ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯ ಮತ್ತೊಂದು ಮುಖ ಅನಾವರಣ
ಧೋನಿ, ಕೂಲ್ ಕ್ಯಾಪ್ಟನ್ ಅಲ್ಲವೇ ಅಲ್ಲ ಎಂದು ಅನುಭವಿ ವೇಗಿ
ಧೋನಿ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ರಿವಿಲ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ
ಬೆಂಗಳೂರು(ಜು.07) ಮಹೇಂದ್ರ ಸಿಂಗ್ ಧೋನಿ..! ಕ್ರಿಕೆಟ್ ಜಗತ್ತು ಕಂಡ ಸಖತ್ ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್. ಪಂದ್ಯದ ವೇಳೆ ಧೋನಿ ತಾಳ್ಮೆ ಕಳೆದುಕೊಂಡು, ಸಹ ಆಟಗಾರರ ಮೇಲೆ ರೇಗಾಡಿದ್ದು, ಕೂಗಾಡಿದ್ದು ತುಂಬಾನೇ ಕಡಿಮೆ. ಪಂದ್ಯ ಕೈ ಜಾರಿ ಹೋಗ್ತಿದ್ರು ಧೋನಿ ಟೆನ್ಷನ್ ಮಾಡಿಕೊಳ್ಳದೇ, ಗೇಮ್ಪ್ಲಾನ್ ರೂಪಿಸ್ತಾರೆ. ಆದ್ರೆ, ಟೀಂ ಇಂಡಿಯಾ ಆಟಗಾರನೇ, ಧೋನಿ ಕೂಲ್ ಕ್ಯಾಪ್ಟನ್ ಅಲ್ಲ. ಧೋನಿ ಸಹ ಆಟಗಾರರಿಗೆ ಮನಬಂದಂತೆ ಬೈತಾರೆ ಅಂತ ಹೇಳಿದ್ದಾರೆ.
ಯೆಸ್, ಟೀಂ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ಸಂದರ್ಶನವೊಂದರಲ್ಲಿ ಧೋನಿ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ರಿವಿಲ್ ಮಾಡಿದ್ದಾರೆ. ಇದರಲ್ಲಿ ಧೋನಿ ಕೂಲ್ ಕ್ಯಾಪ್ಟನ್ ಅಲ್ಲ ಎಂದಿದ್ದಾರೆ. ಇನ್ನು ಒಮ್ಮೆ ಇಶಾಂತ್, ಟೆಸ್ಟ್ ಪಂದ್ಯವೊಂದರಲ್ಲಿ ಧೋನಿಗೆ ಮಾಹಿ ಭಾಯ್ ನಾನು ಬೌಲಿಂಗ್ ಮಾಡಲ್ಲ, ಸಾಕಾಗಿದೆ ಅಂತ ಹೇಳಿದ್ರಂತೆ. ಅದಕ್ಕೆ ಧೋನಿ ನಿನಗೆ ವಯಸ್ಸಾಗಿದೆ ರಿಟೈರ್ ಆಗ್ಬಿಡು ಅಂತ ಹೇಳಿದ್ರಂತೆ.
undefined
ಮನೀಷ್ ಪಾಂಡೆಗೆ ಬೈದಿದ್ದ ಮಹಿ..!
ಯೆಸ್, ಧೋನಿ ಹಲವು ಬಾರಿ ಪಂದ್ಯದ ವೇಳೆ ತಮ್ಮ ಅಗ್ರೆಸಿವ್ನೆಸ್ ತೊರಿಸಿದ್ದಾರೆ. ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಆಟಗಾರರ ಮೇಲೆ ರೇಗಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ, ಮನೀಷ್ ಪಾಂಡೆಗೆ ಹಿಂದಿಯಲ್ಲಿ ಬೈದಿದ್ರು. ಬ್ಯಾಟಿಂಗ್ ವೇಳೆ ನಾನ್ಸ್ಟ್ರೈಕ್ನಲ್ಲಿದ್ದ ಮನೀಷ್, ಬೇರೆ ಕಡೆ ನೋಡ್ತಿದ್ದಾಗ ಧೋನಿ BSDK ಅಲ್ಲೆಲ್ಲೋ ಏನ್ ನೋಡ್ತಿಯಾ, ಇಲ್ಲಿ ನೋಡು ಅಂತ ಬೈದಿದ್ರು.
MS DHONI loses his cool in the middle of a match and abuses Manish Pandey! Angry https://t.co/LnKcm8BBII
— PoutStation.com (@PoutStation)MS Dhoni @42: ಕ್ಯಾಪ್ಟನ್ ಕೂಲ್ ಧೋನಿಗೆ ಶುಭಕೋರಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರವೀಂದ್ರ ಜಡೇಜಾ..!
ಆಟಗಾರರ ಮೇಲಷ್ಟೇ ಅಲ್ಲ, ಧೋನಿ ಆನ್ಫೀಲ್ಡ್ನಲ್ಲಿ ಅಂಪೈರ್ಸ್ ಮೇಲೂ ಕೋಪ ಮಾಡಿಕೊಂಡಿದ್ದಾರೆ. IPL 12ರ ಸೀಸನ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಧೋನಿ ಅಂಪೈರ್ನ ತೀರ್ಪನ್ನ ಧಿಕ್ಕರಿಸಿದ್ರು. ನೋ ಬಾಲ್ ನೀಡಲಿಲ್ಲವೆಂದು ಡಗೌಟ್ನಿಂದ ಮೈದಾನಕ್ಕೆ ನುಗ್ಗಿ ಅಂಪೈರ್ಗಳ ಜೊತೆ ಜಗಳಕ್ಕಿಳಿದಿದ್ರು.
ಈ ಬಾರಿಯ IPLನಲ್ಲೂ ಧೋನಿ ಅಂಪೈರ್ಗಳ ಜೊತೆ ವಾಗ್ವಾದಕ್ಕಿಳಿದಿದ್ರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ CSK ವೇಗಿ ಮತಿಶಾ ಪತಿರಾನಾ ರೂಲ್ಸ್ ಬ್ರೇಕ್ ಮಾಡಿದ್ರು. ಹೀಗಾಗಿ ಆತನಿಂತ ಬೌಲಿಂಗ್ ಮಾಡಿಸಲು ಅಂಪೈರ್ಸ್ ಒಪ್ಪಲಿಲ್ಲ. ಇದರಿಂದ ಧೋನಿ ಕೆರಳಿದ್ರು, ಅಂಪೈರ್ಗಳ ವಿರುದ್ಧ ಜಗಳಕ್ಕಿಳಿದಿದ್ರು.
ಅದೇನೆ ಇರಲಿ ಧೋನಿ ಕೂಲ್ ಕ್ಯಾಪ್ಟನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಧೋನಿಯು ಕೆಲವೊಮ್ಮೆ ರಾಂಗ್ ಆಗಿದ್ದಾರೆ. ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ. ಯಾಕಂದ್ರೆ ಎಷ್ಟೇ ಕೂಲ್ ಆದ್ರು, ಧೋನಿಯು ಮನುಷ್ಯನೇ ಅಲ್ವಾ..?