ಈ ಬಾರಿಯೂ ರಿಪೀಟ್ ಆಗುತ್ತಾ ಇತಿಹಾಸ..! ಕಮ್‌ಬ್ಯಾಕ್ ಮಾಡೋದ್ರಲ್ಲಿ ಮುಂಬೈ ಎತ್ತಿದ ಕೈ..!

By Contributor Asianet  |  First Published Apr 3, 2024, 12:13 PM IST

ರೋಹಿತ್ ಶರ್ಮಾರ ಅಭಿಮಾನಿಗಳಂತೂ, ಪಾಂಡ್ಯರನ್ನ ಬಿಡದೇ ಕಾಡ್ತಿದ್ದಾರೆ. ಟಾಸ್ ವೇಳೆ ಪಾಂಡ್ಯ ವಿರುದ್ಧವಾಗಿ ಘೋಷಣೆ ಕೂಗುತ್ತಿದ್ದಾರೆ. ತವರಿನ ಪಂದ್ಯದಲ್ಲೂ ಹಾರ್ದಿಕ್ಗೆ ವಿರೋಧ ತಪ್ಪಲಿಲ್ಲ. ಪಂದ್ಯ ನಡೆಯುವಾಗಲೂ ಪಾಂಡ್ಯ ವಿರುದ್ಧ ಘೋಷಣೆಗಳು ಮೊಳಗಿದ್ವು. ಆದ್ರೆ, ಈ ವೇಳೆ ರೋಹಿತ್, ಹಾಗೆಲ್ಲಾ ಕೂಗಬೇಡಿ ಅಂತ ಸನ್ನೆ ಮಾಡುವ ಮೂಲಕ ಅಭಿಮಾನಿಗಳನ್ನ ಸುಮ್ಮನಿರಿಸಿದ್ರು.


ಬೆಂಗಳೂರು(ಏ.03): ಸಮರದಲ್ಲಿ ಮುಂಬೈ ಇಂಡಿಯನ್ಸ್ ಸೋಲಿನ ಸುಳಿಗೆ ಸಿಲುಕಿದೆ. ಗೆಲುವಿನ ಖಾತೆ ತೆರೆಯಲಾಗದೇ ಒದ್ದಾಡ್ತಿದೆ. ಹಾಗಂತ, ಈ ಬಾರಿ  ಮುಂಬೈ ಕಥೆ ಮುಗೀತು ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಈ ಹಿಂದಿನ ಕೆಲ ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ ಸೋಲಿನ ಸುಳಿಯಿಂದ ಫಿನಿಕ್ಸ್‌ನಂತೆ ಎದ್ದು ಬಂದಿತ್ತು. ಚಾಂಪಿಯನ್ಸ್ ಪಟ್ಟವನ್ನೂ ಅಲಂಕರಿಸಿತ್ತು.

ಹಾರ್ದಿಕ್ ಕ್ಯಾಪ್ಟನ್ಸಿ ವಿರುದ್ಧ ಫ್ಯಾನ್ಸ್ ಆಕ್ರೋಶ..! 

Tap to resize

Latest Videos

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫ್ಲಾಪ್ ಶೋ ಮುಂದುವರಿದಿದೆ. ತವರಿನ ಅಂಗಳದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಅಂಬಾನಿ ಬ್ರಿಗೇಡ್ ಮಕಾಡೆ ಮಲಗಿದೆ. ಆ ಮೂಲಕ ಸತತ ಮೂರನೇ ಸೋಲು ಕಂಡಿದೆ. ಇದ್ರಿಂದ ಮುಂಬೈ ಫ್ಯಾನ್ಸ್, ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಸೋಲಿಗೆ ಹಾರ್ದಿಕ್ ಪಾಂಡ್ಯ ಅವ್ರ ಕಳಪೆ ನಾಯಕತ್ವವೇ ಕಾರಣ ಅಂತ ಕಿಡಿಕಾರ್ತಿದ್ದಾರೆ.

IPL 2024: ಕೆಕೆಆರ್ ಚಾಲೆಂಜ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ರೆಡಿ

ರೋಹಿತ್ ಶರ್ಮಾರ ಅಭಿಮಾನಿಗಳಂತೂ, ಪಾಂಡ್ಯರನ್ನ ಬಿಡದೇ ಕಾಡ್ತಿದ್ದಾರೆ. ಟಾಸ್ ವೇಳೆ ಪಾಂಡ್ಯ ವಿರುದ್ಧವಾಗಿ ಘೋಷಣೆ ಕೂಗುತ್ತಿದ್ದಾರೆ. ತವರಿನ ಪಂದ್ಯದಲ್ಲೂ ಹಾರ್ದಿಕ್ಗೆ ವಿರೋಧ ತಪ್ಪಲಿಲ್ಲ. ಪಂದ್ಯ ನಡೆಯುವಾಗಲೂ ಪಾಂಡ್ಯ ವಿರುದ್ಧ ಘೋಷಣೆಗಳು ಮೊಳಗಿದ್ವು. ಆದ್ರೆ, ಈ ವೇಳೆ ರೋಹಿತ್, ಹಾಗೆಲ್ಲಾ ಕೂಗಬೇಡಿ ಅಂತ ಸನ್ನೆ ಮಾಡುವ ಮೂಲಕ ಅಭಿಮಾನಿಗಳನ್ನ ಸುಮ್ಮನಿರಿಸಿದ್ರು.

ಈ ಬಾರಿಯೂ ರಿಪೀಟ್ ಆಗುತ್ತಾ ಇತಿಹಾಸ..! 

ಯೆಸ್, ಮುಂಬೈ ಸದ್ಯ ಸೋಲಿನ ಸುಳಿಗೆ ಸಿಲುಕಿದೆ. ಹಾಗಂತ ಈ ಬಾರಿ ಅದರ ಕಥೆ ಮುಗೀತು ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಈ ಹಿಂದಿನ ಕೆಲ ಸೀಸನ್ಗಳಲ್ಲಿ ಮುಂಬೈ ಸೋಲಿನ ಸುಳಿಯಿಂದ ಫೀನಿಕ್ಸ್ನಂತೆ ಎದ್ದು ಬಂದಿತ್ತು. ಅಲ್ಲದೇ, ಚಾಂಪಿಯನ್ಸ್ ಪಟ್ಟವನ್ನೂ ಅಲಂಕರಿಸಿತ್ತು. 2015ರಲ್ಲೂ ಹ್ಯಾಟ್ರಿಕ್ ಸೋಲು ಕಂಡರೂ, ಕಪ್ ಎತ್ತಿಹಿಡಿದಿತ್ತು. 

IPL 2024 : ಮಯಾಂಕ್‌ ಯಾದವ್‌ ವೇಗಕ್ಕೆ ತತ್ತರಿಸಿದ ಆರ್‌ಸಿಬಿಗೆ 28 ರನ್‌ ಸೋಲು

ಇನ್ನು 2013ರಿಂದ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಗೆದ್ದಿಲ್ಲ. 2012ರಲ್ಲಿ ಅಂಬಾನಿ ಪಡೆ ಮೊದಲ ಪಂದ್ಯ ಗೆದ್ದಿತ್ತು. ಅದೇ ಲಾಸ್ಟ್. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಮುಂಬೈ ಇಂಡಿಯನ್ಸ್,  ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದೆ. ಇದ್ರಲ್ಲಿ 3 ಬಾರಿ RCBಗೆ ಶರಣಾಗಿದೆ. 2015, 2017. 2019, 2020ರಲ್ಲಿ ಮುಂಬೈ ಫಸ್ಟ್ ಮ್ಯಾಚಲ್ಲಿ ಸೋಲು ಕಂಡಿತ್ತು. ಆದ್ರೆ, ಈ ಐದು ಸೀಸನ್‌ನಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಕಮ್‌ಬ್ಯಾಕ್ ಮಾಡೋದ್ರಲ್ಲಿ ಮುಂಬೈ ಎತ್ತಿದ ಕೈ..!

ಯೆಸ್, ಆಗ್ಲೇ ಹೇಳಿದಂತೆ ಮುಂಬೈ ಪಡೆಯಯನ್ನ ಲೈಟ್ ಅಗಿ ತೆಗೆದುಕೊಳ್ಳುವಂತಿಲ್ಲ. ಇತಿಹಾಸವೂ ಮುಂಬೈ ಪರವಾಗಿದೆ. ಆದ್ರೆ, ಹಿಂದಿನ ಐದು ಸೀಸನ್‌ಗಳ ಮ್ಯಾಜಿಕ್, ಈ ಬಾರಿ ರಿಪೀಟ್ ಆಗುತ್ತೆ ಅಂತ ಹೇಳೋದು ಕಷ್ಟ. ಸದ್ಯ ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ. ತಂಡ ಎರಡು ಎರಡು ಬಣಗಳಾಗಿ ಒಡೆದು ಹೋಗಿದೆ. ಮತ್ತೊಂದೆಡೆ ಹಾರ್ದಿಕ್ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನ ಕೈಗೊಳ್ತಿದ್ದಾರೆ. ಆದ್ರೆ, ಈ ಎಲ್ಲಾ ಸಮಸ್ಯೆಗಳನ್ನ ಪರಿಹರಿಸಿಕೊಂಡ್ರೆ, 6ನೇ ಬಾರಿ ಮುಂಬೈ ಕಪ್ ಗೆದ್ರು ಅಚ್ಚರಿ ಇಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!