊಂಚ ವಿಳಂಬವಾಗಿ ಆರಂಭಗೊಂಡಿತ್ತು. ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿತ್ತು. ಅಂತಿಮ ದಿನದಾಟ ರದ್ದಾಗುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿದೆ. ಶಾರ್ದೂಲ್ ಠಾಕೂರ್ ಬದಲು ಇಶಾಂತ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. 

click me!