Road Safety Cricket ಫೋಟೋ ಹಂಚಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದ ತೆಂಡುಲ್ಕರ್, ಫ್ಯಾನ್ಸ್ ತಬ್ಬಿಬ್ಬು!

By Suvarna NewsFirst Published Sep 15, 2022, 8:11 PM IST
Highlights

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಶೇಷ ಫೋಟೋ ಒಂದನ್ನು ಹಂಚಿಕೊಂಡು ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದ್ದಾರೆ. ಸಚಿನ್ ಪ್ರಶ್ನೆಗೆ ಉತ್ತರಿಸಲು ಅಭಿಮಾನಿಗಳು ಹರಸಾಹಸ ಪಡಬೇಕಾಗಿದೆ.

ಕಾನ್ಪುರ(ಸೆ.15):  ರಸ್ತೆ ಸುರಕ್ಷತಾ ಟೂರ್ನಿಯಲ್ಲಿ ಮಾಜಿ ದಿಗ್ಗಜ ಕ್ರಿಕೆಟಿಗರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸದ್ಯ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಎರಡನೇ ಆವೃತ್ತಿಯ ರೋಡ್ ಸೇಫ್ಟಿ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶೇನ್ ವ್ಯಾಟ್ಸನ್, ಬ್ರೆಟ್ ಲೀ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ. ಮೊದಲ ಹಂತದ ಪಂದ್ಯಗಳನ್ನು ಮುಗಿಸಿ ಕಾನ್ಪುರದಿಂದ ಇಂದೋರ್‌ಗೆ ದಿಗ್ಗಜರು ವಿಮಾನ ಹತ್ತಿದ್ದಾರೆ.  ಈ ವೇಳೆ ಸಚಿನ್ ತೆಂಡುಲ್ಕರ್ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಗಿದ್ದರೆ ಅಭಿಮಾನಿಗಳು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಜೊತೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಚಿತ್ರದಲ್ಲಿ ಎಷ್ಟು ಅಂತಾರಾಷ್ಟ್ರೀಯ ರನ್ ಹಾಗೂ ವಿಕೆಟ್‌ಗಳಿವೆ ಎಂದು ಸಚಿನ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ಹರಸಾಹಸ ಪಡಬೇಕಾಗಿದೆ.

ತೆಂಡುಲ್ಕರ್(Sachin Tendulkar) ಹಂಚಿಕೊಂಡ ಫೋಟೋದಲ್ಲಿ ಮೊದಲ ಸಾಲಿನಲ್ಲಿ ಸಚಿನ್ ಹಾಗೂ ಯುವರಾಜ್ ಸಿಂಗ್(Yuvaraj Singh) ಕುಳಿತಿದ್ದಾರೆ. ಇನ್ನು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ದಿಗ್ಗಜ ಕ್ರಿಕೆಟಿಗರು ಇದೇ ವಿಮಾನದಲ್ಲಿದ್ದಾರೆ. ರೋಡ್ ಸೇಫ್ಟಿ ಟೂರ್ನಿಯಲ್ಲಿ(Road Safety World Series season 2) ಪಾಲ್ಗೊಂಡಿರುವ 8 ತಂಡದ ಕ್ರಿಕೆಟಿಗರ(Cricket) ಫೋಟೋವನ್ನು ಸಚಿನ್ ಹಂಚಿಕೊಂಡಿದ್ದಾರೆ. ಕಾನ್ಪುರದಲ್ಲಿ ಮೊದಲ ಹಂತದ ಪಂದ್ಯಗಳನ್ನು ಮುಗಿಸಿದ ರೋಡ್ ಸೇಫ್ಟಿಟೂರ್ನಿಯ ತಂಡಗಳು ಇದೀಗ ಇಂದೋರ್‌ನಲ್ಲಿ ಪಂದ್ಯ ಆಡಲು ಬಂದಿಳಿದೆ. ಇಂದೋರ್‌ನಲ್ಲಿನ ಪಂದ್ಯಗಳನ್ನು ಮುಗಿಸಿ ಡೆಹ್ರಡೂನ್‌ಗೆ ತೆರಳಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ರಾಯ್‌ಪುರದಲ್ಲಿ ಆಯೋಜಿಸಲಾಗಿದೆ.

ಸಚಿನ್ ತೆಂಡುಲ್ಕರ್‌ಗೆ ಎಲ್ಲವೂ ಗೊತ್ತಿದೆ, ಆದ್ರೆ ಯಾರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ: ವಿನೋದ್ ಕಾಂಬ್ಳಿ

ಸಚಿನ್ ಸಾಮಾಜಿಕ ಜಾಲತಾಣದಲ್ಲಿ(Social Media) ಕೇಳಿದ ಪ್ರಶ್ನೆಗೆ ಸುಲಭವಾಗಿ ಉತ್ತರಿಸುವುದು ಕಷ್ಟ. ಹೀಗಾಗಿ ಅಭಿಮಾನಿಗಳು ಗುಡ್ ಲಕ್, ಗಾಡ್ ಆಫ್ ಕ್ರಿಕೆಟ್, ಲವ್ ಯೂ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದಕ್ಕೆ ಕೆಲ ಕಾರಣಗಳೂ ಇವೆ. ಈ ಫೋಟೋದಲ್ಲಿ ಹಲವು ದಿಗ್ಗಜರ ಫೋಟೋಗಳು ಅಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಗುರುತಿಸಿ ಅಂತಾರಾಷ್ಟ್ರೀಯ ವಿಕೆಟ್ ಹಾಗೂ ರನ್ ಲೆಕ್ಕಹಾಕುವುದು ಮತ್ತೂ ಸವಾಲಿನ ಕೆಲಸವಾಗಿದೆ.

 

Can you tell me the number of international runs and wickets in these pictures? ✈️ 📸 🏏 pic.twitter.com/EGednbOUkC

— Sachin Tendulkar (@sachin_rt)

 

ಇಂಡಿಯಾ ಲೆಜೆಂಡ್(India Legends Team) ತಂಡವನ್ನು ಸಚಿನ್ ತೆಂಡುಲ್ಕರ್ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ ತಂಡ ಸೌತ್ ಆಫ್ರಿಕಾ(South Africa Legends) ವಿರುದ್ದ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ 61 ರನ್ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಸಚಿನ್ ನೇತೃತ್ವದ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ ತಂಡದ ವಿರುದ್ದ ಸೆಣಸಾಡಬೇಕಿತ್ತು. ಆದರೆ ಮಳೆಯಿಂದ ಪಂದ್ಯ ರದ್ದಾಗಿತ್ತು. 

click me!