ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಅನ್‌ಕ್ಯಾಪ್ಡ್ ಪ್ಲೇಯರ್ಸ್..!

Published : Apr 03, 2024, 02:50 PM IST
ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಅನ್‌ಕ್ಯಾಪ್ಡ್ ಪ್ಲೇಯರ್ಸ್..!

ಸಾರಾಂಶ

ಐಪಿಎಲ್ ಆರಂಭವಾಗಿ 10 ದಿನ ಕಳೆದಿದೆ.. 15 ಪಂದ್ಯಗಳು ಮುಗಿದಿವೆ. ಈ 15 ಮ್ಯಾಚ್ನಲ್ಲಿ ಸ್ಟಾರ್ ಪ್ಲೇಯರ್ಗಳಿಗಿಂತ ಮಿಂಚಿರುವುದು ಅನ್ಕಾಪ್ಡ್ ಪ್ಲೇಯರ್ಸ್. ಅಂದ್ರೆ ಅವರಿನ್ನೂ ಇಂಟರ್ ನ್ಯಾಷನಲ್ ಮ್ಯಾಚ್ ಆಡದೆ ಇರೋರು. ಕಳೆದ 15 ಪಂದ್ಯಗಳನ್ನೊಮ್ಮೆ ಕಣ್ಣಾಡಿಸಿ.. ಅಲ್ಲಿ ಯುವ ಆಟಗಾರರ ದರ್ಬಾರ್ ನೋಡಬಹುದು. ಆ ಯಂಗ್ ಪ್ಲೇಯರ್ಸ್ ಇಲ್ಲಿದ್ದಾರೆ ನೋಡಿ.

ಬೆಂಗಳೂರು: ಈ ಸೀಸನ್ ಐಪಿಎಲ್ನಲ್ಲಿ ಅನ್ಕಾಪ್ಡ್ ಪ್ಲೇಯರ್ಸ್ ಮಿಂಚುತ್ತಿದ್ದಾರೆ. ಸ್ಟಾರ್ ಪ್ಲೇಯರ್ಸ್ ಸೈಲೆಂಟಾಗಿದ್ದರೆ, ಯಂಗ್ ಪ್ಲೇಯರ್ಸ್ ಆರ್ಭಟಿಸುತ್ತಿದ್ದಾರೆ. ಕಳೆದ 15 ಪಂದ್ಯದಲ್ಲಿ ಯುವ ಆಟಗಾರರದ್ದೇ ಕಾರುಬಾರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅವರು ಕಮಾಲ್ ಮಾಡ್ತಿದ್ದಾರೆ. ಆ ಪ್ಲೇಯರ್ಸ್ ಯಾರು ಅನ್ನೋದನ್ನ ನೀವೇ ನೋಡಿ.

ವಿಕೆಟ್ ಬೇಟೆಯಲ್ಲೂ ಮುಂದು, ರನ್ ಗಳಿಕೆಯಲ್ಲೂ ಮುಂದು..!

ಐಪಿಎಲ್ ಆರಂಭವಾಗಿ 10 ದಿನ ಕಳೆದಿದೆ.. 15 ಪಂದ್ಯಗಳು ಮುಗಿದಿವೆ. ಈ 15 ಮ್ಯಾಚ್ನಲ್ಲಿ ಸ್ಟಾರ್ ಪ್ಲೇಯರ್ಗಳಿಗಿಂತ ಮಿಂಚಿರುವುದು ಅನ್ಕಾಪ್ಡ್ ಪ್ಲೇಯರ್ಸ್. ಅಂದ್ರೆ ಅವರಿನ್ನೂ ಇಂಟರ್ ನ್ಯಾಷನಲ್ ಮ್ಯಾಚ್ ಆಡದೆ ಇರೋರು. ಕಳೆದ 15 ಪಂದ್ಯಗಳನ್ನೊಮ್ಮೆ ಕಣ್ಣಾಡಿಸಿ.. ಅಲ್ಲಿ ಯುವ ಆಟಗಾರರ ದರ್ಬಾರ್ ನೋಡಬಹುದು. ಆ ಯಂಗ್ ಪ್ಲೇಯರ್ಸ್ ಇಲ್ಲಿದ್ದಾರೆ ನೋಡಿ.

ಬ್ಯಾಟಿಂಗ್‌ನಲ್ಲಿ ಪರಾಗ್ ಪರಾಕ್ರಮ..!

ಅಸ್ಸಾಂನ ಟಾಪ್ ಆರ್ಡರ್ ಬ್ಯಾಟರ್ ರಿಯಾನ್ ಪರಾಗ್ ಯಾರಿಗೆ ಗೊತ್ತಿಲ್ಲ ಹೇಳಿ. ಆಡಿದಕ್ಕಿಂತ ಶೋ ಕೊಟ್ಟಿದ್ದೇ ಜಾಸ್ತಿ. ಆದ್ರೆ ಈ ಸಲ ಐಪಿಎಲ್ನಲ್ಲಿ ಆಗಲ್ಲ. ರಾಜಸ್ತಾನ ರಾಯಲ್ಸ್ ಪರ ಪರಾಗ್, ಪರಾಕ್ರಮ ಜೋರಾಗಿದೆ. ಆಡಿರೋ ಮೂರು ಪಂದ್ಯದಲ್ಲೂ ಅಬ್ಬರಿಸಿ ರನ್ ಕೊಳ್ಳೆ ಹೊಡೆದಿದ್ದಾರೆ. 3 ಮ್ಯಾಚ್ಗಳಲ್ಲಿ 160ರ ಸ್ಟ್ರೈಕ್ರೇಟ್ನಲ್ಲಿ 2 ಅರ್ಧಶತಕ ಸಹಿತ 181 ರನ್ ಬಾರಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ 43 ರನ್ ಗಳಿಸಿದ್ದಾರೆ. ಅಲ್ಲಿಗೆ ರಾಯಲ್ಸ್ ಮೂರು ಗೆಲುವಿಗೂ ರಿಯಾನ್ ಕಾಣಿಕೆ ನೀಡಿದ್ದು, ಈ ಸಲ ಅರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ.

ಹೈದ್ರಾಬಾದ್ನಲ್ಲಿ ಅಭಿಷೇಕ್ ಅಬ್ಬರ..!

ಪಂಜಾಬ್ ಆಲ್ರೌಂಡರ್ ಅಭಿಷೇಕ್ ಶರ್ಮಾ, ಸನ್ ರೈಸರ್ಸ್ ಹೈದ್ರಾಬಾದ್ನಲ್ಲಿ ಅಬ್ಬರಿಸುತ್ತಿದ್ದಾರೆ. ಮೂರು ಪಂದ್ಯದಿಂದ ಒಂದು ಅರ್ಧಶತಕ ಸಹಿತ 124 ರನ್ ಹೊಡೆದಿದ್ದಾರೆ. ಅವರ  ಸ್ಟ್ರೈಕ್‌ರೇಟ್ ಬರೋಬ್ಬರಿ 200. ಮೂರು ಮ್ಯಾಚ್ನಲ್ಲೂ ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಭಿಷೇಕ್ ಇನ್ನೂ ಟೀಂ ಇಂಡಿಯಾ ಪರ ಒಂದೂ ಪಂದ್ಯವಾಡಿಲ್ಲ.

ಹರ್ಷಿತ್ ರಾಣಾ ವಿಕೆಟ್ ಬೇಟೆ..!

ಡೆಲ್ಲಿ ಫಾಸ್ಟ್ ಬೌಲರ್ ಹರ್ಷಿತ್ ರಾಣಾ, ಐಪಿಎಲ್ನಲ್ಲಿ ಕೆಕೆಆರ್ ಪರ ಆಡ್ತಿದ್ದಾರೆ. ಕೆಕೆಆರ್ ಎರಡು ಪಂದ್ಯದ ಗೆಲುವಿನಲ್ಲಿ ರಾಣಾ ಪಾತ್ರವಿದೆ. ಎರಡು ಮ್ಯಾಚ್ನಿಂದ ಹರ್ಷಿತ್ 5 ವಿಕೆಟ್ ಪಡೆದಿದ್ದಾರೆ. ಸನ್ ರೈಸರ್ಸ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದು, ಅವರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಇದೇ ರಾಣಾ. ಇಂದು ಡೆಲ್ಲಿ ವಿರುದ್ಧವೂ ಮಿಂಚಲು ರೆಡಿಯಾಗಿದ್ದಾರೆ.

ರಾಜಸ್ಥಾನಕ್ಕೆ ಭಯ ಹುಟ್ಟಿಸಿದ್ದ ಅಕಾಶ್ ಮಧ್ವಾಲ್

ಉತ್ತರಖಾಂಡದ ಆಕಾಶ್ ಮಧ್ವಾಲ್, 2 ಬಾರಿಗೆ ಐಪಿಎಲ್ ಆಡ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಆಕಾಶ್, ಮೊನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಮೂರು ವಿಕೆಟ್ ಪಡೆದು, ಆಘಾತ ನೀಡಿದ್ದರು. ಆದ್ರೆ ಮುಂಬೈ ಕಡಿಮೆ ಸ್ಕೋರ್ ಮಾಡಿದ್ದರಿಂದ ಆಕಾಶ್ ಮ್ಯಾಜಿಕ್ ನಡೆಯಲಿಲ್ಲ. ಆದ್ರೂ ರಾಯಲ್ಸ್ಗೆ ಭಯ ಹುಟ್ಟಿಸಿದ್ರು. ಮೊದಲ ಪಂದ್ಯದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿರುವ ಮಧ್ವಾಲ್, ಉಳಿದ ಪಂದ್ಯದಲ್ಲೂ ಮ್ಯಾಜಿಕ್ ಮಾಡಿದ್ರೆ ಆಶ್ಚರ್ಯವಿಲ್ಲ. ಒಟ್ನಲ್ಲಿ ಸ್ಟಾರ್ ಪ್ಲೇಯರ್ಗಳಿಗಿಂತ ಯಂಗ್ ಪ್ಲೇಯರ್ಸ್ ಐಪಿಎಲ್ನಲ್ಲಿ ಡೇಂಜರ್ ಆಗಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!