ರಿಷಭ್‌ ಪಂತ್​ರಿಂದ ಆಸ್ಟ್ರೇಲಿಯಾಗೆ ಸಾವಿರಾರು ಕೋಟಿ ಲಾಭ...?

By Suvarna NewsFirst Published Jul 26, 2022, 2:53 PM IST
Highlights

ರಿಷಭ್ ಪಂತ್ ಆಡಿದ ಒಂದು ಇನಿಂಗ್ಸ್‌ನಿಂದ ಕ್ರಿಕೆಟ್‌ ಆಸ್ಟ್ರೇಲಿಯಾಗೆ ಸಾವಿರಾರು ಕೋಟಿ ಲಾಭ
ಟಿವಿ ರೈಟ್ಸ್​ನಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ 2 ಸಾವಿರ ಕೋಟಿ ರುಪಾಯಿ
ರಿಷಭ್ ಪಂತ್​ ಅವರ ಗಾಬಾ ಇನ್ನಿಂಗ್ಸ್​ಗೆ ಕ್ರಿಕೆಟ್ ಫ್ಯಾನ್ಸ್ ಫಿದಾ

ಸಿಡ್ನಿ(ಜು.26): ರಿಷಭ್ ಪಂತ್​. ಟೆಸ್ಟ್​ನಲ್ಲಿ 5 ಶತಕ ಹೊಡೆದಿದ್ದರೂ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಸೆಂಚುರಿ ಸಿಡಿಸಿ ಭಾರತಕ್ಕೆ ಏಕದಿನ ಸರಣಿ ಗೆಲ್ಲಿಸಿಕೊಟ್ಟ ನಂತರವಷ್ಟೇ ಅವರು ಭಾರತದ ಸ್ಟಾರ್ ಪ್ಲೇಯರ್ಸ್ ಲಿಸ್ಟ್​ಗೆ ಸೇರಿರೋದು. ಇತ್ತೀಚೆಗಂತೂ ಇತರೆ ಭಾರತೀಯ ಸ್ಟಾರ್ ಆಟಗಾರರಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ್ದಾರೆ. ಪಂತ್ ಬ್ಯಾಟ್ ಹಿಡಿದು ಕ್ರೀಸಿಗಿಳಿದ್ರೆ ಒಂದಲ್ಲ ಒಂದು ರೆಕಾರ್ಡ್​ ಬ್ರೇಕ್ ಮಾಡಿಯೇ ಮಾಡ್ತಾರೆ. ಇಂಥಹ ಸ್ಟಾರ್ ಪ್ಲೇಯರ್​ನಿಂದ ಬಿಸಿಸಿಐಗೆ ಲಾಭವಾಗಬೇಕು. ಆದ್ರೆ ರಿಷಭ್ ಪಂತ್​ರಿಂದ ಸಾವಿರಾರು ಕೋಟಿ ಲಾಭ ಮಾಡಿಕೊಂಡಿದ್ದು ಮಾತ್ರ ಕ್ರಿಕೆಟ್ ಆಸ್ಟ್ರೇಲಿಯಾ. ಇದು ಆಶ್ಚರ್ಯವಾದ್ರೂ ನಿಜ.

ಟಿವಿ ರೈಟ್ಸ್​ನಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ 2 ಸಾವಿರ ಕೋಟಿ ರುಪಾಯಿ: 

ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾ ತಾನು ಆತಿಥ್ಯ ವಹಿಸುವ ಟೂರ್ನಿಗಳ ಟಿವಿ ರೈಟ್ಸ್ ಮಾರಾಟಕ್ಕೆ ಬಿಡ್ಡಿಂಗ್ ಕರೆದಿತ್ತು. 7 ವರ್ಷಗಳ ಅವಧಿಗೆ ಆಸ್ಟ್ರೇಲಿಯಾ ಪಂದ್ಯಗಳ ಮಾಧ್ಯಮ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಬರೋಬ್ಬರಿ 2 ಸಾವಿರ ಕೋಟಿ ರುಪಾಯಿಗೆ ಖರೀದಿಸಿದೆ. ಅದು ಏಷ್ಯಾ ರಾಷ್ಟ್ರಗಳಲ್ಲಿ ನೇರ ಪ್ರಸಾರ ಮಾಡಲು ಮಾತ್ರ. ಕಾಂಗರೂಗಳ ಪಂದ್ಯಗಳಿಗೆ ಇಷ್ಟು ಮೊತ್ತದ ಹಣ ನೀಡಿ ಖರೀದಿಸಲು ಕಾರಣ ರಿಷಭ್ ಪಂತ್​ ಅವರ ಗಾಬಾ ಇನ್ನಿಂಗ್ಸ್. 

ರಿಷಭ್ ಪಂತ್​ ಅವರ ಗಾಬಾ ಇನ್ನಿಂಗ್ಸ್​ಗೆ ಕ್ರಿಕೆಟ್ ಫ್ಯಾನ್ಸ್ ಫಿದಾ: 

ಕಳೆದ ವರ್ಷ ಆಸ್ಟ್ರೇಲಿಯಾ ಟೂರ್​ಗೆ ಹೋಗಿದ್ದ ಟೀಂ ಇಂಡಿಯಾ 2-1ರಿಂದ ಟೆಸ್ಟ್ ಸರಣಿ ಗೆದ್ದುಕೊಂಡು ಬಂದಿತ್ತು. 4ನೇ ಹಾಗೂ ಕೊನೆ ಟೆಸ್ಟ್​ನಲ್ಲಿ ಗೆಲುವಿಗೆ 328 ರನ್ ಬೆನ್ನಟ್ಟಿದ್ದ ಭಾರತ, 7 ವಿಕೆಟ್​ಗಳಿಂದ ರೋಚಕ ಜಯ ಸಾಧಿಸಿತ್ತು. ಅದಕ್ಕೆ ಕಾರಣ ರಿಷಭ್ ಪಂತ್. ಹೌದು, ಅಂದು ಪಂತ್ ಅಜೇಯ 89 ರನ್ ಸಿಡಿಸಿ, ಗೆಲುವಿನ ರೂವಾರಿಯಾಗಿದ್ದರು. ಟೀಂ ಇಂಡಿಯಾ ಸತತ 2ನೇ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಭಾರತದ ವಿಶ್ವಕಪ್‌ ಸೋಲಿಗೆ ಸ್ಪೋಟಕ ಕಾರಣ ಬಿಚ್ಚಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ

ಟೆಸ್ಟ್ ಕ್ರಿಕೆಟ್​ನಲ್ಲಿ 328 ರನ್ ಟಾರ್ಗೆಟ್ ಬೆನ್ನಟ್ಟಿ ಗೆಲ್ಲುವುದು ಸುಲಭಲ್ಲ. ಅದು ಐದಾರು ಮಂದಿ ಸ್ಟಾರ್ ಪ್ಲೇಯರ್ಸ್ ಅನುಪಸ್ಥಿತಿಯಲ್ಲಿ. ಅಂದು ರಿಷಭ್ ಪಂತ್ ಅವರ ಅಜೇಯ 89 ರನ್​ಗಳ ಭರ್ಜರಿ ಬ್ಯಾಟಿಂಗ್​ ಅನ್ನು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಟಿವಿಯಲ್ಲಿ ವೀಕ್ಷಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾ ಪಂದ್ಯಗಳ ವಾಲ್ಯೂ ಕೂಡ ಹೆಚ್ಚಾಗಿತ್ತು. ಇದೇ ಕಾರಣದಿಂದಾಗಿ ಈ ಬಾರಿ ಆಸ್ಟ್ರೇಲಿಯಾ ಪಂದ್ಯಗಳ ಟಿವಿ ರೈಟ್ಸ್​​ ಪಡೆಯಲು ಭಾರಿ ಪೈಪೋಟಿ ಏರ್ಪಟ್ಟಿತ್ತು.

ಮುಂದಿನ 7 ವರ್ಷಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಹಲವು ಸರಣಿ ಆಡಲಿದೆ. ಹಾಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಪಂದ್ಯಗಳನ್ನ ನೇರ ಪ್ರಸಾರ ಮಾಡಲು ಡಿಸ್ನಿ ಸ್ಟಾರ್ 2 ಸಾವಿರ ಕೋಟಿ ಕೊಟ್ಟು ಖರೀದಿಸಿರುವುದು. ನಿರೀಕ್ಷೆಗೂ ಮೀರಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಇಷ್ಟು ಹಣ ಬಂದಿರುವುದು ರಿಷಭ್ ಪಂತ್ ಗಾಬಾದಲ್ಲಿ ಆಡಿದ ಆ ಒಂದು ಇನಿಂಗ್ಸ್​ನಿಂದ ಎಂದು ಹೇಳಲಾಗ್ತಿದೆ. ಒಟ್ನಲ್ಲಿ ಸಾವಿರಾರು ಕೋಟಿ ಲಾಭ ಮಾಡಿಕೊಂಡಿರುವ ಆಸ್ಟ್ರೇಲಿಯಾ ಪಾಲಿಗೆ ಪಂತ್ ​ಅದೃಷ್ಟವಂತ ಆಟಗಾರ.

click me!