ಸಂಭ್ರಮ ಯಾತ್ರೆಯಲ್ಲಿ ಕೊಹ್ಲಿ ಟ್ರೋಫಿ ನೀಡುತ್ತಿದ್ದಂತೆ ಭಾವುಕರಾದ ರಿಷಬ್ ಪಂತ್!

By Chethan Kumar  |  First Published Jul 5, 2024, 9:48 AM IST

ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ಆಗಮಿಸಿದ ಟೀಂ ಇಂಡಿಯಾಗೆ ಮುಂಬೈನಲ್ಲಿ ಭರ್ಜರಿ ಸನ್ಮಾನ ಆತಿಥ್ಯ ದೊರಕಿದೆ . ಕಿಕ್ಕಿರಿದು ತುಂಬಿದ ಜನಸಾಗರದಲ್ಲಿ ವಿಜಯಯಾತ್ರೆ ನಡೆಸಿದ. ವಾಂಖೆಡೆ ಕ್ರೀಡಾಂಗಣದಲ್ಲಿ ವಿಕ್ಟರ್ ಲ್ಯಾಪ್ ವೇಳೆ ಕೊಹ್ಲಿ ಟ್ರೋಫಿಯನ್ನು ರಿಷಬ್ ಕೈಗೆ ನೀಡಿದ್ದಾರೆ. ಈ ವೇಳೆ ಭಾವುಕರಾದ ಪಂತ್, ಟ್ರೋಫಿಯೊಂದಿ ಕುಣಿದಾಡಿದ್ದಾರೆ.


ಮುಂಬೈ(ಜು.05) ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿ ತವರಿನಲ್ಲಿ ಅದ್ಧೂರಿ ವಿಜಯ ಯಾತ್ರೆ ನಡೆಸಿದೆ. ಟ್ರೋಫಿಯೊಂದಿಗೆ ತವರಿಗೆ ಆಗಮಿಸಿದ ಟೀಂ ಇಂಡಿಯಾ ಮುಂಬೈನ ಮರಿನ್ ಡ್ರೈವ್‌ನಲ್ಲಿ ಅದ್ಧೂರಿ ವಿಜಯ ಯಾತ್ರೆ ಕ್ಕಿಕಿರಿದು ಜನ ಸೇರಿದ್ದರು. ಇದಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದೊಳಗೆ ಟೀಂ ಇಂಡಿಯಾಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದ ಸುತ್ತ ವಿಕ್ಟರ್ ಲ್ಯಾಪ್ ಮಾಡಿದ್ದಾರೆ. ಈ ವೇಳೆ ಟ್ರೋಫಿಯೊಂದಿಗೆ ಸಂಭ್ರಮಿಸುತ್ತಿದ್ದ ವಿರಾಟ್ ಕೊಹ್ಲಿ ಬಳಿಕ ಟ್ರೋಫಿಯನ್ನು ರಿಷಬ್ ಪಂತ್ ಕೈಗೆ ನೀಡಿದ್ದಾರೆ. ಈ ವೇಳೆ ಭಾವುಕರಾದ ಪಂತ್, ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ಟ್ರೋಫಿ ಹಿಡಿದುಕೊಂಡು ಮೈದಾನ ಸುತ್ತ ವಿಕ್ಟರಿ ಪರೇಡ್ ನಡೆಸಿದ್ದಾರೆ. ಈ ವೇಳೆ ಮಾತು ತುಜೆ ಸಲಾಂ ಹಾಡನ್ನು ಹಾಡುತ್ತಾ, ಅಭಿಮಾನಿಗಳ ಕೈಬೀಸುತ್ತಾ ಸಾಗಿಸಿದ್ದಾರೆ. ಒಬ್ಬೊಬ್ಬ ಕ್ರಿಕೆಟಿಗರು ಟ್ರೋಫಿ ಎತ್ತಿ ಹಿಡಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಟ್ರೋಫಿಯೊಂದಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ ಬಳಿಕ ರಿಷಬ್ ಪಂತ್‌ಗೆ ನೀಡಿದ್ದಾರೆ. ಟ್ರೋಫಿ ಪಡೆಯುವಾಗ ಭಾವುಕರಾದ ಪಂತ್, ಬಳಿಕ ಕುಣಿದಾಡಿದ್ದಾರೆ. ಟ್ರೋಫಿ ನೀಡಿ ಪಂತ್ ಬಳಿ ಇದ್ದ ತಿರಂಗ ಪಡೆದು ಕೊಹ್ಲಿ ಮತ್ತೆ ವಿಕ್ಟರಿ ಪರೇಡ್ ಮುಂದುವರಿಸಿದ್ದಾರೆ. 

Tap to resize

Latest Videos

undefined

News Hour: ವಿಶ್ವ ವಿಜೇತರಿಗೆ ತವರಲ್ಲಿ ಅದ್ದೂರಿ ಸ್ವಾಗತ, ವಿಜಯಯಾತ್ರೆಗೆ ಸೇರಿದ ಜನಸಾಗರ!

ವಾಂಖೆಡೆ ಕ್ರೀಡಾಂಗಣ ಬಳಿಕ ಮುಂಬೈನ ಮರೀನ್ ಡ್ರೈವ್ ರಸ್ತೆಯಲ್ಲಿ ಅದ್ಧೂರಿ ರೋಡ್ ಶೋ ನಡೆಸಿದೆ. ತೆರೆದ ವಾಹನದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಗೆಲುವಿನ ವಿಜಯಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರೂ ಟೀಂ ಇಂಡಿಯಾ ಅಭಿಮಾನಿಗಳೇ ತುಂಬಿದ್ದರು. ಕಟ್ಟಡ, ಮರಗಳನ್ನು ಏರಿದ್ದ ಫ್ಯಾನ್ಸ್, ಟೀಂ ಇಂಡಿಯಾಗೆ ಶುಭ ಹಾರೈಸಿದ್ದರು. ಭಾರಿ ಮಳೆ ಸುರಿಯುತ್ತಿದ್ದರೂ ಅಭಿಮಾನಿಗಳು ಯಾವುದನ್ನೂ ಲೆಕ್ಕಿಸಿದೇ ಸೇರಿದ್ದರು. 

 

 

ಜೂನ್ 4 ರಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ ಟೀಂ ಇಂಡಿಯಾ ಬೆಳಗ್ಗೆ ಪ್ರದಾನಿ ನರೇಂದ್ರ ಮೋದಿ ನಿವಾಸಕ್ಕೆ ತೆರಳಿತ್ತು. ಪ್ರಧಾನಿ ಮೋದಿ ಜೊತೆ ಉಪಹಾರ ಸವಿದ ಟೀಂ ಇಂಡಿಯಾ ಕ್ರಿಕೆಟಿಗರು ಸಂವಾದ ನಡೆಸಿದರು. ಈ ವೇಳೆ ಮೋದಿ ಹಲವು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರರ ಜೊತೆ ಮಾತನಾಡಿದ ಮೋದಿ, ಎಲ್ಲರಿಗೂ ಶುಭ ಹಾರೈಸಿದ್ದರು.

ಟೀಮ್‌ ಇಂಡಿಯಾ ಪ್ಲೇಯರ್ಸ್‌ಗೆ 125 ಕೋಟಿ ರೂಪಾಯಿ ಚೆಕ್‌ ನೀಡಿದ ಬಿಸಿಸಿಐ
 

click me!